ಹಿಂದಿ ಹಿಂದುಳಿದ ರಾಜ್ಯಗಳ ಭಾಷೆ; ನಮ್ಮನ್ನು ಶೂದ್ರರನ್ನಾಗಿಸುತ್ತದೆ: ಡಿಎಂಕೆ ಸಂಸದ
ಹಿಂದಿ ಭಾಷೆಯ ಕುರಿತಾಗಿ ವಾದ ವಿವಾದಗಳು ಮುಂದುವರಿಯುತ್ತಿರುವ ಬೆನ್ನಲ್ಲೇ ಹಿಂದಿ ಭಾಷೆ ನಮ್ಮನ್ನು ಶೂದ್ರರನ್ನಾಗಿಸುತ್ತದೆ ಎಂದು ಡಿಎಂಕೆ ಸಂಸದ ಟಿಕೆಎಸ್ ಇಳಂಗೋವನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Published: 06th June 2022 03:22 PM | Last Updated: 06th June 2022 05:03 PM | A+A A-

ಟಿಕೆಎಸ್ ಇಳಂಗೋವನ್
ಚೆನ್ನೈ: ಹಿಂದಿ ಭಾಷೆಯ ಕುರಿತಾಗಿ ವಾದ ವಿವಾದಗಳು ಮುಂದುವರಿಯುತ್ತಿರುವ ಬೆನ್ನಲ್ಲೇ ಹಿಂದಿ ಭಾಷೆ ನಮ್ಮನ್ನು ಶೂದ್ರರನ್ನಾಗಿಸುತ್ತದೆ ಎಂದು ಡಿಎಂಕೆ ಸಂಸದ ಟಿಕೆಎಸ್ ಇಳಂಗೋವನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಂತಹ ಹಿಂದುಳಿದ ರಾಜ್ಯಗಳಲ್ಲಿ ಮಾತ್ರ ಹಿಂದಿ ಸ್ಥಳೀಯ ಭಾಷೆಯಾಗಿದೆ. ಹಿಂದಿ ನಮ್ಮನ್ನು ಶೂದ್ರರನ್ನಾಗಿ ಪರಿವರ್ತಿಸುತ್ತದೆ. ಹಿಂದಿ ಭಾಷೆಯಿಂದ ನಮಗೆ ಒಳಿತಾಗುವುದಿಲ್ಲ ಎಂದು ಟಿಕೆಎಸ್ ಇಳಂಗೋವನ್ ಹೇಳಿದರು.
ಇದನ್ನೂ ಓದಿ: ಪಾನಿಪುರಿ ಮಾರುವವರು ಹಿಂದಿ ಭಾಷಿಗರು: ಹಿಂದಿ ಭಾಷೆ ಅಷ್ಟಕ್ಕೆ ಸೀಮಿತ- ತಮಿಳುನಾಡು ಶಿಕ್ಷಣ ಸಚಿವ
ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ, ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಮತ್ತು ಪಂಜಾಬ್ ಇವೆಲ್ಲವೂ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲವೇ? ಹಿಂದಿ ಈ ರಾಜ್ಯಗಳ ಜನರ ಮಾತೃಭಾಷೆಯಲ್ಲ ಎಂದು ಹೇಳಿದರು.
ಏಪ್ರಿಲ್‌ನಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ನವದೆಹಲಿಯಲ್ಲಿ ನಡೆದ ಸಂಸದೀಯ ಅಧಿಕೃತ ಭಾಷಾ ಸಮಿತಿಯ 37ನೇ ಸಭೆಯಲ್ಲಿ ಹಿಂದಿಯನ್ನು ಇಂಗ್ಲಿಷ್‌ಗೆ ಪರ್ಯಾಯವಾಗಿ ಸ್ವೀಕರಿಸಬೇಕು ಮತ್ತು ಸ್ಥಳೀಯ ಭಾಷೆಗಳಿಗೆ ಅಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: ಹಿಂದಿ ಭಾಷೆ ಕಲಿಯುವ ಅಗತ್ಯವಿಲ್ಲ; ತಮಿಳು ಸಂಪರ್ಕ ಭಾಷೆಯಾಗಬಹುದು: ಅಣ್ಣಾಮಲೈ ಸೇರಿ ತಮಿಳು ಬಿಜೆಪಿ ನಾಯಕರ ಅಭಿಮತ
ಇನ್ನು ಹಿಂದಿ ಭಾಷೆ ವಿಚಾರದಲ್ಲಿ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ವಾಕ್ಸಾಮರ ನಡೆದಿತ್ತು.