ಜಮ್ಮು: ಎಲ್ ಇಟಿ ಉಗ್ರನೊಂದಿಗೆ ನಂಟು ಆರೋಪ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷನಿಗೆ ಬಿಜೆಪಿ ನೋಟಿಸ್

ಲಷ್ಕರ್ -ಇ- ತೊಯ್ಬಾ ಸಂಘಟನೆಯ ಬಂಧಿತ ಉಗ್ರ ತಾಲಿಬ್ ಹುಸೇನ್ ಷಾ ನೊಂದಿಗೆ ನಂಟಿನ ಆರೋಪದ ಮೇರೆಗೆ ಜಮ್ಮುವಿನ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಶೇಕ್ ಬಶೀರ್ ಗೆ ಮಂಗಳವಾರ ಬಿಜೆಪಿ ಶೋಕಾಸ್ ನೋಟಿಸ್ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಮ್ಮು-ಕಾಶ್ಮೀರ:  ಲಷ್ಕರ್ -ಇ- ತೊಯ್ಬಾ ಸಂಘಟನೆಯ ಬಂಧಿತ ಉಗ್ರ ತಾಲಿಬ್ ಹುಸೇನ್ ಷಾ ನೊಂದಿಗೆ ನಂಟಿನ ಆರೋಪದ ಮೇರೆಗೆ ಜಮ್ಮುವಿನ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಶೇಕ್ ಬಶೀರ್ ಗೆ ಮಂಗಳವಾರ ಬಿಜೆಪಿ ಶೋಕಾಸ್ ನೋಟಿಸ್ ನೀಡಿದೆ.

ಎಲ್ ಇಟಿ ಉಗ್ರ ತಾಲಿಬ್ ಹುಸೈನ್ ಷಾ ರಾಜಕೀಯ ಪಕ್ಷವೊಂದರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಮಾಧ್ಯಮವೊಂದರ ವ್ಯಕ್ತಿಯಾಗಿ ತನನ್ನು ಗುರುತಿಸಿಕೊಳ್ಳುತ್ತಿದ್ದ ಎಂದು ಜಮ್ಮು-ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಸೋಮವಾರ ಹೇಳಿದ್ದರು.

ಹುಸೇನ್ ಷಾ  ಜಮ್ಮು ಪ್ರಾಂತ್ಯದ ಅಲ್ಪಸಂಖ್ಯಾತ ಮೋರ್ಚಾ ಐಟಿ ಮತ್ತು ಸೋಶಿಯಲ್ ಮೀಡಿಯಾ ಘಟಕದ ಉಸ್ತುವಾರಿಯಾಗಿ ಇತ್ತೀಚಿಗೆ ಆಯ್ಕೆಯಾಗಿದ್ದ ಎಂಬ ವರದಿಗಳ ನಂತರ ಕೇಂದ್ರಾಡಳಿತ ಪ್ರದೇಶದ ಬಿಜೆಪಿ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ದಾಳಿಗಳು ನಡೆಯುತ್ತಿವೆ.

ತಾಲಿಬ್ ಹುಸೇನ್ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂಬ ಮಾಧ್ಯಮದ ಪತ್ರವೊಂದರ ಆಧಾರದ ಮೇಲೆ ಜಮ್ಮು-ಕಾಶ್ಮೀರ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಸುನೀಲ್ ಸೆಥಿ ಬಶೀರ್ ಗೆ ನೋಟಿಸ್ ಕಳುಹಿಸಿದ್ದಾರೆ. ನೋಟಿಸ್ ಗೆ 48 ಗಂಟೆಯೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com