
ಅರವಿಂದ್ ಕೇಜ್ರಿವಾಲ್, ಮೂಸೆವಾಲ
ನವದೆಹಲಿ: ದುರಾದೃಷ್ಟವಶಾತ್ ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆಯಾಗಿದೆ. ಆದರೆ, ಅದರ ಸುತ್ತ ರಾಜಕೀಯ ಮಾಡಬೇಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.
ದೆಹಲಿಯ ರೋಹಿಣಿ ಪ್ರದೇಶದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಪಂಜಾಬ್ ಮುಖ್ಯಮಂತ್ರಿ ಈಗಾಗಲೇ ಭರವಸೆ ನೀಡಿದ್ದಾರೆ. ಪಂಜಾಬಿನಲ್ಲಿ ಏನೆಲ್ಲಾ ಘಟನೆಗಳು ನಡೆದಿವೆಯೋ ಅವುಗಳ ಸುತ್ತ ರಾಜಕಾರಣ ಮಾಡಬಾರದು, ಆ ವಿಶ್ವಾಸ ನನಗಿದೆ ಎಂದರು.
ಇದನ್ನೂ ಓದಿ: ಗಾಯಕನೊಂದಿಗೆ ದ್ವೇಷವಿತ್ತು, ಸಿಧು ಮೂಸೆವಾಲಾ ಹತ್ಯೆಯಲ್ಲಿ ನನ್ನ ಗ್ಯಾಂಗ್ ಪಾತ್ರವಿದೆ: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್
ಕಳೆದ ಭಾನುವಾರ ರಾಜ್ಯ ಸರ್ಕಾರ ಭದ್ರತೆಯನ್ನು ವಾಪಸ್ ಪಡೆದ ನಂತರ ಪಂಜಾಬಿನ ಮಾನ್ಸಿ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಗುಂಡಿಗೆ 28 ವರ್ಷದ ಮೂಸೆವಾಲ ಬಲಿಯಾಗಿದ್ದರು.