ಕಾಶ್ಮೀರಕ್ಕೆ ಮರಳಿ ಬರುವುದಿಲ್ಲ: ಪ್ರತಿಭಟನಾ ನಿರತ ಸರ್ಕಾರಿ ಸಿಬ್ಬಂದಿ
ಕಾಶ್ಮೀರದಲ್ಲಿ ಭಯೋತ್ಪಾದಕರು ಟಾರ್ಗೆಟ್ ಮಾಡಿ ಹತ್ಯೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ತಮ್ಮನ್ನು ಜಮ್ಮುವಿನಲ್ಲಿರುವ ತಮ್ಮ ತವರು ಜಿಲ್ಲೆಗಳಿಗೆ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಸರ್ಕಾರಿ ಉದ್ಯೋಗಿಗಳು ಪ್ರತಿಭಟನೆ ಮುಂದುವರೆಸಿದ್ದಾರೆ.
Published: 03rd June 2022 04:37 PM | Last Updated: 03rd June 2022 04:37 PM | A+A A-

ಕಾಶ್ಮೀರ
ಶ್ರೀನಗರ: ಕಾಶ್ಮೀರದಲ್ಲಿ ಭಯೋತ್ಪಾದಕರು ಟಾರ್ಗೆಟ್ ಮಾಡಿ ಹತ್ಯೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ತಮ್ಮನ್ನು ಜಮ್ಮುವಿನಲ್ಲಿರುವ ತಮ್ಮ ತವರು ಜಿಲ್ಲೆಗಳಿಗೆ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಸರ್ಕಾರಿ ಉದ್ಯೋಗಿಗಳು ಪ್ರತಿಭಟನೆ ಮುಂದುವರೆಸಿದ್ದಾರೆ.
ಶುಕ್ರವಾರ (ಜೂ.03) ರಂದು ಬಹುತೇಕ ಮಂದಿ ಶಿಕ್ಷಕರೇ ಇರುವ ಪ್ರತಿಭಟನಾ ನಿರತರ ಪ್ರತಿಭಟನೆ 2 ನೇ ದಿನಕ್ಕೆ ಕಾಲಿಟ್ಟಿದ್ದು,
ಕಾಶ್ಮೀರಕ್ಕೆ ಮರಳಿ ಬರುವುದಿಲ್ಲ ಎಂದು ಹೇಳಿದ್ದಾರೆ.
ಪ್ರತಿಭಟನಾ ನಿರತರು ತಮ್ಮ ಸಹೋದ್ಯೋಗಿ ರಜನಿ ಬಾಲ ಅವರನ್ನು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಶಾಲೆಯೊಂದರಲ್ಲಿ ಉಗ್ರವಾದಿಗಳು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಜಮ್ಮುವಿಗೆ ವಾಪಸ್ಸಾಗಿದ್ದಾರೆ.
ಪ್ರೆಸ್ ಕ್ಲಬ್ ನಿಂದ ಅಂಬೇಡ್ಕರ್ ಚೌಕ್ ವರೆಗೆ ಎಲ್ಲಾ ಜಮ್ಮು-ಆಧಾರಿತ ಮೀಸಲಾತಿ ವರ್ಗಗಳ ನೌಕರರ ಸಂಘ ಪ್ರತಿಭಟನಾ ಮೆರವಣಿಗೆ ನಡೆಸಿತು.
ಈಗಿನ ಆತಂಕಕಾರಿ ಪರಿಸ್ಥಿತಿಯಲ್ಲಿ ನಾವು ಕಾಶ್ಮೀರಕ್ಕೆ ವಾಪಸ್ ತೆರಳಿ ಕರ್ತವ್ಯಕ್ಕೆ ಹಾಜರಾಗುವುದಿಲ್ಲ, ಅಲ್ಲಿ ಹೋಗುವುದರ ಬದಲು ನಾವು ಇಲ್ಲೇ ಸಾಯಲು ಬಯಸುತ್ತೇವೆ ಎಂದು ಪ್ರತಿಭಟನಾ ನಿರತ ಸುರೇಂದ್ರ ಕುಮಾರ್ ಹೇಳಿದ್ದಾರೆ.
ತಮ್ಮ ಪ್ರತಿಭಟನೆಯನ್ನು ಗಮನಿಸಿ ಕಾಶ್ಮೀರದಿಂದ ಜಮ್ಮುವಿಗೆ ತಮ್ಮನ್ನು ವರ್ಗಾವಣೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ. ಕಾಶ್ಮೀರದಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇವೆ. ಈಗ ಭಯೋತ್ಪಾದಕರ ಕೈಲಿ ಸಾಯಲು ಬಯಸುವುದಿಲ್ಲ ಎಂದು ಪ್ರತಿಭಟಾನಾ ನಿರತರು ಹೇಳಿದ್ದಾರೆ.