ಸತ್ಯೇಂದ್ರ ಜೈನ್ ಆರೋಪಿಯಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ನಲ್ಲಿ ಕೇಂದ್ರ ಒಪ್ಪಿದೆ: ಕೇಜ್ರಿವಾಲ್
ಸತ್ಯೇಂದ್ರ ಜೈನ್ ಆರೋಪಿಯಲ್ಲ ಎಂಬುದನ್ನು ಕೇಂದ್ರ ಸರ್ಕಾರ ಕೋರ್ಟ್ ನಲ್ಲಿ ಒಪ್ಪಿಕೊಂಡಿದ್ದು, ಸಚಿವರ ವಿರುದ್ಧದ ಷಡ್ಯಂತ್ರ ಬಹಿರಂಗವಾಗಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
Published: 05th June 2022 12:03 AM | Last Updated: 05th June 2022 12:22 AM | A+A A-

ಅರವಿಂದ್ ಕೇಜ್ರಿವಾಲ್
ನವದೆಹಲಿ: ಸತ್ಯೇಂದ್ರ ಜೈನ್ ಆರೋಪಿಯಲ್ಲ ಎಂಬುದನ್ನು ಕೇಂದ್ರ ಸರ್ಕಾರ ಕೋರ್ಟ್ ನಲ್ಲಿ ಒಪ್ಪಿಕೊಂಡಿದ್ದು, ಸಚಿವರ ವಿರುದ್ಧದ ಷಡ್ಯಂತ್ರ ಬಹಿರಂಗವಾಗಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಜಾರಿ ನಿರ್ದೇಶನಾಲಯ ದೆಹಲಿ ಹೈಕೋರ್ಟ್ ನಲ್ಲಿ ಸತ್ಯೇಂದ್ರ ಜೈನ್ ಆರೋಪಿಯಲ್ಲ ಎಂದು ಹೇಳಿದೆ ಎಂದು ಕೆಲವು ಮಾಧ್ಯಮಗಳು ವರದಿಗಳ ಪ್ರಕಟಿಸಿದ್ದವು.
ಇದನ್ನೂ ಓದಿ: ನಕಲಿ ಪ್ರಕರಣ ಹಾಕಿ ಶೀಘ್ರವೇ ಮನೀಷ್ ಸಿಸೋಡಿಯಾ ಬಂಧನ: ದೆಹಲಿ ಸಿಎಂ ಕೇಜ್ರಿವಾಲ್ ಭವಿಷ್ಯ
ಕೇಂದ್ರ ಸರ್ಕಾರವೇ ಕೋರ್ಟ್ ನಲ್ಲಿ ಸತ್ಯೇಂದ್ರ ಜೈನ್ ಹಣ ವರ್ಗಾವಣೆ ತಡೆ ಕಾಯ್ದೆ ಪ್ರಕರಣದಲ್ಲಿ ಆರೋಪಿಯಲ್ಲ ಎಂದು ಹೇಳಿದೆ. ಆತ ಆರೋಪಿಯಲ್ಲವೆಂದು ಒಪ್ಪಿಕೊಂಡ ನಂತರವೂ ಆತನನ್ನು ಭ್ರಷ್ಟ ಎಂದು ಕರೆಯಲು ಹೇಗೆ ಸಾಧ್ಯ? ಎಂದು ಕೇಜ್ರಿವಾಲ್ ಪ್ರಶ್ನಿಸಿರುವ ಹೇಳಿಕೆಯನ್ನು ಆಮ್ ಆದ್ಮಿ ಪಕ್ಷ ಪ್ರಕಟಿಸಿದೆ.
ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ದೆಹಲಿಯ ಮೊಹಲ್ಲಾ ಕ್ಲಿನಿಕ್ ಗಳನ್ನು ಜಾಗತಿಕ ಮಟ್ಟದಲ್ಲಿ ಎಲ್ಲೆಡೆ ಹೊಗಳಲಾಗುತ್ತಿದೆ ಆದ್ದರಿಂದ ಬಿಜೆಪಿ ಅಸೂಯೆಪಡುತ್ತಿದೆ. ಆದ್ದರಿಂದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ನಕಲಿ ಆರೋಪದಡಿ ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಸತ್ಯೇಂದ್ರ ಜೈನ್ ವಿರುದ್ಧ ಯಾವುದೇ ದೂರು ಅಥವಾ ಎಫ್ ಐಆರ್ ದಾಖಲಾಗಿಲ್ಲ ಎಂಬುದನ್ನು ಕೋರ್ಟ್ ನಲ್ಲಿ ಜಾರಿ ನಿರ್ದೇಶನಾಲಯವೇ ಒಪ್ಪಿಕೊಂಡಿದೆ ಎಂದು ಆಪ್ ನ ರಾಜ್ಯಸಭಾ ಸದಸ್ಯ ಹೇಳಿದ್ದಾರೆ.
ಸತ್ಯೇಂದ್ರ ಜೈನ್ ಅವರನ್ನು ಮೇ.30 ರಂದು ಪಿಎಂಎಲ್ಎ ಕಾಯ್ದೆಯಡಿ ಬಂಧಿಸಲಾಗಿತ್ತು. ವಿಚಾರಣಾಧೀನ ನ್ಯಾಯಾಲಯ ಆತನನ್ನು ಜೂ.09 ವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿದೆ.