ಪ್ರಕರಣಗಳ ಭೇದಿಸಲು ಭಾಷಾ ತಡೆಗೋಡೆ ಮುರಿದ ED; ಅನುವಾದಕರಿಗೆ ಭಾರಿ ಬೇಡಿಕೆ
ಸಂಘಟಿತ ಅಪರಾಧಗಳು ಹೆಚ್ಚು ಜಾಗತಿಕವಾಗುತ್ತಿರುವುದರೊಂದಿಗೆ ಭಾಷಾ ತಡೆಗೋಡೆ ಮುರಿಯಲು ಕೇಂದ್ರೀಯ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ(ಇಡಿ) ಮುಂದಾಗಿದ್ದು, ತನಿಖಾ ಸಂಸ್ಥೆಯಲ್ಲಿ ಇದೀಗ ಭಾಷಾ ಅನುವಾದಕರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.
Published: 18th July 2022 02:49 PM | Last Updated: 18th July 2022 02:49 PM | A+A A-

ಸಂಗ್ರಹ ಚಿತ್ರ
ನವದೆಹಲಿ: ಸಂಘಟಿತ ಅಪರಾಧಗಳು ಹೆಚ್ಚು ಜಾಗತಿಕವಾಗುತ್ತಿರುವುದರೊಂದಿಗೆ ಭಾಷಾ ತಡೆಗೋಡೆ ಮುರಿಯಲು ಕೇಂದ್ರೀಯ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ(ಇಡಿ) ಮುಂದಾಗಿದ್ದು, ತನಿಖಾ ಸಂಸ್ಥೆಯಲ್ಲಿ ಇದೀಗ ಭಾಷಾ ಅನುವಾದಕರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.
ಹೌದು.. ಸಂಘಟಿತ ಅಪರಾಧಗಳು ಹೆಚ್ಚು ಜಾಗತಿಕವಾಗುವುದರೊಂದಿಗೆ ಜಾರಿ ನಿರ್ದೇಶನಾಲಯದ ತನಿಖಾಧಿಕಾರಿಗಳಿಗೆ ಭಾಷಾ ತಡೆಗೋಡೆಯು ಒಂದು ಪ್ರಮುಖ ಅಡಚಣೆಯಾಗಿದೆ. ಈ ಬಹುದೊಡ್ಡ ಸವಾಲನ್ನು ನಿಭಾಯಿಸುವ ಸಲುವಾಗಿ, ತನಿಖಾ ಸಂಸ್ಥೆಗಳು ಈಗ ವೃತ್ತಿಪರರ ಸಹಾಯವನ್ನು ಬಯಸುತ್ತಿದ್ದು, ಭಾಷಾ ಅನುವಾದಕರಿಗೆ ಬೇಡಿಕೆ ಇರಿಸಿದೆ.
ಇದನ್ನೂ ಓದಿ: ಸೋನಿಯಾ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರಿಗೆ ಇ.ಡಿ ಕಿರುಕುಳ: ಜುಲೈ 21 ರಂದು ರಾಜಭವನ ಚಲೋ ಪ್ರತಿಭಟನೆ
ಉದಾಹರಣೆಗೆ, ಜಾರಿ ನಿರ್ದೇಶನಾಲಯ (ED) ವಿವಿಧ ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ಬರೆಯಲಾದ ಅನುವಾದಿತ ದಾಖಲೆಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಮತ್ತು ಪ್ರತಿಯಾಗಿ ಸಮಯಕ್ಕೆ ಸರಿಯಾಗಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಕಾರ್ಯವಿಧಾನವನ್ನು ಸ್ಥಾಪಿಸಲು ನಿರ್ಧರಿಸಿದೆ. ಪ್ರಸ್ತುತ, ED ಅಧಿಕಾರಿಗಳು ಅನುವಾದ ಸೇವೆಯನ್ನು ಅಗತ್ಯವಿರುವಾಗ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅಲ್ಬೇನಿಯಾದಿಂದ ಆಂಟಿಗುವಾದಿಂದ ಸ್ಪೇನ್‌ನಿಂದ, 56 ವಿದೇಶಿ ಭಾಷೆಗಳಿಂದ ಇಂಗ್ಲಿಷ್‌ಗೆ ಮತ್ತು ಪ್ರತಿಯಾಗಿ ಭಾಷಾಂತರಿಸಿದ ದಾಖಲೆಗಳನ್ನು ಪಡೆಯಲು ಸಂಸ್ಥೆ ಎದುರು ನೋಡುತ್ತಿದೆ.
ಇದನ್ನೂ ಓದಿ: ಫೆಮಾ ಪ್ರಕರಣ: ಮಂಗಳೂರಿನ ಕೆ ಮೊಹಮ್ಮದ್ ಹಾರಿಸ್ ಆಸ್ತಿ ವಶಪಡಿಸಿಕೊಂಡ ಇಡಿ
ಅದೇ ರೀತಿ, ಇದು ಎಂಟು ಭಾರತೀಯ ಭಾಷೆಗಳಾದ ಮಲಯಾಳಂ, ತಮಿಳು, ತೆಲುಗು, ಒರಿಯಾ, ಬೆಂಗಾಲಿ, ಅಸ್ಸಾಮಿ, ಪಂಜಾಬಿ ಮತ್ತು ಕನ್ನಡದಿಂದ ಇಂಗ್ಲಿಷ್‌ಗೆ ಮತ್ತು ಪ್ರತಿಯಾಗಿ ಭಾಷಾಂತರಿಸಿದ ದಾಖಲೆಗಳನ್ನು ಹುಡುಕುತ್ತಿದೆ.
ಈ ಬಗ್ಗೆ ಮಾತನಾಡಿರುವ ಇಡಿ ಅಧಿಕಾರಿಯೊಬ್ಬರು, 'ನಿಗದಿತ ಕಾಲಮಿತಿಯೊಳಗೆ ವಿವಿಧ ಭಾರತೀಯ ಮತ್ತು ವಿದೇಶಿ ಭಾಷೆಗಳಿಂದ ಪತ್ರಗಳು, ದಾಖಲೆಗಳು, ಎಫ್‌ಐಆರ್, ಡೈರಿಗಳು, ವರದಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಲು ಸಂಸ್ಥೆ ವೃತ್ತಿಪರರನ್ನು ಹುಡುಕುತ್ತಿದೆ. ಅಸಾಧಾರಣ ಸಂದರ್ಭಗಳಲ್ಲಿ, ದಾಖಲೆಗಳನ್ನು ಒಂದು-ಎರಡು ದಿನಗಳಲ್ಲಿ ಅನುವಾದಿಸಬೇಕಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಅಮ್ನೆಸ್ಟಿ ಇಂಡಿಯಾಗೆ 51.72 ಕೋಟಿ ರೂ., ಮಾಜಿ ಸಿಇಒ ಆಕಾರ್ ಪಟೇಲ್ಗೆ 10 ಕೋಟಿ ರೂ. ದಂಡ ವಿಧಿಸಿದ ಇಡಿ
ಅಂತೆಯೇ ಸಂಘಟಿತ ಅಪರಾಧ ಸಿಂಡಿಕೇಟ್‌ಗಳ ವಿಸ್ತರಣೆಯ ನಂತರ ಕಾನೂನು ಜಾರಿ ಸಂಸ್ಥೆಗಳು ಭಾಷಾ ಸಮಸ್ಯೆಗಳನ್ನು ಎದುರಿಸಲಾರಂಭಿಸಿವೆ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಹೇಳಿದ್ದು, ಇಂದು ಅಕ್ರಮ ವಸ್ತುಗಳನ್ನು ಒಂದು ಖಂಡದಿಂದ ಪಡೆಯಲಾಗುತ್ತದೆ, ಇನ್ನೊಂದು ಖಂಡಕ್ಕೆ ಸಾಗಣೆ ಮಾಡಲಾಗುತ್ತದೆ ಮತ್ತು ಮೂರನೇ ಒಂದು ಭಾಗಕ್ಕೆ ಮಾರಾಟ ಮಾಡಲಾಗುತ್ತದೆ. ಸರ್ಕಾರವು ಪ್ಯುಗಿಟಿವ್ ಎಕನಾಮಿಕ್ ಅಫೆಂಡರ್ಸ್ ಆಕ್ಟ್, 2018 (FEOA) ಅನ್ನು ಜಾರಿಗೆ ತರುತ್ತಿದೆ, ಇದರಲ್ಲಿ ಕಾನೂನು ಜಾರಿ ಸಂಸ್ಥೆಗಳು ವಿದೇಶಿ ಏಜೆನ್ಸಿಗಳೊಂದಿಗೆ ಸಹಯೋಗ ಮಾಡಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಪತ್ನಿ, ಪುತ್ರನಿಗೆ ಇಡಿ ಸಮನ್ಸ್!
ಭಾರತೀಯ ನ್ಯಾಯಾಲಯಗಳ ವ್ಯಾಪ್ತಿಯಿಂದ ಹೊರಗೆ ಉಳಿಯುವ ಮೂಲಕ ಆರ್ಥಿಕ ಅಪರಾಧಿಗಳು ಭಾರತೀಯ ಕಾನೂನುಗಳಿಂದ ತಪ್ಪಿಸಿಕೊಳ್ಳುವುದನ್ನು ತಡೆಯಲು FEOA ಅನ್ನು ಜಾರಿಗೊಳಿಸಲಾಗಿದೆ. ಭಾರತದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿಗಳ ಆಸ್ತಿಯನ್ನು ಲಗತ್ತಿಸಲು ಇಡಿ ಆದೇಶವನ್ನು ನೀಡುತ್ತದೆ. ಕಳೆದ ವರ್ಷದ ವರದಿಯ ಪ್ರಕಾರ, ನವೆಂಬರ್ 30, 2021 ರಂತೆ, ED 14 ಜನರ ವಿರುದ್ಧ FEOA ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಿದೆ, ಅದರಲ್ಲಿ ಒಂಬತ್ತು ಮಂದಿಯನ್ನು "ಪ್ಯುಗಿಟಿವ್ ಆರ್ಥಿಕ ಅಪರಾಧಿಗಳು" ಎಂದು ನ್ಯಾಯಾಲಯ ಘೋಷಿಸಿದ್ದು, 427.67 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ಜುಲೈ 1ಕ್ಕೆ ವಿಚಾರಣೆಗೆ ಹಾಜರಾಗಲು ಸಂಜಯ್ ರಾವತ್ ಗೆ ಇಡಿ ಮತ್ತೆ ಸಮನ್ಸ್
2020 ರಲ್ಲಿ ಲೋಕಸಭೆಯಲ್ಲಿ ನೀಡಲಾದ ಉತ್ತರದಲ್ಲಿ ಸಚಿವ ಎಸ್ ಪಿ ಶುಕ್ಲಾ ಅವರು ಆರ್ಥಿಕ ಅಕ್ರಮಗಳ ಆರೋಪ ಹೊತ್ತಿರುವ 72 ಭಾರತೀಯರು ವಿದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದರು. ಈ ಪಟ್ಟಿಯಲ್ಲಿ ನೀರವ್ ಮೋದಿ, ಮೆಹುಲ್ ಚೋಕ್ಸಿ, ವಿಜಯ್ ಮಲ್ಯ ಮತ್ತು ಲಲಿತ್ ಮೋದಿ ಹೆಸರುಗಳಿವೆ ಎನ್ನಲಾಗಿದೆ. ಅವರನ್ನು ಮರಳಿ ದೇಶಕ್ಕೆ ಕರೆತರಲು ಕೇಂದ್ರವು ಹಸ್ತಾಂತರ ನಿಯಮಗಳನ್ನು ಪಾಲಿಸಬೇಕು. ಹೆಚ್ಚಿನ ಸಂದರ್ಭಗಳಲ್ಲಿ, ಅಂತಾರಾಷ್ಟ್ರೀಯ ಪೊಲೀಸ್ (ಇಂಟರ್ಪೋಲ್) ಸಹಾಯವನ್ನು ಪಡೆಯಲಾಗುತ್ತದೆ.