ನವದೆಹಲಿ: ಮೊಯಿತ್ರಾ, ಮಣಿಮೇಕಲೈ ವಿರುದ್ಧ ಪೊಲೀಸರಿಗೆ ಬಿಜೆಪಿ ಮುಖಂಡರ ದೂರು

ಟಿಎಂಸಿ ಸಂಸದೆ ಮೆಹುವಾ ಮೊಯಿತ್ರಾ ಮತ್ತು ಕೆನಡಾ ಮೂಲದ ಚಿತ್ರ ನಿರ್ದೇಶಕ ಲೀನಾ ಮಣಿಮೇಕಲೈ ವಿರುದ್ಧ ಬಿಜೆಪಿ ಮುಖಂಡರು ಗುರುವಾರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.ಅವರು ಹಿಂದೂಗಳ ಭಾವನೆಗಳಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮೊಯಿತ್ರಾ, ಮಣಿಮೇಕಲೈ
ಮೊಯಿತ್ರಾ, ಮಣಿಮೇಕಲೈ

ನವದೆಹಲಿ: ಟಿಎಂಸಿ ಸಂಸದೆ ಮೆಹುವಾ ಮೊಯಿತ್ರಾ ಮತ್ತು ಕೆನಡಾ ಮೂಲದ ಚಿತ್ರ ನಿರ್ದೇಶಕ ಲೀನಾ ಮಣಿಮೇಕಲೈ ವಿರುದ್ಧ ಬಿಜೆಪಿ ಮುಖಂಡರು ಗುರುವಾರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಅವರು ಹಿಂದೂಗಳ ಭಾವನೆಗಳಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ದೆಹಲಿ ಬಿಜೆಪಿ ಮುಖಂಡರಿಂದ ದೂರು ಸ್ವೀಕರಿಸಿರುವ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸರು, ಮುಂದಿನ ಕ್ರಮಕ್ಕಾಗಿ ಸೈಬರ್ ಘಟಕಕ್ಕೆ
ವರ್ಗಾಯಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೊಯಿತ್ರಾ ಅವರನ್ನು ಪಕ್ಷದಿಂದ ವಜಾಗೊಳಿಸಬೇಕೆಂದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.

 ಕಾಳಿ ದೇವತೆ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡುವ ಮೂಲಕ ಮೊಹುತ್ರಾ ಹಿಂದೂಗಳ ಭಾವನೆಯನ್ನು ಅಪಮಾನಿಸಿದ್ದಾರೆ ಎಂದು ದೆಹಲಿ ಬಿಜೆಪಿ ಉಪಾಧ್ಯಕ್ಷ ರಾಜನ್ ತಿವಾರಿ ಆರೋಪಿಸಿದ್ದಾರೆ. ಕಾಳಿ ದೇವಿ ಕುರಿತು ಮೊಯಿತ್ರಾ ಮಂಗಳವಾರ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಕಾಳಿ ದೇವಿ ಸಾಕ್ಷ್ಯಚಿತ್ರಕ್ಕಾಗಿ ಮಣಿಮೇಕಲೈ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.  ಧೂಮಪಾನ ಮಾಡುವ ರೀತಿಯಲ್ಲಿ ಕಾಳಿಯನ್ನು ತೋರಿಸುವ ಫೋಸ್ಟರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅವರ ವಿರುದ್ಧ ಹಲವಾರು ಎಫ್ ಐಆರ್ ದಾಖಲಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com