ಇತ್ತೀಚಿಗೆ ಹತ್ಯೆಯಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಕುಟುಂಬಸ್ಥರಿಗೆ ರಾಹುಲ್ ಗಾಂಧಿ ಸಾಂತ್ವನ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚಿಗೆ ಹತ್ಯೆಯಾದ ಪಂಜಾಬ್ ಗಾಯಕ ಹಾಗೂ ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಅವರ ಕುಟುಂಬಸ್ಥರನ್ನು ಮಂಗಳವಾರ ಭೇಟಿ ಮಾಡಿದರು.
Published: 07th June 2022 03:01 PM | Last Updated: 07th June 2022 03:01 PM | A+A A-

ಸಿಧು ಮೂಸೆವಾಲಾ ಕುಟುಂಬಸ್ಥರಿಗೆ ರಾಹುಲ್ ಗಾಂಧಿ ಸಾಂತ್ವನ
ಮಾನ್ಸಾ, ಪಂಜಾಬ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚಿಗೆ ಹತ್ಯೆಯಾದ ಪಂಜಾಬ್ ಗಾಯಕ ಹಾಗೂ ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಅವರ ಕುಟುಂಬಸ್ಥರನ್ನು ಮಂಗಳವಾರ ಭೇಟಿ ಮಾಡಿದರು.
ಪಂಜಾಬಿನ ಮಾನ್ಸಾ ಜಿಲ್ಲೆಯಲ್ಲಿ ಸಿಧು ಮೂಸೆವಾಲಾ ಕುಟುಂಬವನ್ನು ಭೇಟಿ ಮಾಡಿ, ಗಾಯಕನ ಹತ್ಯೆಗೆ ಸಂತಾಪ ಸೂಚಿಸಿದರು.
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪರತಾಪ್ ಸಿಂಗ್ ಬಾಜ್ವಾ, ಮಾಜಿ ಉಪಮುಖ್ಯಮಂತ್ರಿ ಓಪಿ ಸೋನಿ ಮತ್ತು ಪಕ್ಷದ ಇತರ ನಾಯಕರು ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಜೊತೆಗಿದ್ದರು.
ಇದನ್ನು ಓದಿ: ನ್ಯಾಷನಲ್ ಹೆರಾಲ್ಡ್ ಕೇಸ್: ಇಡಿಯಿಂದ ರಾಹುಲ್ ಗಾಂಧಿಗೆ ಮತ್ತೊಂದು ಸಮನ್ಸ್ ಜಾರಿ
ರಾಹುಲ್ ಗಾಂಧಿ ಭೇಟಿಗಾಗಿ ಮೂಸೆ ವಾಲಾ ಕುಟುಂಬದವರ ನಿವಾಸದ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಮೇ 29 ರಂದು ಮಾನ್ಸಾ ಜಿಲ್ಲೆಯಲ್ಲಿ ಸಿಧು ಮೂಸ್ ವಾಲಾ ಅವರನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ ಕೊಂದಿದ್ದರು. ಹತ್ಯೆ ನಡೆದಾಗ ರಾಹುಲ್ ಗಾಂಧಿ ವಿದೇಶದಲ್ಲಿದ್ದರು ಮತ್ತು ವಾರಾಂತ್ಯದಲ್ಲಿ ಹಿಂತಿರುಗಿದರು.
ಕಳೆದ ವರ್ಷ ಡಿಸೆಂಬರ್ನಲ್ಲಿ ಕಾಂಗ್ರೆಸ್ಗೆ ಸೇರಿದ್ದ ಸಿಧು ಮೂಸೆ ವಾಲಾ ಅವರು 2022 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮಾನ್ಸಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಶನಿವಾರ, ಸಿಧು ಮೂಸೆವಾಲಾ ಅವರ ಪೋಷಕರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು.