ಅಮರನಾಥ ಯಾತ್ರೆ ಭದ್ರತೆಗಾಗಿ ಟ್ರಕ್ ಗಳಿಗೆ ತಡೆ: ಬಾರಾಮುಲ್ಲಾ ಜಿಲ್ಲೆಯಲ್ಲಿ ಹಣ್ಣು ವ್ಯಾಪಾರಿಗಳ ಪ್ರತಿಭಟನೆ

ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶವಾದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್ ನ ಮಾರುಕಟ್ಟೆಯಲ್ಲಿ ಹಣ್ಣು ಬೆಳೆಗಾರರು ಮತ್ತು ವಿತರಕರು ಶನಿವಾರ ಪ್ರತಿಭಟನೆ ನಡೆಸಿದರು.
ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಗಳಿಗೆ ತಡೆ
ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಗಳಿಗೆ ತಡೆ

ಬಾರಾಮುಲ್ಲ: ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶವಾದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್ ನ ಮಾರುಕಟ್ಟೆಯಲ್ಲಿ ಹಣ್ಣು ಬೆಳೆಗಾರರು ಮತ್ತು ವಿತರಕರು ಶನಿವಾರ ಪ್ರತಿಭಟನೆ ನಡೆಸಿದರು.

ಅಮರನಾಥ ಯಾತ್ರೆಯ ದೃಷ್ಟಿಯಿಂದ ಭದ್ರತಾ ಕ್ರಮಗಳನ್ನು ಹೆಚ್ಚಿಸಿರುವುದರಿಂದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಣ್ಣುಗಳನ್ನು ತುಂಬಿದ ಟ್ರಕ್‌ಗಳನ್ನು ತಡೆಹಿಡಿಯಲಾಗಿದೆ ಎಂದು ಹಣ್ಣು ಬೆಳೆಗಾರರು ಮತ್ತು ವಿತರಕರು ಪ್ರತಿಭಟನೆ ನಡೆಸಿದರು ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.

ವಿವಿಧ ಹಣ್ಣುಗಳಾದ ಪ್ಲಮ್, ಏಪ್ರಿಕಾಟ್, ಪೀಚ್, ಪೇರಳೆ ಮತ್ತು ಹಜರತ್ಬಲಿ ಸೇಬುಗಳು ಕಮ್ಮಿ ಅವಧಿಯ ತಾಳಿಕೆ ಹೊಂದಿದ್ದು, ಈ ಎಲ್ಲಾ ಹಣ್ಣುಗಳು ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರದ ಹೊರಗಿನ ಮಂಡಿಗಳನ್ನು ತಲುಪಬೇಕು. ಇಲ್ಲದಿದ್ದರೆ ಭಾರಿ ಆರ್ಥಿಕ ನಷ್ಟವಾಗುತ್ತದೆ ಎಂದು ಬೆಳೆಗಾರರು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

ಅಮರನಾಥ ಯಾತ್ರಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ದೇಶದ ಇತರ ಭಾಗಗಳಿಗೆ ಹಣ್ಣುಗಳನ್ನು ಸಾಗಿಸುವ ಟ್ರಕ್ ಚಾಲಕರನ್ನು ಹೆದ್ದಾರಿಯಲ್ಲಿ ನಿಲ್ಲಿಸಲಾಗಿದ್ದು, ಬೆಳೆಗಾರರು ಮತ್ತು ವಿತರಕರಿಗೆ ನಷ್ಟವಾಗುತ್ತಿದೆ ಎಂದು ಫ್ರೂಟ್ ಅಸೋಸಿಯೇಶನ್ ಆಪಲ್ ಟೌನ್ ಸೊಪೋರ್ ಅಧ್ಯಕ್ಷ ಫಯಾಜ್ ಅಹ್ಮದ್ ಮಲಿಕ್ ಆರೋಪ ಮಾಡಿದ್ದಾರೆ.

ಅಮರನಾಥ ಯಾತ್ರಿಕರನ್ನು ನಾವು ಸ್ವಾಗತಿಸುತ್ತೇವೆ. ಆದರೆ ಸ್ಥಗಿತಗೊಂಡ ಸಾರಿಗೆಯನ್ನು ವಿಸ್ತರಿಸಲು ಆಡಳಿತವು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದರಿಂದಾಗಿ ತಾಜಾ ಹಣ್ಣುಗಳನ್ನು ತುಂಬಿದ ಟ್ರಕ್‌ಗಳು ಸಮಯಕ್ಕೆ ಜನರಿಗೆ ತಲುಪಿಸಬಹುದು ಎಂದು ಮಲಿಕ್ ಹೇಳಿದ್ದಾರೆ.

ಪ್ರತಿದಿನ ಜಮ್ಮು ಮತ್ತು ಕಾಶ್ಮೀರದಿಂದ ನೂರಕ್ಕೂ ಹೆಚ್ಚು ಟ್ರಕ್‌ಗಳನ್ನು ಕಳುಹಿಸಲಾಗುತ್ತಿದ್ದು, ಹೆದ್ದಾರಿಯಲ್ಲಿಯೇ ನಿಲ್ಲಿಸಲಾಗುತ್ತಿದೆ. ಇದರಿಂದಾಗಿ ಚಾಲಕರು ಮಂಡಿಗಳಿಂದ ಹಣ್ಣುಗಳನ್ನು ಎತ್ತಲು ನಿರಾಕರಿಸುತ್ತಿದ್ದಾರೆ, ಇದರಿಂದ ಬೆಳೆಗಾರರಿಗೆ ಭಾರಿ ನಷ್ಟ ಉಂಟಾಗಿದೆ ಎಂದು ಫಯಾಜ್ ಅಹ್ಮದ್ ಹೇಳಿದರು.

ಈ ಮಧ್ಯೆ, ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮಾತನಾಡಿ, ಎಲ್ಲಾ ಹಣ್ಣು ಪೂರೈಕೆದಾರರು ಭಾರಿ ನಷ್ಟವನ್ನು ಅನುಭವಿಸುತ್ತಿದ್ದಾರೆ ಎಂದರು. ಇನ್ನು ಪ್ರತಿಭಟನಾನಿರತ ರೈತರು “ಈ ಕುರಿತು ಉನ್ನತ ಅಧಿಕಾರಿಗಳ ಗಮನಕ್ಕೆ ತಂದರೂ ಸರಿಪಡಿಸುವಲ್ಲಿ ವಿಫಲರಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. “ನಾವು ಈಗ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಪತ್ರ ಬರೆದಿದ್ದೇವೆ. ಸಮಸ್ಯೆಯನ್ನು ಪರಿಹರಿಸಲು ಅವರನ್ನು ಕೋರಿದ್ದೇವೆ” ಎಂದು ಮಲಿಕ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com