ಕೇರಳ: ಯೂಟ್ಯೂಬ್ ನೋಡಿಕೊಂಡು ವೈನ್ ತಯಾರಿಸಿದ ಬಾಲಕ; ಅದನ್ನು ಕುಡಿದು ಆಸ್ಪತ್ರೆ ಸೇರಿದ ಆತನ ಗೆಳೆಯ

ಯೂಟ್ಯೂಬ್ ನ್ನು ನೋಡಿಕೊಂಡು ವೈನ್ ತಯಾರಿಸಿದ ಬಾಲಕನೋರ್ವನಿಗೆ ಈಗ ಸಂಕಷ್ಟ ಎದುರಾಗಿದೆ. 
ವೈನ್  (ಸಾಂಕೇತಿಕ ಚಿತ್ರ)
ವೈನ್ (ಸಾಂಕೇತಿಕ ಚಿತ್ರ)

ತಿರುವನಂತಪರಂ: ಯೂಟ್ಯೂಬ್ ನ್ನು ನೋಡಿಕೊಂಡು ವೈನ್ ತಯಾರಿಸಿದ ಬಾಲಕನೋರ್ವನಿಗೆ ಈಗ ಸಂಕಷ್ಟ ಎದುರಾಗಿದೆ. 

ವಿಡಿಯೋ ನೋಡಿಕೊಂಡು ಸ್ವಯಂ ತಾನೇ ವೈನ್ ತಯಾರಿಸಿದ್ದು, ಅದನ್ನು ಸ್ನೇಹಿತನಿಗೆ ನೀಡಿದ್ದಾರೆ. ಅದನ್ನು ಕುಡಿದ ಬಳಿಕ ಆತನಿಗೆ ವಾಂತಿ, ಅಹಿತ ಉಂಟಾಗಿದ್ದು, ತಕ್ಷಣವೇ ಚಿರಾಯಿಂಕೀಝು ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು. 

ವೈನ್ ಕುಡಿದ ಈತನ ಮತ್ತೋರ್ವ ಸಹಪಾಠಿಯೂ ಆಸ್ಪತ್ರೆಗೆ ದಾಖಲಾಗಿದ್ದ. ಈಗ ಆತನ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ತಮಗೆ ಲಭ್ಯವಾದ ಮಾಹಿತಿಯ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಚಾರಣೆ ವೇಳೆ ಬಾಲಕನೋರ್ವ ತಾನು ತನ್ನ ಪೋಷಕರು ತಂದಿದ್ದ ದ್ರಾಕ್ಷಿಯನ್ನು ಉಪಯೋಗಿಸಿ ಯೂಟ್ಯೂಬ್ ಚಾನೆಲ್ ನೋಡಿಕೊಂಡು ವೈನ್ ತಯಾರಿಸಿದ್ದಾಗಿ ಹೇಳಿದ್ದಾನೆ. ತಾನು ವೈನ್ ತಯಾರಿಸುವಾಗ ಸ್ಪಿರಿಟ್ ಅಥವಾ ಇನ್ಯಾವುದೇ ಆಲ್ಕೊಹಾಲ್ ಗಳನ್ನು ಸಾಮಗ್ರಿಯಾಗಿ ಬಳಕೆ ಮಾಡಿಲ್ಲ. ಯೂಟ್ಯೂಬ್ ನಲ್ಲಿ ತೋರಿಸಿದಂತೆ ವೈನ್ ತಯಾರಿಸಿದ ಬಳಿಕ ಅದನ್ನು ಬಾಟಲ್ ನಲ್ಲಿ ಹಾಕಿ ನೆಲದ ಒಳಗೆ ಹೂತುಹಾಕಿದ್ದಾಗಿ ತಿಳಿಸಿದ್ದಾನೆ.

ಇದನ್ನೂ ಓದಿ: ಯೂಟ್ಯೂಬ್ ನೋಡಿ ಟೆಕ್ ಟೂಲ್ ಬಳಸಿ ಕಾರು ಖದಿಯುತ್ತಿದ್ದ ಖತರ್ನಾಕ್ ಕಳ್ಳನ ಬಂಧನ
 
ಪೊಲೀಸರು ಆ ವೈನ್ ನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದ್ದಾರೆ. ವೈನ್ ನಲ್ಲಿ ಮದ್ಯದ ಅಂಶ ಅಥವ ಸ್ಪಿರಿಟ್ ಮಿಶ್ರಣವಾಗಿರುವುದು ಕಂಡುಬಂದಲ್ಲಿ ಅದನ್ನು ತಯಾರಿಸಿದ ಬಾಲಕನ ವಿರುದ್ಧ ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಆತ ಮಾಡಿರುವ ಕೃತ್ಯದ ಪರಿಣಾಮಗಳನ್ನು ಆತನ ಪೋಷಕರಿಗೆ ಹಾಗೂ ಶಾಲಾ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com