ರಾಹುಲ್ ಗಾಂಧಿ ಕುರಿತು ತಪ್ಪು ಮಾಹಿತಿಯ ವಿಡಿಯೋ: ಬಿಜೆಪಿ ವಕ್ತಾರ ರಾಜ್ಯವರ್ಧನ್ ರಾಥೋಡ್ ವಿರುದ್ಧ ಎಫ್ಐಆರ್

ತಪ್ಪು ಅರ್ಥ ಮೂಡಿಸುವ ವಿಡಿಯೋವನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಆರೋಪದಡಿ ಬಿಜೆಪಿ ರಾಷ್ಟ್ರಿಯ ವಕ್ತಾರ ರಾಜವರ್ಧನ್ ರಾಥೋಡ್, ಟಿವಿ ನಿರೂಪಕ ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕೇಂದ್ರ ಮಾಜಿ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್
ಕೇಂದ್ರ ಮಾಜಿ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್

ನವದೆಹಲಿ: ಕೇರಳದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯನ್ನು ತಿರುಚಿ ಸಂಪೂರ್ಣ ತಪ್ಪು ಅರ್ಥ ಮೂಡಿಸುವ ವಿಡಿಯೋವನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಆರೋಪದಡಿ ಬಿಜೆಪಿ ರಾಷ್ಟ್ರಿಯ ವಕ್ತಾರ ರಾಜವರ್ಧನ್ ರಾಥೋಡ್, ಟಿವಿ ನಿರೂಪಕ ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ.
 
ಕಾಂಗ್ರೆಸ್ ನ ನಾಯಕ ರಾಮ್ ಸಿಂಗ್ ಅವರು ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ಗಳಾದ 504 (ಉದ್ದೇಶಪೂರ್ವಕ ಅವಮಾನ) 505 (ಕ್ರಿಮಿನಲ್ ಬೆದರಿಕೆ) 153A (ಎರಡು ಗುಂಪುಗಳ ನಡುವೆ ಧರ್ಮ, ಜನಾಂಗ, ಹುಟ್ಟಿದ ಸ್ಥಳದ ಆಧಾರದಲ್ಲಿ ದ್ವೇಷವನ್ನು ಉತ್ತೇಜಿಸುವುದು)  295A (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶವನ್ನು ಹೊಂದಿರುವುದು) ಹಾಗೂ 120B (ಕ್ರಿಮಿನಲ್ ಷಡ್ಯಂತ್ರ) ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ವಿಷಯವಾಗಿ ಚಾನಲ್ ವೊಂದನ್ನು ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಟೀಕಿಸಿದ್ದ ಬೆನ್ನಲ್ಲೇ ಈ ಬೆಳವಣಿಗೆ ಸಂಭವಿಸಿದೆ.

"ಜೀ ನ್ಯೂಸ್ ನಿರೂಪಕ ರೋಹಿತ್ ರಂಜನ್ ತಮ್ಮ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ತಮ್ಮ ವಯಾನಾಡ್ ಕಚೇರಿಯಲ್ಲಿ  ಎಸ್ಎಫ್ಐ ನ ಹಿಂಸಾಚಾರದ ಬಗ್ಗೆ ಮಾತನಾಡಿದ್ದನ್ನು ಉದಯ್ ಪುರದಲ್ಲಿ ಕನ್ಹಯ್ಯ ಲಾಲ್ ಹತ್ಯೆ ಬಗ್ಗೆ ಮಾತನಾಡಿದ್ದಾರೆ ಎಂಬಂತೆ ಬಿಂಬಿಸಲು ತಿರುಚಿ ಪ್ರಸಾರ ಮಾಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

"ಮಾಜಿ ಕೇಂದ್ರ ಸಚಿವ ರಾಥೋಡ್, ಮೇಜರ್ ಸುರೇಂದ್ರ ಪೂನಿಯ (ನಿವೃತ್ತ) ಹಾಗೂ ಟ್ವಿಟರ್ ನಲ್ಲಿ ರಾಜಕೀಯ ಲಾಭಕ್ಕಾಗಿ ಹಾಗೂ ಸಾರ್ವಜನಿಕರ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಇದನ್ನು ಹಂಚಿಕೊಂಡಿದ್ದ ಕಮಲೇಶ್ ಸೈನಿ ಎಂಬಾತನೊಂದಿಗೆ ಸೆರಿ ಮಾಧ್ಯಮ ಸಂಸ್ಥೆ ಷಡ್ಯಂತ್ರ ರೂಪಿಸಿ ರಾಹುಲ್ ಗಾಂಧಿ ಕುರಿತು ತಪ್ಪು ಮಾಹಿತಿ ನೀಡುವಂತೆ ವಿಡಿಯೋವನ್ನು ತಿರುಚಲಾಗಿದೆ" ಎಂದು ಆರೋಪಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com