ನೋಟುಗಳ ಮೇಲೆ ಮಹಾತ್ಮಾ ಗಾಂಧಿ ಚಿತ್ರ ಮುಂದುವರೆಯಲಿದೆ: ಆರ್ ಬಿಐ ಸ್ಪಷ್ಟನೆ
ನೂತನ ನೋಟುಗಳಿಂದ ಮಹಾತ್ಮಾ ಗಾಂಧಿ ಚಿತ್ರವನ್ನು ತೆರವು ಮಾಡುವ ಯಾವುದೇ ರೀತಿಯ ಚಿಂತನೆ ತಮ್ಮ ಮುಂದಿಲ್ಲ.. ಈ ಕುರಿತ ಸುದ್ದಿಗಳು ಸುಳ್ಳು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಸ್ಪಷ್ಟಪಡಿಸಿದೆ.
Published: 06th June 2022 03:50 PM | Last Updated: 06th June 2022 05:05 PM | A+A A-

ಕರೆನ್ಸಿ
ನವದೆಹಲಿ: ನೂತನ ನೋಟುಗಳಿಂದ ಮಹಾತ್ಮಾ ಗಾಂಧಿ ಚಿತ್ರವನ್ನು ತೆರವು ಮಾಡುವ ಯಾವುದೇ ರೀತಿಯ ಚಿಂತನೆ ತಮ್ಮ ಮುಂದಿಲ್ಲ.. ಈ ಕುರಿತ ಸುದ್ದಿಗಳು ಸುಳ್ಳು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ನೋಟುಗಳಲ್ಲಿ ಡಾ ಎಪಿಜೆ ಅಬ್ದುಲ್ ಕಲಾಂ, ರವೀಂದ್ರ ನಾಥ್ ಠಾಗೋರ್ ಚಿತ್ರಗಳು?: ಆರ್ ಬಿಐ ಚಿಂತನೆ
ಈ ಕುರಿತ ಹೇಳಿಕೆ ಬಿಡುಗಡೆ ಮಾಡಿರುವ ಆರ್ ಬಿಐ, ನೂತನ ಕರೆನ್ಸಿ ನೋಟುಗಳಲ್ಲಿ ಮಹಾತ್ಮಾ ಗಾಂಧಿಯವರ ಭಾವಚಿತ್ರವನ್ನು ಇತರೆ ಭಾವಚಿತ್ರಗಳೊಂದಿಗೆ ಬದಲಾಯಿಸುವ ಯಾವುದೇ ಪ್ರಸ್ತಾಪ ತನ್ನ ಮುಂದಿಲ್ಲ.. ಎಂದಿನಂತೆ ನೂತನ ನೋಟುಗಳಲ್ಲಿಯೂ ಮಹಾತ್ಮಾ ಗಾಂಧಿ ಚಿತ್ರ ಮುಂದುವರೆಯಲಿದೆ ಎಂದು ಹೇಳಿದೆ.
ಅಲ್ಲದೆ ಈ ಕುರಿತ ಮಾಧ್ಯಮಗಳ ವರದಿಯನ್ನು ಆರ್ ಬಿಐ ತಳ್ಳಿ ಹಾಕಿದ್ದು, ಈ ರೀತಿಯ ಸುದ್ದಿಗಳು ಸುಳ್ಳು.. ಎಂದು ಹೇಳಿದೆ.
ಇದನ್ನೂ ಓದಿ: ಹೊಸ ನೋಟುಗಳ ನಕಲು ಇನ್ನು ಮುಂದೆ ಮತ್ತಷ್ಟು ಕಠಿಣ; ಹೆಚ್ಚುವರಿ ಭದ್ರತಾ ವೈಶಿಷ್ಟ್ಯ ಅಳವಡಿಕೆ!
ಈ ಹಿಂದೆ ಭಾರತೀಯ ನೋಟುಗಳಲ್ಲಿ ಗಾಂಧಿ ಚಿತ್ರವನ್ನು ತೆಗೆದು ಅವರ ಬದಲಿಗೆ ರವೀಂದ್ರನಾಥ ಟ್ಯಾಗೋರ್ ಮತ್ತು ಎಪಿಜೆ ಅಬ್ದುಲ್ ಕಲಾಂ ಸೇರಿದಂತೆ ಇತರ ಪ್ರಮುಖ ಭಾರತೀಯರ ಚಿತ್ರಗಳನ್ನು ಸೇರಿಸಬಹುದು ಎಂದು ಹಣಕಾಸು ಸಚಿವಾಲಯ ಮತ್ತು ಆರ್ಬಿಐ ಚಿಂತನೆ ನಡೆಸುತ್ತಿದೆ ಎಂದು ಸೂಚಿಸುವ ಕೆಲವು ವರದಿಗಳು ಪ್ರಕಟವಾಗಿದ್ದವು. ಈ ಸಂಬಂಧ ಆರ್ ಬಿಐ ಸ್ಪಷ್ಟನೆ ನೀಡಿದೆ.