ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಪಂಜಾಬ್ ಪೊಲೀಸರಿಂದ ಮತ್ತೊಬ್ಬ ಶಂಕಿತನ ಬಂಧನ!
ಹರಿಯಾಣದ ಫತೇಹಾಬಾದ್ ನ ಮುಸೆಹ್ಲಿ ಗ್ರಾಮದಲ್ಲಿ ಪಂಜಾಬಿ ಗಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸ್ ವಾಲಾ ಹತ್ಯೆ ಪ್ರಕರಣ ಸಂಬಂಧ ಮತ್ತೊಬ್ಬ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ.
Published: 06th June 2022 12:15 PM | Last Updated: 06th June 2022 02:00 PM | A+A A-

ಸಿಧು ಮೂಸೆವಾಲಾ
ಚಂಡೀಗಡ: ಹರಿಯಾಣದ ಫತೇಹಾಬಾದ್ ನ ಮುಸೆಹ್ಲಿ ಗ್ರಾಮದಲ್ಲಿ ಪಂಜಾಬಿ ಗಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸ್ ವಾಲಾ ಹತ್ಯೆ ಪ್ರಕರಣ ಸಂಬಂಧ ಮತ್ತೊಬ್ಬ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ದೇವೇಂದ್ರ ಅಲಿಯಾಸ್ ಕಲಾ ಎಂದು ಗುರುತಿಸಲಾಗಿದ್ದು, ಚರಂಜಿತ್ ಮತ್ತು ಕೇಶವ್ ಎಂಬ ಇಬ್ಬರು ಶಂಕಿತರಿಗೆ ಆಶ್ರಯ ನೀಡಿದ್ದರು ಎಂದು ತಿಳಿದು ಬಂದಿದೆ. ದೇವೇಂದ್ರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಫತೇಪುರ್ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಿಧು ಮೂಸೆವಾಲ ಹತ್ಯೆಯ ಹೊಣೆ ಹೊತ್ತ ಲಾರೆನ್ಸ್ ಬಿಷ್ಣೋಯ್ ಸೋದರಳಿಯ ಸಚಿನ್!
ಇದಕ್ಕೂ ಮೊದಲು, ಪಂಜಾಬ್ ಪೋಲೀಸ್ ಮತ್ತು ಫತೇಹಾಬಾದ್ ಪೊಲೀಸರ ಜಂಟಿ ತಂಡವು ಜೂನ್ 2 ರಂದು ದಾಳಿಯ ಸಂದರ್ಭದಲ್ಲಿ ಪವನ್ ಬಿಷ್ಣೋಯ್ ಮತ್ತು ನಸೀಬ್ ಖಾನ್ ಎಂಬ ಇಬ್ಬರು ಯುವಕರನ್ನು ಬಂಧಿಸಿತ್ತು.
ಶೂಟರ್‌ಗಳನ್ನು ಸಾಗಿಸಲು ಬಳಸಿದ ಕಾರನ್ನು ನಸೀಬ್ ಖಾನ್ ನೀಡಿದ್ದ ಎನ್ನಲಾಗಿದೆ. ಅವರು ರಾಜಸ್ಥಾನದಿಂದ ಕಾರನ್ನು ಓಡಿಸಿ ಫತೇಹಾಬಾದ್‌ನಲ್ಲಿ ಚರಂಜಿತ್‌ಗೆ ಹಸ್ತಾಂತರಿಸಿದರು. ಮೇ 25 ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಬಿಸ್ಲಾ ಪೆಟ್ರೋಲ್ ಪಂಪ್‌ನಲ್ಲಿ ಪ್ರಿಯವ್ರತ ಫೌಜಿ, ಅಂಕಿತ್ ಜಾಂಟಿ ಸೆರ್ಸಾ, ಚರಂಜಿತ್ ಮತ್ತು ಕೇಶವ್ ವಾಹನದಲ್ಲಿ ಕಾಣಿಸಿಕೊಂಡಿದ್ದಾರೆ.