ಮಳೆಯ ನಡುವೆ ಮದುವೆಯ ದಿಬ್ಬಣ
ಮಳೆಯ ನಡುವೆ ಮದುವೆಯ ದಿಬ್ಬಣ

ಧಾರಾಕಾರ ಮಳೆಯ ನಡುವೆ ಹಳದಿ ಟಾರ್ಪಾಲ್ ಅಡಿಯಲ್ಲಿ ಮದುವೆಯ ದಿಬ್ಬಣದ ಸಂಭ್ರಮ ಕಣ್ತುಂಬಿಕೊಂಡ ಜನತೆ! 

ಮಳೆಗಾಲದಲ್ಲಿ ಸುರಿಯುವ ವರ್ಷಧಾರೆ ನಮ್ಮ ಪ್ರವಾಸದ ಯೋಜನೆಗಳನ್ನೆಲ್ಲಾ ಬುಡಮೇಲು ಮಾಡುತ್ತದೆ ಎಂಬುದು ಹಲವರಿಲ್ಲಿರುವ ಸಾಮಾನ್ಯವಾದ ಭಯ.

ಚತ್ತೀಸ್ ಗಢ: ಮಳೆಗಾಲದಲ್ಲಿ ಸುರಿಯುವ ವರ್ಷಧಾರೆ ನಮ್ಮ ಪ್ರವಾಸದ ಯೋಜನೆಗಳನ್ನೆಲ್ಲಾ ಬುಡಮೇಲು ಮಾಡುತ್ತದೆ ಎಂಬುದು ಹಲವರಿಲ್ಲಿರುವ ಸಾಮಾನ್ಯವಾದ ಭಯ. ಆದರೆ ವಿವಾಹ ಕಾರ್ಯಕ್ರಮವೊಂದಲ್ಲಿ ಭಾಗಿಯಾಗಿದ್ದ ತಂಡವೊಂದು ಭಾರಿ ವರ್ಷಧಾರೆಯ ನಡುವೆಯೇ ಮದುವೆಯ ದಿಬ್ಬಣವನ್ನು ನಡೆಸಿ ಸಂಭ್ರಮಿಸಿದೆ. 

ಮಳೆಯನ್ನೂ ಲೆಕ್ಕಿಸದೇ ಹಳದಿ ಟಾರ್ಪಾಲ್ ನ ಅಡಿಯಲ್ಲಿ ಮದುವೆಯ ಮೆರವಣಿಗೆಯನ್ನು ಮಂದಿ ಸಂಭ್ರಮಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಈ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ರೀತಿಯ ಅವಿಸ್ಮರಣೀಯ ಘಟನೆಯನ್ನು ಈ ವರೆಗೂ ಎಂದಿಗೂ ನೋಡಿಲ್ಲ ಎಂದು ಹೇಳಿದ್ದಾರೆ.
 
ಒಂದು ನಿಮಿಷದ ಈ ವಿಡಿಯೋ ಒಂದರಲ್ಲಿ ಜನರ ಗುಂಪೊಂದು ಹಳದಿ ಬಣ್ಣದ ಬೃಹತ್ ಟಾರ್ಪಾಲ್ ಅಡಿಯಲ್ಲಿ ಆಶ್ರಯ ಪಡೆದಿದ್ದು, ಮಳೆಯನ್ನೂ ಲೆಕ್ಕಿಸದೇ  ಮೆರವಣಿಗೆಯನ್ನು ಆನಂದಿಸುತ್ತಿದ್ದರು. ಇನ್ನೂ ಕೆಲವು ಮಂದಿ ಮಳೆಯಲ್ಲಿಯೇ ನೃತ್ಯ ಮಾಡುತ್ತಿದ್ದದ್ದೂ ಕಂಡುಬಂದಿದೆ. ಈ ವಿಡಿಯೋ ಇಂಟರ್ನೆಟ್ ನಲ್ಲಿ ಹೆಚ್ಚು ಪೋಸ್ಟ್ ಆಗುತ್ತಿದ್ದಂತೆಯೇ ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆಗಳನ್ನೂ ನೀಡಿದ್ದಾರೆ. 

ಏನೇ ಆಗಲಿ, ಮದುವೆಯ ದಿಬ್ಬಣ ನಡೆದೇ ನಡೆಯುತ್ತದೆ ಎಂಬ ಈ ಜನಗಳ ದೃಢ ಸಂಕಲ್ಪದಿಂದ ನಾನು ಪ್ರಭಾವಿತನಾಗಿದ್ದೇನೆ ಎಂದು ಓರ್ವ ವ್ಯಕ್ತಿ ಹೇಳಿದರೆ, ಮನಸ್ಸಿದ್ದರೆ ಮಾರ್ಗ ಎಂದಿದ್ದಾರೆ ಮತ್ತೋರ್ವ ನೆಟ್ಟಿಗರು. ಮತ್ತೋರ್ವ ವ್ಯಕ್ತಿ ಈ ವೀಡಿಯೋಗೆ ಮಳೆಯಲ್ಲಿ ನೃತ್ಯ:  ಮದುವೆಯ ದಿಬ್ಬಣದ ವಿಶೇಷ ಸಂದರ್ಭ ಎಂಬ ಶೀರ್ಷಿಕೆ ನೀಡಿ ಟ್ವೀಟ್ ಮಾಡಿದ್ದಾರೆ. 

ಇನ್ನೊಬ್ಬರು ಈ ವಿಡಿಯೋದ ಮೂಲಕ ತಾನೇಕೆ ತನ್ನ ದೇಶವನ್ನು ಪ್ರೀತಿಸುತ್ತೇನೆ ಎಂದು ಹೇಳಲು ಯತ್ನಿಸಿದ್ದು,  ನನ್ನ ದೇಶವನ್ನು ನಾನೇಕೆ ಪ್ರೀತಿಸುತ್ತೇನೆ ಎಂದರೆ ಜನರು ಪರಿಸ್ಥಿತಿ ಏನೇ ಇರಲಿ ಅವರ ದಿನವನ್ನು ಆನಂದಿಸುವುದನ್ನು ಮಾತ್ರ ಮರೆಯುವುದಿಲ್ಲ ಎಂದು ಕಾಮೆಂಟಿಸಿದ್ದಾರೆ. ಈ ವರೆಗೂ ಈ ವಿಶೇಷ ವಿಡಿಯೋ 300 ಸಾವಿರ ವೀಕ್ಷಣೆಗಳನ್ನು ಕಂಡಿದ್ದು, 14 ಸಾವಿರಕ್ಕೂ ಅಧಿಕ ಮಂದಿ ಲೈಕ್ ನೀಡಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com