ನ್ಯೂಸ್ ಆ್ಯಂಕರ್ ರೋಹಿತ್ ರಂಜನ್ ಗೆ ಸುಪ್ರೀಂ ಕೋರ್ಟ್ ಜಾಮೀನು: ಕೇಂದ್ರ ಸರ್ಕಾರಕ್ಕೆ ನೊಟೀಸ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ತಿರುಚಿ ವಿಡಿಯೋ ಹರಿಬಿಟ್ಟಿದ್ದ ಆರೋಪದಡಿ ಜೀ ನ್ಯೂಸ್ ನ ರೋಹಿತ್ ರಂಜನ್ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ದಾಖಲಾಗಿದ್ದ ಎಫ್ಐಆರ್ ಗಳಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಟಿವಿ ನ್ಯೂಸ್ ಆ್ಯಂಕರ್ ರೋಹಿತ್ ರಂಜನ್ ಗೆ ಜಾಮೀನು ನೀಡಿದೆ. 
ನ್ಯೂಸ್ ಆ್ಯಂಕರ್ ರೋಹಿತ್ ರಂಜನ್
ನ್ಯೂಸ್ ಆ್ಯಂಕರ್ ರೋಹಿತ್ ರಂಜನ್

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರ ಹೇಳಿಕೆಯನ್ನು ತಿರುಚಿ ವಿಡಿಯೋ ಹರಿಬಿಟ್ಟಿದ್ದ ಆರೋಪದಡಿ ಜೀ ನ್ಯೂಸ್ ನ ರೋಹಿತ್ ರಂಜನ್ (News anchor Rohit Ranjan) ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ದಾಖಲಾಗಿದ್ದ ಎಫ್ಐಆರ್ ಗಳಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಶುಕ್ರವಾರ  ಜಾಮೀನು ನೀಡಿದೆ. 

ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳು ರೋಹಿತ್ ರಂಜನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಂತೆ ಆದೇಶ ನೀಡಿದೆ. ನ್ಯಾ.ಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ ಕೆ ಮಹೇಶ್ವರಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ ರಜಾಪೀಠ ರೋಹಿತ್ ರಂಜನ್ ಅರ್ಜಿಗೆ ಸಂಬಂಧಪಟ್ಟಂತೆ ಅಟೊರ್ನಿ ಜನರಲ್ ಮೂಲಕ ಕೇಂದ್ರ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ.

ರೋಹಿತ್ ರಂಜನ್ ಪರ ವಾದಿಸಿದ ಹಿರಿಯ ವಕೀಲ ಸಿದ್ದಾರ್ಥ್ ಲೂತ್ರ, ಒಂದೇ ಆರೋಪಕ್ಕೆ ಸಂಬಂಧಪಟ್ಟಂತೆ ಹಲವು ಎಫ್ಐಆರ್ ಗಳು ದಾಖಲಾಗಿವೆ. ಒಂದೇ ಕೇಸಿಗೆ ಸಂಬಂಧಿಸಿ ಹಲವು ಎಫ್ಐಆರ್ ಗಳು ದಾಖಲಾಗಿರುವುದರಿಂದ ತಪ್ಪಾಗಿದ್ದು ಒಂದೇ ಕೇಸಿನಲ್ಲಿ ಹಲವು ಠಾಣೆಗಳ ಪೊಲೀಸರು ಬಂಧಿಸುವ ಸಾಧ್ಯತೆಯಿದೆ ಎಂದು ವಾದಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com