ಒಡಿಶಾದಲ್ಲಿ ಸಂಪುಟ ಪುನಾರಚನೆ: ನಾಳೆ ನೂತನ ಸಚಿವರ ಪ್ರಮಾಣ ವಚನ ಸಾಧ್ಯತೆ
ಮಹತ್ವದ ಬೆಳವಣಿಗೆಯೊಂದರಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶನಿವಾರ ಸಂಪುಟದ ಎಲ್ಲಾ ಸಚಿವರ ರಾಜೀನಾಮೆ ಕೇಳಿದ್ದಾರೆ. ನೂತನ ಸಚಿವರು ನಾಳೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.
Published: 04th June 2022 08:57 PM | Last Updated: 04th June 2022 08:57 PM | A+A A-

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್
ಭುವನೇಶ್ವರ: ಮಹತ್ವದ ಬೆಳವಣಿಗೆಯೊಂದರಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶನಿವಾರ ಸಂಪುಟದ ಎಲ್ಲಾ ಸಚಿವರ ರಾಜೀನಾಮೆ ಕೇಳಿದ್ದಾರೆ. ನೂತನ ಸಚಿವರು ನಾಳೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.
ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಜನತಾ ದಳ ಸರ್ಕಾರ ರಾಜಕೀಯ ಗೇಮ್ ಪ್ಲಾನ್ ಸಿದ್ಧಪಡಿಸುತ್ತಿದೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ.
ಜಗನಾಥ ದೇವಾಲಯದ ಹೆರಿಟೇಜ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಒಡಿಶಾ ಸರ್ಕಾರದ ಪರವಾಗಿ ಸುಪ್ರೀಂಕೋರ್ಟ್ ತೀರ್ಪು ಬಂದ ಮಾರನೇ ದಿನವೇ, ಎಲ್ಲಾ 20 ಸಚಿವರು ರಾಜೀನಾಮೆ ನೀಡುವಂತೆ ನವೀನ್ ಪಟ್ನಾಯಕ್ ಕೇಳಿದ್ದಾರೆ. ಒಡಿಶಾ ವಿಧಾನಸಭಾ ಸ್ಪೀಕರ್ ಸೂರ್ಜ್ಯ ನಾರಾಯಣ ಪಾತ್ರ ಕೂಡಾ ರಾಜೀನಾಮೆ ನೀಡುತ್ತಿದ್ದಾರೆ.
ಕೆಲ ಹಾಲಿ ಸಚಿವರಿಗೆ ರಾಜೀನಾಮೆ ನೀಡುವಂತೆ ಕೇಳಲಾಗಿದ್ದು, ಕೆಲವು ಹೊಸಬರು ಹಾಗೂ ಹಿರಿಯರಿಗೆ ಭುವನೇಶ್ವರದಲ್ಲಿಯೇ ಇರುವಂತೆ ಹೇಳಲಾಗಿದೆ. ನಾಳೆ ಬೆಳಗ್ಗೆ 11-45ಕ್ಕೆ ಲೋಕ ಸೇವಾ ಭವನದಲ್ಲಿ ನೂತನ ಸಂಪುಟ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.
ಈ ಸಂಬಂಧ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ರಾಜ್ಯಪಾಲ ಪ್ರೊಫೆಸರ್ ಗಣೇಶಿ ಲಾಲ್ ಹೇಳಿರುವುದಾಗಿ ಮೂಲಗಳು ತಿಳಿಸಿವೆ.