ಹೈದರಾಬಾದ್‌: ಭಾರತ್ ಬಯೋಟೆಕ್ ಘಟಕದಲ್ಲಿ ಅಗ್ನಿ ಅವಘಡ!

ನಗರದ ಹೊರವಲಯದ ಶಮೀರ್‌ಪೇಟೆ ಬಳಿಯ ಜಿನೋಮ್ ವ್ಯಾಲಿಯಲ್ಲಿರುವ ಕೋವಿಡ್-19 ಲಸಿಕೆ ತಯಾರಕ ಭಾರತ್ ಬಯೋಟೆಕ್‌ನ ಘಟಕದಲ್ಲಿ ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ.
ಕೋವ್ಯಾಕ್ಸಿನ್
ಕೋವ್ಯಾಕ್ಸಿನ್

ಹೈದರಾಬಾದ್: ನಗರದ ಹೊರವಲಯದ ಶಮೀರ್‌ಪೇಟೆ ಬಳಿಯ ಜಿನೋಮ್ ವ್ಯಾಲಿಯಲ್ಲಿರುವ ಕೋವಿಡ್-19 ಲಸಿಕೆ ತಯಾರಕ ಭಾರತ್ ಬಯೋಟೆಕ್‌ನ ಘಟಕದಲ್ಲಿ ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿ ಅವಘಡದಲ್ಲಿ ಅಡುಗೆ ಕೋಣೆ ಸಂಪೂರ್ಣ ಜಖಂಗೊಂಡಿದೆ. ಆದಾಗ್ಯೂ, ಅಗ್ನಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ಇನ್ನು ಅಡುಗೆಮನೆಯಿಂದ ಸುಮಾರು 300 ಮೀಟರ್ ದೂರದಲ್ಲಿರುವ ಮುಖ್ಯ ಕೇಂದ್ರಕ್ಕೆ ಬೆಂಕಿ ವ್ಯಾಪಿಸಿಲ್ಲ.

ಬೆಂಕಿಯನ್ನು ನಂದಿಸಲಾಗಿದೆ ಎಂದು ಶಮೀರ್ ಪೇಟ್ ಅಗ್ನಿಶಾಮಕ ಅಧಿಕಾರಿ ಸಿ.ಎಚ್.ಪೂರ್ಣ ಕುಮಾರ್ ತಿಳಿಸಿದ್ದಾರೆ. ಮೊದಲು ಬೆಂಕಿ ಹರಡದಂತೆ ತಡೆಯಲಾಯಿತು. ನಂತರ ಒಂದು ಗಂಟೆಯೊಳಗೆ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲಾಯಿತು ಎಂದು ತಿಳಿಸಿದರು. 

ಪ್ರಾಥಮಿಕ ತನಿಖೆಯಿಂದ ಅಡುಗೆಮನೆಯಲ್ಲಿ ಅನಿಲ ಸೋರಿಕೆಯಿಂದಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು ಇನ್ನು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದರು.

ಮಧ್ಯಾಹ್ನ 12.30ರ ಸುಮಾರಿಗೆ, ಅಗ್ನಿಶಾಮಕ ನಿಯಂತ್ರಣಕ್ಕೆ ಕರೆ ಬಂದಿತು. ಸೌಲಭ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ಮೊದಲು ಬೆಂಕಿ ವ್ಯಾಪಿಸದಂತೆ ತಡೆದರು. ನಂತರ ಅಗ್ನಿಶಾಮಕ ಸಿಬ್ಬಂದಿ ಸಹ ಅವರೊಂದಿಗೆ ಸೇರಿಕೊಂಡರು ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com