ಪಂಜಾಬಿ ಗಾಯಕ ಸಿಧು ಮೂಸೆವಾಲಾ ದೇಹ ಹೊಕ್ಕಿದ್ದವು 19 ಗುಂಡುಗಳು: ಮರಣೋತ್ತರ ಪರೀಕ್ಷಾ ವರದಿ
ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ದೇಹದೊಳಗೆ ಬರೋಬ್ಬರಿ 19 ಗುಂಡುಗಳು ಹೊಕ್ಕಿರುವುದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಹಿರಂಗವಾಗಿದೆ.
Published: 03rd June 2022 12:49 AM | Last Updated: 03rd June 2022 12:49 AM | A+A A-

ಸಿಧು ಮೂಸೆವಾಲಾ
ಚಂಡೀಗಢ: ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ದೇಹದೊಳಗೆ ಬರೋಬ್ಬರಿ 19 ಗುಂಡುಗಳು ಹೊಕ್ಕಿರುವುದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಹಿರಂಗವಾಗಿದೆ.
ಐವರು ವೈದ್ಯರ ತಂಡ ಮೂಸೆವಾಲಾ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದು, ಗುಂಡುಗಳು ಅವರ ದೇಹ ಹೊಕ್ಕ 15 ನಿಮಿಷಗಳಲ್ಲೇ ಗಾಯಕ ಸಾವನ್ನಪ್ಪಿದ್ದಾರೆ ಎಂದು ಅವರ ಮರಣೋತ್ತರ ಪರೀಕ್ಷಾ ವರದಿ ತಿಳಿಸಿದೆ.
ಇದನ್ನು ಓದಿ: 424 ವಿಐಪಿಗಳ ಭದ್ರತೆಯನ್ನ ಮರುಸ್ಥಾಪಿಸುತ್ತೇವೆ: ಕೋರ್ಟ್ ಮುಂದೆ ಪಂಜಾಬ್ ಸರ್ಕಾರ ಹೇಳಿಕೆ
ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಭಾನುವಾರ ಮೂಸೆವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ಸಿಧು ಮೂಸೆವಾಲಾ ಎಂದೇ ಖ್ಯಾತರಾಗಿದ್ದ ಶುಭ್ ದೀಪ್ ಸಿಂಗ್ ಸಿಧು ಅವರಿಗೆ ನೀಡಿದ್ದ ಭದ್ರತೆ ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆಯುತ್ತಿದ್ದಂತೆ ಭಾನುವಾರ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಕ ಮೃತಪಟ್ಟಿದ್ದರು.