'ಹಣೆ ಮೇಲೆ ಗಾಯ, ರಕ್ತಸಿಕ್ತ ಟವೆಲ್': ಮರಣೋತ್ತರ ಪರೀಕ್ಷೆ ವರದಿ ಬಹಿರಂಗ; ಗಾಯಕ ಕೆಕೆ ಸಾವಪ್ಪಿದ್ದು ಹೇಗೆ?
ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾವಿನ ರೀತಿಯಲ್ಲೇ ಅಚಾನಕ್ಕಾಗಿ ಸಾವನ್ನಪ್ಪಿದ ಖ್ಯಾತ ಸಿನಿ ಗಾಯಕ ಕೃಷ್ಣ ಕುಮಾರ್ ಕುನ್ನತ್ (ಕೆಕೆ) ಅವರ ಮರಣೋತ್ತರ ಪರೀಕ್ಷೆ ವರದಿ ಬಹಿರಂಗವಾಗಿದೆ.
Published: 02nd June 2022 12:41 PM | Last Updated: 02nd June 2022 01:17 PM | A+A A-

ಬಾಲಿವುಡ್ ಗಾಯಕ ಕೆಕೆ
ಕೋಲ್ಕತಾ: ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾವಿನ ರೀತಿಯಲ್ಲೇ ಅಚಾನಕ್ಕಾಗಿ ಸಾವನ್ನಪ್ಪಿದ ಖ್ಯಾತ ಸಿನಿ ಗಾಯಕ ಕೃಷ್ಣ ಕುಮಾರ್ ಕುನ್ನತ್ (ಕೆಕೆ) ಅವರ ಮರಣೋತ್ತರ ಪರೀಕ್ಷೆ ವರದಿ ಬಹಿರಂಗವಾಗಿದೆ.
ಇತ್ತೀಚೆಗೆ ಕೋಲ್ಕತ್ತಾದಲ್ಲಿ ನಡೆಯುತ್ತಿದ್ದ ಲೈವ್ ಸಂಗೀತ ಕಾರ್ಯಕ್ರಮದ ನಂತರ ನಿಧನರಾದ ಖ್ಯಾತ ಬಾಲಿವುಡ್ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ಸಂಶೋಧನಾ ವರದಿ ಸಾವಿನಲ್ಲಿ ಯಾವುದೇ ರೀತಿಯ ಕೈವಾಡವಿಲ್ಲ. ಅವರು ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಇದನ್ನೂ ಓದಿ: ಖ್ಯಾತ ಗಾಯಕ ಕೆಕೆ ಹಠಾತ್ ನಿಧನ: ಕಂಬನಿ ಮಿಡಿದ ಚಿತ್ರರಂಗ, ಗಾಯಕರು
ಅಂತೆಯೇ ಜನಪ್ರಿಯ ಗಾಯಕ ದೀರ್ಘಕಾಲದ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಪರೀಕ್ಷಾ ವರದಿಗಳಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ.
"ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯು ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ನಿಂದಾಗಿ ಗಾಯಕ ಕೆಕೆ ಸಾವನ್ನಪ್ಪಿದ್ದಾರೆ ಎಂದು ಸೂಚಿಸಿದೆ. ಅವರ ಸಾವಿನ ಹಿಂದೆ ಯಾವುದೇ ದುಷ್ಕೃತ್ಯವಿಲ್ಲ. ಗಾಯಕನಿಗೆ ದೀರ್ಘಕಾಲದ ಹೃದಯ ಸಂಬಂಧಿ ಸಮಸ್ಯೆಗಳಿದ್ದವು ಎಂದು ಕ್ಲಿನಿಕಲ್ ಪರೀಕ್ಷೆಯಲ್ಲಿ ಕಂಡುಬಂದಿದೆ. ಪ್ರಸ್ತುತ ತಮದೆ ಪ್ರಾಥಮಿಕ ಮಾಹಿತಿ ಮಾತ್ರ ಲಭ್ಯವಾಗಿದ್ದು, ಅಂತಿಮ ವರದಿ 72 ಗಂಟೆಗಳ ನಂತರ ಲಭ್ಯವಾಗಲಿದೆ ಎಂದು ಅಧಿಕಾರಿ ಹೇಳಿದರು.
ಇದನ್ನೂ ಓದಿ: ಗಾಯಕ ಕೆಕೆ ನಿಧನ: ಮಮತಾ ಸರ್ಕಾರದ ದೋಷ ಎಂದ ಬಿಜೆಪಿ; ತಿರುಗೇಟು ನೀಡಿದ ತೃಣಮೂಲ ಕಾಂಗ್ರೆಸ್
ಮಂಗಳವಾರ ರಾತ್ರಿ ಕೋಲ್ಕತ್ತಾದ ದಕ್ಷಿಣ ಭಾಗದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಕೆಕೆ ಅನಾರೋಗ್ಯಕ್ಕೆ ತುತ್ತಾಗಿ ಹೋಟೆಲ್ಗೆ ಹಿಂತಿರುಗಿದ್ದರು. ಅಲ್ಲಿ ಅವರು 'ಪ್ರಜ್ಞಾಹೀನರಾಗಿ ಬಿದ್ದ' ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಕೆಕೆ 'ಮೃತಪಟ್ಟಿದ್ದಾರೆ' ಎಂದು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ತನಿಖೆಯ ಭಾಗವಾಗಿ ಅಧಿಕಾರಿಗಳು ಹೋಟೆಲ್ ಅಧಿಕಾರಿಗಳೊಂದಿಗೆ ಮಾತನಾಡಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ನಾವು ಕೆಕೆ ತಂಗಿದ್ದ ಹೋಟೆಲ್ನ ಮ್ಯಾನೇಜರ್ ಮತ್ತು ಇತರ ಸಿಬ್ಬಂದಿಗಳೊಂದಿಗೆ ಮಾತನಾಡಿದ್ದೇವೆ ಮತ್ತು ಮಂಗಳವಾರ ರಾತ್ರಿ ಅವರೊಂದಿಗೆ ಪ್ರದರ್ಶನ ನೀಡಿದ ಅವರ ತಂಡದ ಸದಸ್ಯರೊಂದಿಗೂ ಮಾತನಾಡಿದ್ದೇವೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಡಿಯೋ: ಗಾಯನ ಲೋಕದ ಅನರ್ಘ್ಯ ಮುತ್ತು 'ಕೆಕೆ'; ಕೃಷ್ಣಕುಮಾರ್ ಕುನ್ನತ್ ಕುರಿತು ಆಸಕ್ತಿಕರ ವಿಚಾರಗಳು
ಗಾಯಕನ ಹಣೆ ಮೇಲೆ ಗಾಯ, ರಕ್ತದ ಟವೆಲ್!!
ಗಾಯಕ ಕೆಕೆ ರಾತ್ರಿ 9.10 ರ ಸುಮಾರಿಗೆ ಹೋಟೆಲ್ಗೆ ಪ್ರವೇಶಿಸಿದ್ದು, ರಾತ್ರಿ 9.40 ರ ಸುಮಾರಿಗೆ ಆಸ್ಪತ್ರೆಗೆ ಆ್ಯಂಬುಲೆನ್ಸ್ ನಲ್ಲಿ ಅವರನ್ನು ಕರೆದೊಯ್ಯಲಾಯಿತು. ಹೋಟೆಲ್ನೊಳಗೆ ಈ ಅವಧಿಯಲ್ಲಿ ಏನಾಯಿತು ಎಂಬುದರ ಕುರಿತು ನಾವು ಗಮನಹರಿಸುತ್ತಿದ್ದೇವೆ. ಕೆಕೆ ಅವರ ಕೊಠಡಿಯಿಂದ ರಕ್ತದ ಕಲೆಯ ಟವೆಲ್ ಅನ್ನು ಇತರ ಪುರಾವೆಗಳ ಜೊತೆಗೆ ವಶಪಡಿಸಿಕೊಂಡಿದ್ದೇವೆ. ಕಾನ್ಸರ್ಟ್ ಸ್ಥಳದಿಂದ ಹೋಟೆಲ್ಗೆ ಹಿಂತಿರುಗುವಾಗ ಗಾಯಕ ಕೆಕೆ 'ಸಾಕಷ್ಟು ನೋವು ಅನುಭವಿಸುತ್ತಿದ್ದರು' ಎಂದು ಅವರ ಮ್ಯಾನೇಜರ್ ಹೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
"ಹೋಟೆಲ್ ಕೊಠಡಿಯೊಳಗೆ ಕುರ್ಚಿಯನ್ನು ಎಳೆಯಲು ಪ್ರಯತ್ನಿಸುವಾಗ ಗಾಯಕ ಕೆಳಗೆ ಬಿದ್ದು ಹಣೆಯ ಮೇಲೆ ಗಾಯ ಮಾಡಿಕೊಂಡರು ಎಂದು ಮ್ಯಾನೇಜರ್ ಹೇಳಿದರು. ನಂತರ ಅವರು ತನ್ನ ಹಣೆಯ ರಕ್ತವನ್ನು ಒರೆಸಲು ಟವೆಲ್ ಅನ್ನು ಬಳಸಿದರು ಎಂದು ಅಧಿಕಾರಿ ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಕೋನಗಳನ್ನು ಪರಿಶೀಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.