ಸ್ವಇಚ್ಛೆಯಿಂದ ವ್ಯಕ್ತಿಯೊಂದಿಗೆ ಇದ್ದ ಮಹಿಳೆ, ಸಂಬಂಧ ಹಾಳಾದರೆ ರೇಪ್ ಪ್ರಕರಣ ದಾಖಲಿಸುವಂತಿಲ್ಲ: ಸುಪ್ರೀಂ ಕೋರ್ಟ್ 

ಮಹಿಳೆಯೊಬ್ಬರು ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದು, ಆಕೆ ಸ್ವಇಚ್ಛೆಯಿಂದ ವ್ಯಕ್ತಿಯೋರ್ವನ ಜೊತೆ ಇದ್ದಾಗ ಸಂಬಂಧ ಹಾಳಾದರೆ ಆ ವ್ಯಕ್ತಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಮಹಿಳೆಯೊಬ್ಬರು ಸ್ವಇಚ್ಛೆಯಿಂದ ವ್ಯಕ್ತಿಯೋರ್ವನ ಜೊತೆ ಇದ್ದಾಗ ಸಂಬಂಧ ಹಾಳಾದರೆ ಆ ವ್ಯಕ್ತಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ರೀತಿ ಹೇಳಿರುವ ಸುಪ್ರೀಂ ಕೋರ್ಟ್ ಜಾಮೀನು ಪಡೆದಿರುವ ಅರ್ಜಿದಾರರೊಬ್ಬರನ್ನು ಬಿಡುಗಡೆಗೆ ಆದೇಶಿಸಿದೆ. 

ನ್ಯಾ.ಹೇಮಂತ್ ಗುಪ್ತಾ ಹಾಗೂ ವಿಕ್ರಮ್ ನಾಥ್ ಅವರಿದ್ದ ಪೀಠ, ಮಹಿಳೆಯೊಬ್ಬರು ವ್ಯಕ್ತಿಯೋರ್ವನೊಂದಿಗೆ 4 ವರ್ಷಗಳ ಕಾಲ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದದ್ದು ಹಾಗೂ ಆಕೆ ಲಿವ್ ಇನ್ ರಿಲೇಷನ್ ಶಿಪ್ ಪ್ರಾರಂಭಿಸಿದಾಗ ಆಕೆಗೆ 21 ವರ್ಷವಾಗಿದ್ದನ್ನು ಆಕೆಯ ಪರ ವಕೀಲರೇ ಒಪ್ಪಿದ್ದಾರೆ. ದೂರುದಾರರು ಸ್ವಇಚ್ಛೆಯಿಂದ ವ್ಯಕ್ತಿಯೊಂದಿಗೆ ಇದ್ದರು ಹಾಗೂ ಸಂಬಂಧ ಹೊಂದಿದ್ದರು. ಸಂಬಂಧ ಹಾಳಾದ ಕಾರಣಕ್ಕೆ ಅದನ್ನೇ ಆಧಾರವಾಗಿಟ್ಟುಕೊಂಡು ಐಪಿಸಿಯ ಸೆಕ್ಷನ್ 376(2)(ಎನ್) ಅಡಿಯಲ್ಲಿ ಎಫ್ಐಆರ್ ಹಾಕಲು ಸಾಧ್ಯವಿಲ್ಲ ಎಂದು ಹೇಳಿದೆ. 

ಐಪಿಸಿಯ ಸೆಕ್ಷನ್ 376(2)(ಎನ್), 377 ಹಾಗೂ 506 ರ ಅಡಿಯಲ್ಲಿ ಎದುರಿಸುತ್ತಿರುವ ಆರೋಪಗಳಿಗೆ ಬಂಧನದಿಂದ ವಿನಾಯಿತಿ ನೀಡುವ ಜಾಮೀನು ಕೋರಿ  ಅನ್ಸರ್ ಮೊಹಮ್ಮದ್ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ಮೇ.19 ರಂದು ತಿರಸ್ಕರಿಸಿತ್ತು. ರಾಜಸ್ಥಾನ ಹೈಕೋರ್ಟ್ ನ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಈ ವ್ಯಕ್ತಿ ಪ್ರಶ್ನಿಸಿದ್ದರು.

ಅತ್ಯಾಚಾರ, ಅಸಹಜ ಅಪರಾಧಗಳು ಹಾಗೂ ಕ್ರಿಮಿನಲ್ ಬೆದರಿಸುವಿಕೆ ಆರೋಪಗಳನ್ನು ಎದುರಿಸುತ್ತಿರುವ ಮೊಹಮ್ಮದ್ ಗೆ ಜಾಮೀನು ನೀಡಿರುವ ಸುಪ್ರೀಂ ಕೋರ್ಟ್, ಇಂದಿಗೆ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯ ನಿರೀಕ್ಷಣಾ ಜಾಮೀನಿಗೆ ಮಾತ್ರ ಸೀಮಿತವಾದದ್ದು, ಪ್ರಕರಣದಲ್ಲಿ ತನಿಖೆ ಮುಂದುವರೆಯಲಿದೆ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com