ವಿಚ್ಛೇದನಕ್ಕೆ ಕೋಟ್ಯಂತರ ರೂ ಪರಿಹಾರ ನೀಡುವಂತೆ ಚಿತ್ರಹಿಂಸೆ ನೀಡುತ್ತಿದ್ದಾರೆ: ಲಾಲು ಪುತ್ರ ತೇಜ್ ಪ್ರತಾಪ್ ಆರೋಪ

ತನಗೆ ವಿಚ್ಛೇದನ ನೀಡಲು ಕೋಟ್ಯಂತರ ರೂ ಪರಿಹಾರ ನೀಡುವಂತೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ತಮ್ಮ ಪತ್ನಿ ಐಶ್ವರ್ಯಾ ಮತ್ತು ಅವರ ಕುಟುಂಬಸ್ಥರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ತೇಜ್ ಪ್ರತಾಪ್ ಯಾದವ್
ತೇಜ್ ಪ್ರತಾಪ್ ಯಾದವ್

ಪಾಟ್ನಾ: ತನಗೆ ವಿಚ್ಛೇದನ ನೀಡಲು ಕೋಟ್ಯಂತರ ರೂ ಪರಿಹಾರ ನೀಡುವಂತೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ತಮ್ಮ ಪತ್ನಿ ಐಶ್ವರ್ಯಾ ಮತ್ತು ಅವರ ಕುಟುಂಬಸ್ಥರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಮಂಗಳವಾರ ತಮ್ಮ ಪತ್ನಿ ಐಶ್ವರ್ಯಾ ಮತ್ತು ಆಕೆಯ ಕುಟುಂಬಸ್ಥರು ತನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದು, ವಿಚ್ಛೇದನಕ್ಕೆ ಕೋಟ್ಯಂತರ ರೂಪಾಯಿ ಪರಿಹಾರ ನೀಡುವಂತೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ತಮ್ಮ ಫೇಸ್ ಬುಕ್ ಖಾತೆಯಿಂದ ಲೈವ್ ಮಾಡಿ ಈ ಕುರಿತು ತೇಜ್ ಪ್ರತಾಪ್ ಆರೋಪ ಮಾಡುತ್ತಿದ್ದು, ಪತ್ನಿ ಐಶ್ವರ್ಯಾ ಮತ್ತು ಅವರ ಕುಟುಂಬದ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ನನ್ನ ಅತ್ತೆ-ಮಾವಂದಿರು ನನಗೆ ಕಿರುಕುಳ ನೀಡುತ್ತಿದ್ದಾರೆ. ನನ್ನಿಂದ ಕೋಟ್ಯಂತರ ರೂಪಾಯಿ ಪರಿಹಾರಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಅವರು ನನ್ನ ತಂದೆ-ತಾಯಿಯನ್ನು ನಿಂದಿಸಿದ್ದಾರೆ. ನನ್ನ ತಂದೆ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿದ್ದಾರೆ, ನಾನು ಪ್ರಸ್ತುತ ವಿಚ್ಛೇದನದ ದುಸ್ಥಿತಿಯನ್ನು ಎದುರಿಸುತ್ತಿದ್ದೇನೆ ಎಂದು ತೇಜ್ಪ್ರತಾಪ್ ಯಾದವ್ ಹೇಳಿದ್ದಾರೆ. 

ಅತ್ತೆಯ ವಿರುದ್ಧ ಸಾಕ್ಷ್ಯ
ಲೈವ್‌ನಲ್ಲಿ ತೇಜ್ ಪ್ರತಾಪ್ ಯಾದವ್, "ನನ್ನ ಸಾರ್ವಜನಿಕ ಪ್ರತಿಷ್ಠೆಯನ್ನು ಹಾಳುಮಾಡುವ ಸಂಚು ನಡೆಯುತ್ತಿದೆ. ಅವರು ನನ್ನ ಕುಟುಂಬವನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರು ನನ್ನ ತಂದೆ, ತಾಯಿ, ಸಹೋದರ ಮತ್ತು ಸಹೋದರಿಯರನ್ನು ಗುರಿಯಾಗಿಸುತ್ತಿದ್ದಾರೆ. ನನ್ನ ವಿರುದ್ಧ ಅನೇಕ ವಿಡಿಯೋ ಮತ್ತು ಆಡಿಯೋ ಸಾಕ್ಷ್ಯಗಳಿವೆ. ನನ್ನ ಹೆಂಡತಿಗೆ ಸಂಬಂಧಿಸಿದ  ಹಲವು ವಿಡಿಯೋಗಳು ನನ್ನ ಬಳಿ ಕೂಡ ಇದೆ. ಆದರೆ ನಾನು ಆಕೆಯ ಗೌರವಕ್ಕೆ ಧಕ್ಕೆ ತರಲು ಬಯಸುವುದಿಲ್ಲ. ಇದು ತುಂಬಾ ಸೂಕ್ಷ್ಮ ವಿಷಯವಾಗಿದೆ, ಆದ್ದರಿಂದ ನಾನು ಇದನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಹಾಕುವುದನ್ನು ತಡೆಯುತ್ತಿದ್ದೇನೆ' ಎಂದು ಹೇಳಿದ್ದಾರೆ."

ಮತ್ತೊಂದೆಡೆ, ತೇಜ್ ಪ್ರತಾಪ್ ಯಾದವ್ ಮಾಧ್ಯಮ ಸಂಸ್ಥೆಗಳಿಗೆ ತಪ್ಪು ಮಾಹಿತಿ ಪ್ರಕಟಿಸದಂತೆ ವಿನಂತಿಸಿದ್ದು, "ನನ್ನ ಸಾರ್ವಜನಿಕ ಪ್ರತಿಷ್ಠೆಗೆ ಧಕ್ಕೆ ತರಲು ಕೆಲವು ಮಾಧ್ಯಮ ಸಂಸ್ಥೆಗಳು ವಿರೋಧ ಪಕ್ಷಗಳ ಪ್ರಭಾವದ ಅಡಿಯಲ್ಲಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ ಎಂದು ನನಗೆ ತಿಳಿದಿತ್ತು. ಹಾಗೆ ಮಾಡದಂತೆ ನಾನು ಅವರಿಗೆ ವಿನಂತಿಸುತ್ತೇನೆ" ಎಂದು ಮನವಿ ಮಾಡಿದ್ದಾರೆ.

ಕಳೆದ 4 ವರ್ಷಗಳಿಂದ ಕೌಟುಂಬಿಕ ನ್ಯಾಯಾಲಯದಲ್ಲಿ ತೇಜ್ ಪ್ರತಾಪ್ ಮತ್ತು ಪತ್ನಿ ಐಶ್ವರ್ಯಾ ವಿಚ್ಛೇದನ ಪ್ರಕರಣ ನಡೆಯುತ್ತಿದೆ. ಈ ಹಿಂದೆ ಸಾಕಷ್ಟು ಬಾರಿ ತೇಜ್ ಪ್ರತಾಪ್ ತಮ್ಮ ಪತ್ನಿ ಐಶ್ವರ್ಯಾ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com