ಟೆಂಡರ್ ಹಗರಣ: ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಆಪ್ತನಿಗೆ ಸೇರಿದ 18 ಕಡೆ ಬೆಳ್ಳಂಬೆಳಗ್ಗೆ ಇಡಿ ದಾಳಿ
ಜಾರ್ಖಂಡ್ ರಾಜ್ಯದ 18 ಕಡೆಗಳಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಹೇಮಂತ್ ಸೊರೇನ್ ಆಪ್ತನ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
Published: 08th July 2022 12:13 PM | Last Updated: 08th July 2022 01:16 PM | A+A A-

ಸಾಂದರ್ಭಿಕ ಚಿತ್ರ
ರಾಂಚಿ: ಜಾರ್ಖಂಡ್ ರಾಜ್ಯದ 18 ಕಡೆಗಳಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಹೇಮಂತ್ ಸೊರೇನ್ ಆಪ್ತನ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
ಪಂಕಜ್ ಮಿಶ್ರಾ ಅವರ ಮನೆಗಳು ಮತ್ತು ಕಚೇರಿಗಳಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮುಖ್ಯಮಂತ್ರಿ ಸೋರೆನ್ ಅವರ ಶಾಸಕ ಪ್ರತಿನಿಧಿಯಾಗಿರುವ ಪಂಕಜ್ ಮಿಶ್ರಾ ಅವರಿಗೆ ಸೇರಿದ ಸಾಹೇಬ್ ಗಂಜ್, ಬೆರ್ಹೈತ್, ರಾಜಮಹಲ್ ಸೇರಿ 18 ಕಡೆ ದಾಳಿ ನಡೆಸಲಾಗಿದೆ. ಟೆಂಡರ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಕೇಂದ್ರದಲ್ಲಿ 'ರಾವಣ' ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಗುಂಪು ಹತ್ಯೆ ತಡೆ ಕಾನೂನು ತರಬೇಕಾಗಿದೆ: ಜಾರ್ಖಂಡ್ ಸಿಎಂ
ಶುಕ್ರವಾರ ಜಾರಿ ನಿರ್ದೇಶನಾಲಯ(ಇಡಿ) ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಶಾಸಕ ಪ್ರತಿನಿಧಿ ಪಂಕಜ್ ಮಿಶ್ರಾ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಿದೆ. ಪ್ರಸ್ತುತ, ಟೆಂಡರ್ ಹಗರಣಕ್ಕೆ ಸಂಬಂಧಿಸಿದಂತೆ ಸಾಹೇಬ್‌ಗಂಜ್, ಬೆರ್ಹೈತ್ ಮತ್ತು ರಾಜಮಹಲ್ ಸೇರಿದಂತೆ ಒಟ್ಟು 18 ಸ್ಥಳಗಳಲ್ಲಿ ದಾಳಿ ನಡೆಯುತ್ತಿದೆ ಎಂದು ಹೇಳಲಾಗಿದೆ.
Enforcement Directorate (ED) conducts raid at the locations of Jharkhand CM Hemant Soren's MLA representative Pankaj Mishra. Raids going on at 18 locations, including Sahibganj, Berhait and Rajmahal in connection with a tender scam.
— ANI (@ANI) July 8, 2022
Visuals from Sahibganj in Jharkhand. pic.twitter.com/AQiBKR5sdH