ಮೋದಿ ಜಗತ್ತಿನ ಹೆಮ್ಮೆ, ಕಾಂಗ್ರೆಸ್ ಮುಕ್ತ ಗುಜರಾತ್ ಅಭಿಯಾನ ಮಾಡುವೆ: 'ಕೈ' ಕೊಟ್ಟು, ಬಿಜೆಪಿ ಸೇರಿದ ಹಾರ್ದಿಕ್ ಪಟೇಲ್
ಪಾಟಿದಾರ್ ಚಳುವಳಿ ಮೂಲಕ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಇದೀಗ ಬಿಜೆಪಿ ಪಕ್ಷಕ್ಕೆ ಗುರುವಾರ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
Published: 02nd June 2022 02:13 PM | Last Updated: 02nd June 2022 02:28 PM | A+A A-

ಬಿಜೆಪಿಗೆ ಸೇರಿದ ಹಾರ್ದಿಕ್ ಪಟೇಲ್
ಗಾಂಧಿನಗರ: ಪಾಟಿದಾರ್ ಚಳುವಳಿ ಮೂಲಕ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಇದೀಗ ಬಿಜೆಪಿ ಪಕ್ಷಕ್ಕೆ ಗುರುವಾರ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
પ્રદેશ કાર્યાલય 'શ્રી કમલમ્' ખાતે પ્રદેશ અધ્યક્ષ શ્રી @CRPaatil ની અધ્યક્ષતામાં કોંગ્રેસના ભૂતપૂર્વ નેતા શ્રી @HardikPatel_ તેમના સમર્થકો સાથે ભારતીય જનતા પાર્ટીમાં જોડાયા. pic.twitter.com/TLTJpBhwhr
— BJP Gujarat (@BJP4Gujarat) June 2, 2022
ಕಳೆದ ತಿಂಗಳು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದ ಮಾಜಿ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಗುಜರಾತ್ನಲ್ಲಿ ವಿಧಾನಸಭೆ ಚುನಾವಣೆಗೆ ತಿಂಗಳುಗಳಿರುವಂತೆಯೇ ಗುರುವಾರ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದಾರೆ. ಗುಜರಾತ್ ನ ಗಾಂಧಿನಗರದಲ್ಲಿರುವ ಬಿಜೆಪಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಪಕ್ಷದ ರಾಜ್ಯ ಮುಖಂಡ ಸಿಆರ್ ಪಾಟೀಲ್ ಅವರ ಸಮ್ಮುಖದಲ್ಲಿ ಹಾರ್ದಿಕ್ ಪಟೇಲ್ ಬಿಜೆಪಿಗೆ ಸೇರ್ಪಡೆಯಾದರು.
ಇದನ್ನೂ ಓದಿ: ಪ್ರಧಾನಿ ಮೋದಿ ನಾಯಕತ್ವದಡಿ ಸಣ್ಣ ಸೈನಿಕನಾಗಿ ಕೆಲಸ ಮಾಡುತ್ತೇನೆ: ಹಾರ್ದಿಕ್ ಪಟೇಲ್
ಇಂದು ಮುಂಜಾನೆ, ಪಟೇಲ್ ಅವರು ಕೆಲಸ ಮಾಡಲು ಬಿಜೆಪಿಗೆ ಸೇರುತ್ತಿದ್ದೇನೆ ಎಂದಿದ್ದರು. ಇಂದು ನಾನು ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇನೆ, ನಾನು ಪ್ರಧಾನಿ ಮೋದಿ ನೇತೃತ್ವದಲ್ಲಿ ಸಣ್ಣ ಸೈನಿಕನಾಗಿ ಕೆಲಸ ಮಾಡುತ್ತೇನೆ, ನಾನು ಯಾವುದೇ ಹುದ್ದೆಗಾಗಿ ಯಾರ ಮುಂದೆಯೂ ಯಾವುದೇ ಬೇಡಿಕೆಗಳನ್ನು ಇಟ್ಟಿಲ್ಲ, ನಾನು ಕೆಲಸ ಮಾಡಲು ಬಿಜೆಪಿಗೆ ಸೇರುತ್ತಿದ್ದೇನೆ" ಎಂದು ಅವರು ಟ್ವೀಟ್ ಮಾಡಿದ್ದರು.
ಕಾಂಗ್ರೆಸ್ ಮುಕ್ತ ಗುಜರಾತ್' ಅಭಿಯಾನ
"ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳೊಂದಿಗೆ ಜನರು ಸಂಪರ್ಕ ಹೊಂದುತ್ತಿರುವಾಗ, ನಾನು ಕೂಡ ಅದೇ ರೀತಿ ಮಾಡಬೇಕು. ಪ್ರಧಾನಿ ಮೋದಿ ಇಡೀ ಪ್ರಪಂಚದ ಹೆಮ್ಮೆ" ಎಂದು ಪಟೇಲ್ ಹೇಳಿದ್ದಾರೆ. ಅಂತೆಯೇ ಗುಜರಾತ್ನಲ್ಲಿ ಕಾಂಗ್ರೆಸ್ ಮುಕ್ತ ಮಾಡುವ ಅಭಿಯಾನವನ್ನು ಪ್ರಾರಂಭಿಸುವುದಾಗಿ ಪಟೇಲ್ ಇದೇ ವೇಳೆ ಘೋಷಣೆ ಮಾಡಿದ್ದಾರೆ.
આ પ્રસંગે પૂર્વ નાયબ મુખ્યમંત્રી શ્રી @Nitinbhai_Patel , પ્રદેશ મહામંત્રી શ્રી @rajnipatel_mla , શ્રી @VinodChavdaBJP , શ્રી @pradipsinhbjp સહિત પ્રદેશ પદાધિકારીશ્રીઓ, હોદ્દેદારશ્રીઓ અને મોટી સંખ્યામાં કાર્યકર્તાઓ ઉપસ્થિત રહ્યાં. pic.twitter.com/q2BHDjqKO2
— BJP Gujarat (@BJP4Gujarat) June 2, 2022
ಮೋದಿ ಜಗತ್ತಿನ ಹೆಮ್ಮೆ
ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವದ ಹೆಮ್ಮೆ ಎಂದು ಕರೆದ ಪಟೇಲ್, ಬಿಜೆಪಿ ಸೇರಿದ ನಂತರ ಪ್ರತಿ 10 ದಿನಗಳಿಗೊಮ್ಮೆ ಶಾಸಕರು ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಬಿಜೆಪಿಗೆ ಸೇರುವಂತೆ ಹೇಳುವ ಕಾರ್ಯಕ್ರಮ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಹಾರ್ದಿಕ್ ಪಟೇಲ್ 'ಕಮಲ' ಹಿಡಿಯುವುದು ಖಚಿತ: ಗುಜರಾತ್ ಚುನಾವಣೆ ಬೆನ್ನಲ್ಲೇ ಬಿಜೆಪಿಗೆ ಹೆಚ್ಚಿದ ಬಲ
2015 ರಲ್ಲಿ ಗುಜರಾತ್ನಲ್ಲಿ ಪಾಟಿದಾರ್ ಮೀಸಲಾತಿ ಆಂದೋಲನವನ್ನು ಮುನ್ನಡೆಸಿದಾಗ ಹಾರ್ದಿಕ್ ರಾಜಕೀಯಕ್ಕೆ ಬಂದರು, 2017 ರ ರಾಜ್ಯ ವಿಧಾನಸಭೆ ಚುನಾವಣೆಯ ಪೂರ್ವದಲ್ಲಿ ಪ್ರಚಾರವನ್ನು ಮಾಡಿದ್ದರು. ಆರಂಭದಲ್ಲಿ, ಪಟೇಲ್ ಪಾಟಿದಾರ್ ಸಮುದಾಯಕ್ಕೆ ಒಬಿಸಿ ಸ್ಥಾನಮಾನವನ್ನು ಒತ್ತಾಯಿಸಿದ್ದ ಹಾರ್ದಿಕ್ ಪಟೇಲ್ ಹೋರಾಟ ಬಳಿಕ ಆರ್ಥಿಕವಾಗಿ ದುರ್ಬಲ ವರ್ಗದ (EWS) ಮೀಸಲಾತಿಯ ಬೇಡಿಕೆಯಾಗಿ ರೂಪಾಂತರಗೊಂಡಿತು. ರಾಜ್ಯದ ರಾಜಕೀಯ ರಂಗದಲ್ಲಿ ಅವರ ಹೊರಹೊಮ್ಮುವಿಕೆಯು ಆಗಿನ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರ ಸ್ಥಾನಕ್ಕೇ ಕುತ್ತು ತಂದಿತು. 2016 ರಲ್ಲಿ, ಆನಂದಿಬೆನ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು.
ಇದನ್ನೂ ಓದಿ: ನಿಮಗೆ ರಾಮನ ಮೇಲೆ ಯಾಕೆ ಇಷ್ಟೊಂದು ದ್ವೇಷ?: ಕಾಂಗ್ರೆಸ್ ವಿರುದ್ಧ ಹಾರ್ದಿಕ್ ಪಟೇಲ್ ತೀವ್ರ ವಾಗ್ದಾಳಿ
2019ರ ಲೋಕಸಭೆ ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ಸಮ್ಮುಖದಲ್ಲಿ ಪಟೇಲ್ ಕಾಂಗ್ರೆಸ್ ಸೇರಿದರು. ನಂತರ ಅವರು 2020 ರಲ್ಲಿ ಗುಜರಾತ್ನಲ್ಲಿ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡರು. ಆದರೆ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಕಾಂಗ್ರೆಸ್ ನಾಯಕತ್ವವು ತನ್ನನ್ನು ಬದಿಗೊತ್ತಿದೆ ಎಂದು ಅವರು ಆರೋಪಿಸಿದರು ಮತ್ತು ಅಂತಿಮವಾಗಿ 2022 ರಲ್ಲಿ ಆ ಪಕ್ಷವನ್ನು ತೊರೆದರು. ಈ ವರ್ಷದ ಮೇ 19 ರಂದು, ಪಟೇಲ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಗುಜರಾತ್ ಕಾಂಗ್ರೆಸ್ ನಾಯಕರು ರಾಜ್ಯದ ನೈಜ ಸಮಸ್ಯೆಗಳನ್ನು ಪರಿಹರಿಸಲು ತಲೆ ಕೆಡಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಗುಜರಾತ್ಗೆ ಬರುವ ಕೇಂದ್ರ ನಾಯಕರಿಗೆ ಸಮಯಕ್ಕೆ "ಚಿಕನ್ ಸ್ಯಾಂಡ್ವಿಚ್" ಅನ್ನು ಖಚಿತಪಡಿಸಿಕೊಳ್ಳಲು ಹೆಚ್ಚು ಗಮನಹರಿಸಿದ್ದಾರೆ ಎಂದು ಟೀಕಿಸಿದ್ದರು.