ಉತ್ತರ ಪ್ರದೇಶ: ಹಗರಣಗಳ ಬಯಲು ಮಾಡಿದಕ್ಕೆ 7 ಬಾರಿ ಗುಂಡೇಟು ತಿಂದಿದ್ದ ಅಧಿಕಾರಿ UPSC ಯಲ್ಲಿ ಪಾಸ್!
ಭ್ರಷ್ಟಾಚಾರ ಪ್ರಕರಣವನ್ನು ಬಹಿರಂಗಪಡಿಸಿದ್ದಕ್ಕಾಗಿ ಏಳು ಬಾರಿ ಗುಂಡೇಟು ಎದುರಿಸಿದ ಉತ್ತರ ಪ್ರದೇಶ ಅಧಿಕಾರಿಯೊಬ್ಬರು ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
Published: 01st June 2022 03:21 PM | Last Updated: 01st June 2022 03:26 PM | A+A A-

ರಿಂಕೂ ಸಿಂಗ್
ಲಖನೌ: ಭ್ರಷ್ಟಾಚಾರ ಪ್ರಕರಣವನ್ನು ಬಹಿರಂಗಪಡಿಸಿದ್ದಕ್ಕಾಗಿ ಏಳು ಬಾರಿ ಗುಂಡೇಟು ಎದುರಿಸಿದ ಉತ್ತರ ಪ್ರದೇಶ ಅಧಿಕಾರಿಯೊಬ್ಬರು ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ರಿಂಕೂ ಸಿಂಗ್ ರಾಹೀ ಅವರು ಯುಪಿಎಸ್ ಸಿ ಪರೀಕ್ಷೆಯಲ್ಲಿ 683ನೇ ಶ್ರೇಯಾಂಕ ಪಡೆದಿದ್ದಾರೆ. ಕೊನೆಯ ಬಾರಿ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದು ಅವರಿಗೆ ಖುಷಿ ತಂದಿದೆ. ರಿಂಕೂ ಸಿಂಗ್ ಉತ್ತರ ಪ್ರದೇಶದ ಹಾಪುರ್‌ನ ಪ್ರಾಂತೀಯ ನಾಗರಿಕ ಸೇವಾ ಅಧಿಕಾರಿ. 2008ರಲ್ಲಿ ಮುಜಾಫರ್‌ನಗರದಲ್ಲಿ ನಡೆದ ಸ್ಕಾಲರ್‌ಶಿಪ್‌ನಲ್ಲಿ 83 ಕೋಟಿ ಹಗರಣವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ರಾಜ್ಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ.
ಸ್ಕಾಲರ್ ಶಿಪ್ ಹಗರಣದಲ್ಲಿ ಎಂಟು ಜನರ ಮೇಲೆ ಆರೋಪ ಹೊರಿಸಲಾಗಿತ್ತು. ಈ ಪ್ರಕರಣದಲ್ಲಿ ನಾಲ್ವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಹಗರಣ ಬಹಿರಂಗವಾದ ಕೂಡಲೇ, ರಿಂಕೂ ರಹೀ ಮೇಲೆ ಏಳು ಬಾರಿ ಗುಂಡು ಹಾರಿಸಲಾಯಿತು. ಅವರ ಮುಖಕ್ಕೂ ಗುಂಡು ಹಾರಿಸಲಾಯಿತು. ಇದರಿಂದ ಅವರ ಮುಖವು ವಿರೂಪಗೊಂಡಿದ್ದು, ದೃಷ್ಟಿ ಮತ್ತು ಶ್ರವಣವನ್ನು ಕಳೆದುಕೊಂಡಿದ್ದಾರೆ. ದಾಳಿಯಲ್ಲಿ ನನ್ನ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವಿದ್ಯೆ ಕೊಡಿಸಲು ಸಾಲ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮಗಳು UPSC ಯಲ್ಲಿ ಟಾಪರ್!
ಕುತೂಹಲಕಾರಿಯಾಗಿ, ರಾಜ್ಯ ಚಾಲಿತ ಐಎಎಸ್ ಕೋಚಿಂಗ್ ಸೆಂಟರ್‌ನ ನಿರ್ದೇಶಕರಾಗಿ ಹಲವು ವರ್ಷಗಳಿಂದ ನಾಗರಿಕ ಸೇವೆಗಳ ಆಕಾಂಕ್ಷಿಗಳಿಗೆ ಅವರು ಕಲಿಸಿದ್ದಾರೆ. ನನ್ನ ವಿದ್ಯಾರ್ಥಿಗಳು ಯುಪಿಎಸ್ ಸಿ ಪರೀಕ್ಷೆಯನ್ನು ತೆಗೆದುಕೊಳ್ಳುವಂತೆ ಹೇಳುತ್ತಿದ್ದರು. ಅವರ ಪ್ರಚೋದನೆಯಿಂದಾಗಿ ನಾನು ಇದನ್ನು ಮಾಡಿದ್ದೇನೆ. ಇದಕ್ಕೂ ಮೊದಲು 2004ರಲ್ಲಿ ನಾನು ಪ್ರಾಂತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದೆ ಎಂದು ಅವರು ಹೇಳಿದರು.
ನನಗೆ ಸಾರ್ವಜನಿಕ ಹಿತಾಸಕ್ತಿ ಮುಖ್ಯವಾಗಿದೆ. ಸ್ವಹಿತಾಸಕ್ತಿ ಮತ್ತು ಸಾರ್ವಜನಿಕ ಹಿತಾಸಕ್ತಿಗಳ ನಡುವೆ ಘರ್ಷಣೆಯಾದರೆ, ನಾನು ಸಾರ್ವಜನಿಕ ಹಿತಾಸಕ್ತಿಯನ್ನು ಆರಿಸಿಕೊಳ್ಳುತ್ತೇನೆ ಎಂದು ರಿಂಕೂ ರಹೀ ಹೇಳಿದ್ದಾರೆ.