
ಮೆಟ್ರೋ ರೈಲಿನ ಚಿತ್ರ
ನವದೆಹಲಿ: ದೆಹಲಿಯ ದೋರ್ ಬಾಗ್ ಮೆಟ್ರೋ ನಿಲ್ದಾಣದಲ್ಲಿ ಸಹ ಪ್ರಯಾಣಿನಿಂದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳವಾಗಿರುವುದು ವರದಿಯಾಗಿದೆ. ಈ ಮೂಲಕ ಮೆಟ್ರೋ ನಿಲ್ದಾಣಗಳು ಸಹ ಮಹಿಳೆಯರಿಗೆ ಸುರಕ್ಷಿತವಲ್ಲ ಅನ್ನೋದು ಬಯಲಾಗಿದೆ.
ಜೋರ್ ಬಾಗ್ ಮೆಟ್ರೋ ನಿಲ್ದಾಣದಲ್ಲಿ ಸಹ ಪ್ರಯಾಣಿಕನಿಂದ ಲೈಂಗಿಕ ಕಿರುಕುಳ ಎದುರಿಸಿದ್ದೇನೆ ಎಂದು ದೆಹಲಿಯ ಮಹಿಳೆಯೊಬ್ಬರು ಗುರುವಾರ ಟ್ವೀಟ್ ಮಾಡಿದ್ದು, ಘಟನೆಯನ್ನು ಸುಧೀರ್ಘವಾಗಿ ಹೇಳಿಕೊಂಡಿದ್ದಾರೆ. ವಿಳಾಸ ಕೇಳುವ ನೆಪದಲ್ಲಿ ಸಹ ಪ್ರಯಾಣಿಕ ತನ್ನ ಜೊತೆಗೆ ಹೇಗೆ ಅನುಚಿತವಾಗಿ ವರ್ತಿಸಿದ ಎಂಬುದನ್ನು ವಿವರಿಸಿದ್ದಾರೆ.
I normally don't post on twt, but the traumatising incident that i faced today at the Delhi Metro deserves the attention. This is going to be a long thread so pls bear w me.
While travelling on the yellow line today, I faced sexual harassment at the Jor Bagh Station (1/n)— Advaita Kapoor (@KapoorAdvaita) June 2, 2022
ದೆಹಲಿ ಮಾತ್ರವಲ್ಲ, ಬೆಂಗಳೂರು ಮೆಟ್ರೋ ನಿಲ್ದಾಣ ಹಾಗೂ ರೈಲಿನಲ್ಲಿಯೂ ಮಹಿಳೆಯರಿಗೆ ಕಿರುಕುಳ ತಪ್ಪಿದಲ್ಲ, ಒಂದಲ್ಲಾ ಒಂದು ರೀತಿಯಲ್ಲಿ ಕಿರುಕುಳ, ಹಿಂಸೆ ನಡೆಯುತ್ತಲೇ ಇರುತ್ತವೆ. ಆದರೆ, ಅಂತಹ ಮಹಿಳೆಯರು ದೂರು ನೀಡಲು ಹಿಂಜರಿಯುತ್ತಿರುವುದರಿಂದ ಎಷ್ಟೋ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ.
ಪೀಕ್ ಅವರ್ ನಲ್ಲಂತೂ ಕೆಲ ಗಂಡಸರು ಬೇಕಂತಲೇ ಮಹಿಳೆಯರ ಮೇಲೆ ಓರಗುವುದು ಸರ್ವೇ ಸಾಮಾನ್ಯವಾಗಿದೆ. ಆದರೂ, ಮಹಿಳೆಯರು ಇವೆಲ್ಲಾ ಕಾಮನ್ ಅಂದುಕೊಂಡು ಮುಂದೆ ಸಾಗುವುದರಿಂದ ಅಷ್ಟಾಗಿ ಸುದ್ದಿಯಾಗುತ್ತಿಲ್ಲ. ಇನ್ನೂ ವಾರಾಂತ್ಯ ಸಂದರ್ಭದಲ್ಲಿ ಕೆಲ ಹೈಫೈ ಹುಡುಗಿಯರ ಚೆಲ್ಲಾಟಗಳು ಪ್ರಯಾಣಿಕರ ಕೆಟ್ಟ ದೃಷ್ಟಿಗಳು ಕೂಡಾ ಸಾಮಾನ್ಯವಾಗಿದೆ. ಇಂತಹ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕಾಗಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಬಗ್ಗೆ ದೂರುಗಳಿವೆಯೇ? ಇದಕ್ಕಾಗಿ ಬಂದಿದೆ ಹೊಸ ವೆಬ್ ಸೈಟ್!
ಮೆಟ್ರೋ ನಗರಗಳಲ್ಲಿ ಟ್ರಾಫಿಕ್ ದಟ್ಟಣೆ ಹಾಗೂ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ತೆರಳುವಲ್ಲಿ ಮೆಟ್ರೋ ರೈಲು ಪ್ರಯಾಣ ಅತ್ಯಂತ ಪ್ರಯೋಜನಕಾರಿಯಾಗಿದೆ. ಆದರೆ, ಪ್ರಯಾಣದ ನೆಪದಲ್ಲಿ ಕೆಲವೊಂದು ಅನುಚಿತ ಚಟುವಟಿಕೆಗಳ ವಿರುದ್ಧ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕಾಗಿದೆ.