ಆಂಧ್ರ ಸಿಎಂ ಜಗನ್ ಪಕ್ಷ ತೊರೆದ ತಾಯಿ ವಿಜಯಮ್ಮ; ಮಗಳ ಪಕ್ಷಕ್ಕೆ ಬೆಂಬಲ ಘೋಷಣೆ

ಆಂಧ್ರ ಪ್ರದೇಶದ ಆಡಳಿತಾರೂಢ ವೈಎಸ್​ಆರ್​ ಕಾಂಗ್ರೆಸ್​​ ಪಕ್ಷದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಪಕ್ಷದ ಗೌರವಾಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ತಾಯಿ ಹಾಗೂ ಅವಿಭಜಿತ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ದಿ ವೈಎಸ್ ರಾಜಶೇಖರ ರೆಡ್ಡಿ ಅವರ ಪತ್ನಿ ವೈ.ಎಸ್.ವಿಜಯಮ್ಮ ಘೋಷಿಸಿದ್ದಾರೆ.
ವೈಎಸ್ ವಿಜಯಮ್ಮ
ವೈಎಸ್ ವಿಜಯಮ್ಮ

ಗುಂಟೂರು: ಆಂಧ್ರ ಪ್ರದೇಶದ ಆಡಳಿತಾರೂಢ ವೈಎಸ್​ಆರ್​ ಕಾಂಗ್ರೆಸ್​​ ಪಕ್ಷದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಪಕ್ಷದ ಗೌರವಾಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ತಾಯಿ ಹಾಗೂ ಅವಿಭಜಿತ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ದಿ ವೈಎಸ್ ರಾಜಶೇಖರ ರೆಡ್ಡಿ ಅವರ ಪತ್ನಿ ವೈ.ಎಸ್.ವಿಜಯಮ್ಮ ಘೋಷಿಸಿದ್ದಾರೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಚಿನಕಾಕಣಿಯಲ್ಲಿ ನಡೆದ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ವೈ.ಎಸ್.ವಿಜಯಮ್ಮ ಈ ಮಹತ್ವದ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿ ವೈ.ಎಸ್​.ಜಗನ್​ಮೋಹನ್​ ರೆಡ್ಡಿ ಅವರ ತಾಯಿ ಆಗಿರುವ ವಿಜಯಮ್ಮ, ನನ್ನಿಂದ ಯಾರಿಗೂ ಯಾವುದೇ ಅಭ್ಯಂತರ ಉಂಟಾಗಬಾರದು ಎಂದು ನಾನು ರಾಜೀನಾಮೆ ನೀಡುವ ನಿರ್ಣಯ ಮಾಡಿದ್ದೇನೆ. ಇದಕ್ಕಾಗಿ ನನ್ನನ್ನು ಕ್ಷಮಿಸಿ ಎಂದೂ ತಿಳಿಸಿದ್ದಾರೆ. 

ಅಂತೆಯೇ ಇದೇ ವೇಳೆ ಸಿಎಂ ಆಗಿ ಜಗನ್ ಕಾರ್ಯಗಳನ್ನು ಶ್ಲಾಘಿಸಿದ ವಿಜಯಮ್ಮ, 'ಜಗನ್ ಅವರನ್ನು ಜನರ ಮುಖ್ಯಮಂತ್ರಿ ಎಂದು ಬಣ್ಣಿಸಿದರು. ಅವರು ಇನ್ನೂ ಹೆಚ್ಚಿನ ಬಹುಮತದೊಂದಿಗೆ ಸತತ ಎರಡನೇ ಬಾರಿಗೆ ಸರ್ಕಾರ ರಚಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  

ಮಗಳು ಶರ್ಮಿಳಾಗೆ ಬೆಂಬಲ
ಇನ್ನು ಜಗನ್​ಮೋಹನ್​ ರೆಡ್ಡಿ ಸಹೋದರಿ ಶರ್ಮಿಳಾ ತೆಲಂಗಾಣದಲ್ಲಿ ಹೊಸ ಪಕ್ಷ ಕಟ್ಟಿದ್ದು, ಶರ್ಮಿಳಾ ಅವರ ಈ ನಿರ್ಧಾರವನ್ನು ಬೆಂಬಲಿಸಿ ತಾಯಿ ವಿಜಯಮ್ಮ ವೈಎಸ್​ಆರ್​​ ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ದಿ.ವೈ.ಎಸ್​.ರಾಜಶೇಖರ ರೆಡ್ಡಿ ಪತ್ನಿಯಾಗಿ ಮತ್ತು ಶರ್ಮಿಳಾ ತಾಯಿಯಾಗಿ ನಾನು ತೆಲಂಗಾಣದಲ್ಲಿ ಹೊಸ ಪಕ್ಷದ ಪರವಾಗಿ ನಿಲ್ಲುವ ಅವಶ್ಯಕತೆ ಇದೆ. ಇಂದು ಜಗನ್​ ಮತ್ತು ಶರ್ಮಿಳಾ ಬೇರೆ - ಬೇರೆ ಪಕ್ಷಗಳು ಮತ್ತು ರಾಜ್ಯಗಳನ್ನು ಪ್ರತಿನಿಧಿಸುವ ಅನಿರ್ವಾಯತೆ ಏಕೆ ಬಂದಿದೆ. ಆ ದೇವರಿಗೆ ಗೊತ್ತು. ಕಷ್ಟದಲ್ಲಿದ್ದಾಗ ನಾನು ಜಗನ್​ ಜೊತೆಗಿದ್ದೆ, ಸಂತೋಷವಾಗಿದ್ದಲೂ ನಾನು ಆತನ ಜೊತೆಗಿದ್ದರೆ ನನ್ನ ಮಗಳು ಶರ್ಮಿಳಾಗೆ ಅನ್ಯಾಯ ಮಾಡುತ್ತಿದ್ದೇನೆ ಎಂದು ನನ್ನ ಮನಸಾಕ್ಷಿ ಹೇಳುತ್ತಿದೆ ಎಂದು ವಿಜಯಮ್ಮ ಹೇಳಿದ್ದಾರೆ. 

ಒಟ್ಟಾರೆ ವಿಜಯಮ್ಮ ಅವರ ಈ ನಿರ್ಧಾರ ಇದೀಗ ಆಂಧ್ರ ಪ್ರದೇಶ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com