ಎಫ್ ಸಿಆರ್ ಎ ನಿಯಮಗಳಿಗೆ ತಿದ್ದುಪಡಿ, ವಿದೇಶಿ ಸಂಬಂಧಿಕರು ಭಾರತೀಯರಿಗೆ ರೂ.10 ಲಕ್ಷದವರೆಗೂ ಹಣ ಕಳುಹಿಸಲು ಅವಕಾಶ
ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ ಕೆಲವೊಂದು ನಿಯಮಗಳಿಗೆ ತಿದ್ದುಪಡಿ ಮಾಡಿರುವ ಕೇಂದ್ರ ಗೃಹ ಸಚಿವಾಲಯ, ವಿದೇಶದಲ್ಲಿ ನೆಲೆಸಿರುವ ಸಂಬಂಧಿಕರಿಂದ ನಿರ್ಬಂಧಗಳಿಲ್ಲದೆ ಒಂದು ವರ್ಷದಲ್ಲಿ ರೂ. 10 ಲಕ್ಷ ರೂ.ವರೆಗೂ ಸ್ವೀಕರಿಸಲು ಭಾರತೀಯರಿಗೆ ಅವಕಾಶ ಮಾಡಿಕೊಡಲಾಗಿದೆ.
Published: 02nd July 2022 08:27 PM | Last Updated: 02nd July 2022 08:36 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ ಕೆಲವೊಂದು ನಿಯಮಗಳಿಗೆ ತಿದ್ದುಪಡಿ ಮಾಡಿರುವ ಕೇಂದ್ರ ಗೃಹ ಸಚಿವಾಲಯ, ವಿದೇಶದಲ್ಲಿ ನೆಲೆಸಿರುವ ಸಂಬಂಧಿಕರಿಂದ ನಿರ್ಬಂಧಗಳಿಲ್ಲದೆ ಒಂದು ವರ್ಷದಲ್ಲಿ ರೂ. 10 ಲಕ್ಷ ರೂ.ವರೆಗೂ ಸ್ವೀಕರಿಸಲು ಭಾರತೀಯರಿಗೆ ಅವಕಾಶ ಮಾಡಿಕೊಡಲಾಗಿದೆ.
ಈ ಹಿಂದೆ ರೂ. 1 ಲಕ್ಷದವರೆಗೆ ಮಿತಿಗೊಳಿಸಲಾಗಿತ್ತು. ಒಂದು ವೇಳೆ ಹೆಚ್ಚಾಗಿ ಹಣ ಕಳುಹಿಸಬೇಕಾದಲ್ಲಿ ಸರ್ಕಾರಕ್ಕೆ ಮಾಹಿತಿ ನೀಡಲು ಈ ಹಿಂದಿನ 30 ದಿನಗಳ ಬದಲಿಗೆ ಇದೀಗ 90 ದಿನಗಳ ಅವಕಾಶ ನೀಡಲಾಗಿದೆ ಎಂದು ಗೃಹ ಸಚಿವಾಲಯ ನೋಟಿಫಿಕೇಷನ್ ನಲ್ಲಿ ತಿಳಿಸಿದೆ.
ಇದನ್ನೂ ಓದಿ: 'ವಿದೇಶಿ ದೇಣಿಗೆ ಸ್ವೀಕರಿಸುವುದು ಅಂತರ್ಗತ ಹಕ್ಕಾಗುವುದಿಲ್ಲ': ಎಫ್ಸಿಆರ್ಎ ತಿದ್ದುಪಡಿ ಎತ್ತಿಹಿಡಿದ 'ಸುಪ್ರೀಂ'
ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ನಿಯಮಗಳು 2022 ಹೊಸ ನಿಯಮಗಳನ್ನು ಶುಕ್ರವಾರ ರಾತ್ರಿ ಗೆಜೆಟ್ ನೋಟಿಫಿಕೇಷನ್ ಮೂಲಕ ಗೃಹ ಸಚಿವಾಲಯ ಹೊರಡಿಸಿದೆ.
ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ 2011, ನಿಯಮ 6ರಲ್ಲಿ ಒಂದು ಲಕ್ಷಕ್ಕೆ ಮಿತಿಗೊಳಿಸಿದ್ದನ್ನು 10 ಲಕ್ಷ ರೂ.ಗೆ ಮಿತಿಗೊಳಿಸಲಾಗಿದೆ. 30 ದಿನಗಳ ಬದಲಿಗೆ ಮೂರು ತಿಂಗಳವರೆಗೂ ಅವಕಾಶ ನೀಡಲಾಗಿದೆ ಎಂದು ನೋಟಿಫಿಕೇಷನ್ ನಲ್ಲಿ ಹೇಳಲಾಗಿದೆ.