ಗ್ರಾಹಕರೇ 'ಐಎಸ್‌ಐ ಮಾರ್ಕ್' ಹೊಂದಿರುವ ಆಟಿಕೆಗಳನ್ನು ಮಾತ್ರ ಖರೀದಿಸಿ: ಭಾರತೀಯ ಮಾನಕ ಬ್ಯೂರೋ

'ಐಎಸ್‌ಐ ಮಾರ್ಕ್' ಹೊಂದಿರುವ ಆಟಿಕೆಗಳನ್ನು ಮಾತ್ರ ಮಾರುಕಟ್ಟೆಯಿಂದ ಖರೀದಿಸುವಂತೆ ಭಾರತೀಯ ಮಾನದಂಡಗಳ ಬ್ಯೂರೋ(ಬಿಐಎಸ್) ಗ್ರಾಹಕರನ್ನು ಒತ್ತಾಯಿಸಿದೆ.
ಆಟಿಕೆಗಳು
ಆಟಿಕೆಗಳು

ನವದೆಹಲಿ: 'ಐಎಸ್‌ಐ ಮಾರ್ಕ್' ಹೊಂದಿರುವ ಆಟಿಕೆಗಳನ್ನು ಮಾತ್ರ ಮಾರುಕಟ್ಟೆಯಿಂದ ಖರೀದಿಸುವಂತೆ ಭಾರತೀಯ ಮಾನದಂಡಗಳ ಬ್ಯೂರೋ (ಬಿಐಎಸ್) ಗ್ರಾಹಕರನ್ನು ಒತ್ತಾಯಿಸಿದೆ. 

ಏಕೆಂದರೆ ಅಂತಹ ಉತ್ಪನ್ನಗಳಿಗೆ ಕಡ್ಡಾಯ ಗುಣಮಟ್ಟದ ಪ್ರಮಾಣೀಕರಣವಿರುವುದರಿಂದ ಬಿಐಎಸ್ ಗ್ರಾಹಕರಲ್ಲಿ ಈ ಮನವಿ ಮಾಡಿದೆ.

ಅಲ್ಲದೆ, 'ಐಎಸ್‌ಐ ಮಾರ್ಕ್‌' ಇಲ್ಲದೇ ಯಾವುದೇ ಆಟಿಕೆ ಮಾರಾಟ ಮಾಡುವುದು ಕಂಡುಬಂದರೆ ಗ್ರಾಹಕರು ದೂರು ನೀಡಿ. ನಿಮ್ಮ ದೂರುಗಳನ್ನು ಬಿಐಎಸ್ ಕೇರ್ ಅಪ್ಲಿಕೇಶನ್ ಮೂಲಕ ಸಲ್ಲಿಸಬಹುದು ಅಥವಾ @bis.gov.in ಗೆ ಬರೆಯಬಹುದು ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

BIS ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಉತ್ಪನ್ನ ತಯಾರಾಗಿರುತ್ತದೆ ಎಂಬುದನ್ನು  ಉತ್ಪನ್ನದ ಮೇಲಿನ ISI ಗುರುತು ಎಂದು ಪ್ರಮಾಣೀಕರಿಸುತ್ತದೆ. ಇದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಗುಣಮಟ್ಟವನ್ನು ಹೊಂದಿಸುವ ಸಂಸ್ಥೆಯಾಗಿದೆ.

ಜನವರಿ 2021ರಿಂದ ಆಟಿಕೆಗಳು ಕಡ್ಡಾಯವಾಗಿ ಗುಣಮಟ್ಟದ ಪ್ರಮಾಣೀಕರಣವನ್ನು ಹೊಂದಿರಬೇಕು. ಇದರ ಪರಿಣಾಮವಾಗಿ, ಭಾರತೀಯ ಮಾನದಂಡಕ್ಕೆ ಅನುಗುಣವಾಗಿಲ್ಲದ ಮತ್ತು BIS ಸ್ಟ್ಯಾಂಡರ್ಡ್ ಮಾರ್ಕ್ ಅಂದರೆ 'ISI ಮಾರ್ಕ್' ಅನ್ನು ಪರವಾನಗಿ ಅಡಿಯಲ್ಲಿ ಹೊಂದಿರದ ಆಟಿಕೆಗಳನ್ನು ತಯಾರಿಸಲು, ಆಮದು ಮಾಡಿಕೊಳ್ಳಲು ಅಥವಾ ವಿತರಿಸಲು, ಸಂಗ್ರಹಿಸಲು, ಬಾಡಿಗೆಗೆ, ಗುತ್ತಿಗೆಗೆ ಅಥವಾ ಮಾರಾಟಕ್ಕೆ ಪ್ರದರ್ಶಿಸಲು ಯಾವುದೇ ವ್ಯಕ್ತಿಗೆ ಅನುಮತಿ ಇಲ್ಲ. 

800ಕ್ಕೂ ಹೆಚ್ಚು ಆಟಿಕೆ ತಯಾರಕರು ಹೆಚ್ಚಾಗಿ MSME ವಲಯದಿಂದ ಈಗಾಗಲೇ BIS ಪ್ರಮಾಣೀಕರಣವನ್ನು ತೆಗೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com