ಹೈದರಾಬಾದ್ ನಲ್ಲಿ ಮತ್ತೆ ನಾಲ್ಕು ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣಗಳು ವರದಿ!
ಹೈದರಾಬಾದ್ನಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ರಾಷ್ಟ್ರದ ಸುದ್ದಿಯಾಗುತ್ತಲೇ ಇರುವಾಗಲೇ ನಗರದಲ್ಲಿ ಅಪ್ರಾಪ್ತರ ಮೇಲಿನ ನಾಲ್ಕು ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.
Published: 07th June 2022 03:18 PM | Last Updated: 07th June 2022 04:53 PM | A+A A-

ಸಂಗ್ರಹ ಚಿತ್ರ
ಹೈದರಾಬಾದ್: ಹೈದರಾಬಾದ್ನಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ರಾಷ್ಟ್ರದ ಸುದ್ದಿಯಾಗುತ್ತಲೇ ಇರುವಾಗಲೇ ನಗರದಲ್ಲಿ ಅಪ್ರಾಪ್ತರ ಮೇಲಿನ ನಾಲ್ಕು ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.
ಅಜ್ಜಿ ಮನೆಗೆ ಹೋಗುತ್ತಿದ್ದ 12 ವರ್ಷದ ಬಾಲಕಿಯ ಮೇಲೆ ಇಬ್ಬರು ವ್ಯಕ್ತಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮೇ 31 ರಂದು ಈ ಘಟನೆ ನಡೆದಿದ್ದು ಅಂದು ಬಾಲಕಿ ಕಾಣೆಯಾಗಿದ್ದಳು. ಜೂನ್ 1 ರಂದು ಸುಲ್ತಾನ್ಶಾಹಿ ಪ್ರದೇಶದಲ್ಲಿ ಪೊಲೀಸರ ಗಸ್ತಿನ ವೇಳೆ ಆಕೆಯನ್ನ ಪತ್ತೆಹಚ್ಚಲಾಯಿತು.
ಕ್ಯಾಬ್ ಚಾಲಕ ಆಕೆಯನ್ನು ಕೊಂಡೂರ್ಗ್ನಲ್ಲಿರುವ ಸ್ನೇಹಿತನ ಮನೆಗೆ ಕರೆದೊಯ್ದು ಅಲ್ಲಿ ಇಬ್ಬರೂ ಲೈಂಗಿಕ ದೌರ್ಜನ್ಯ ಎಸಗಿದ್ದರು. ಮರುದಿನ ಬೆಳಿಗ್ಗೆ ಅವರು ಅವಳನ್ನು ಬಿಟ್ಟು ಹೋಗಿದ್ದರು. ಆರೋಪಿಗಳನ್ನು 36 ವರ್ಷದ ಶೇಕ್ ಕಲೀಂ ಅಲಿ ಮತ್ತು ಮೊಹಮ್ಮದ್ ಲುಕ್ಮಾನ್ ಅಹ್ಮದ್ ಯಜ್ದಾನಿ ಎಂದು ಗುರುತಿಸಲಾಗಿದೆ.
ಎರಡನೇ ಪ್ರಕರಣದಲ್ಲಿ ಚಿಲ್ಲರೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯನ್ನು ಮೇ 31 ರಂದು 21 ವರ್ಷದ ಮೊಹಮ್ಮದ್ ಸುಫ್ಯಾನ್ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಬಾಲಕಿ ಹೊಟ್ಟೆನೋವು ಎಂದು ದೂರು ನೀಡಿದ್ದು, ಆರೋಪಿಯನ್ನು ಕಾಲಾ ಪತ್ತರ್ ಪೊಲೀಸರು ಬಂಧಿಸಿದ್ದಾರೆ.
ಅನಾಥಾಶ್ರಮದಲ್ಲಿದ್ದ ಮತ್ತೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಏಪ್ರಿಲ್ 22 ರಂದು ಕಾರಿನಲ್ಲಿ ಅತ್ಯಾಚಾರ ನಡೆದಿದ್ದು, ಇದೀಗ ಈ ಘಟನೆ ಬೆಳಕಿಗೆ ಬಂದಿದೆ. 16 ವರ್ಷದ ಬಾಲಕಿಯೊಬ್ಬಳು ಬರ್ತ್ಡೇ ಪಾರ್ಟಿ ಆಚರಿಸಲು ಹೋಗಿದ್ದ ಆರೋಪಿಯೊಂದಿಗೆ ಕೇಕ್ ಖರೀದಿಸಿ ಖಾಸಗಿಯಾಗಿ ಮಾತನಾಡುವ ನೆಪದಲ್ಲಿ ಕಾರಿನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿಯನ್ನು ವಿಚಾರಿಸಿದಾಗ ಅನಾಥಾಶ್ರಮದಲ್ಲಿ ಫೋನ್ ಪತ್ತೆಯಾಗಿದೆ. ಅದನ್ನು ಆರೋಪಿ ತನಗೆ ನೀಡಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ: ಹೈದ್ರಾಬಾದ್: ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣ, ಮತ್ತೋರ್ವ ಆರೋಪಿ ಬಂಧನ
ಪೋಟೋಕಾಪಿ ಅಂಗಡಿಯಲ್ಲಿ ಕೆಲಸ ಮಾಡುವ 23 ವರ್ಷದ ಆರೋಪಿ ಸುರೇಶ್ ನನ್ನು ಬಂಧಿಸಲಾಗಿದ್ದು, ರಾಮಗೋಪಾಲಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಥಿಯೇಟರ್ನಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಬಾಲಕಿ ಹೇಳಿದ್ದು ಇದು ನಾಲ್ಕನೇ ಪ್ರಕರಣ. ಅಪ್ರಾಪ್ತ ಬಾಲಕಿಯನ್ನು ಚಿತ್ರ ನೋಡುವಂತೆ ಆಮಿಷವೊಡ್ಡಿದ್ದ ಆರೋಪಿಯೂ ಅಪ್ರಾಪ್ತ ವಯಸ್ಕನಾಗಿದ್ದು, ಕೆಲ ತಿಂಗಳಿಂದ ಬಾಲಕಿಯೊಂದಿಗೆ ಸಂಪರ್ಕದಲ್ಲಿದ್ದ. ಘಟನೆ ಒಂದು ತಿಂಗಳ ಹಿಂದೆ ನಡೆದಿದ್ದು, ರಾಜೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣಗಳು ಹದಿಹರೆಯದವರ ಸಾಮೂಹಿಕ ಅತ್ಯಾಚಾರದ ಸುದ್ದಿ ಜೋರಾಗಿರುವಾಗಲೇ ಬಂದಿವೆ. ಇದು ನಗರವನ್ನು ಬೆಚ್ಚಿಬೀಳಿಸಿದೆ ಮತ್ತು ಈಗ ರಾಜಕೀಯ ಬಣ್ಣಗಳನ್ನು ಪಡೆದುಕೊಂಡಿದೆ.
ಮೇ 28ರಂದು ಹೈದರಾಬಾದ್ನ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿದ್ದಾಗ 17 ವರ್ಷದ ಅಪ್ರಾಪ್ರೆ ಮೇಲೆ ರಾಜಕೀಯ ಕುಟುಂಬಗಳ ಅಪ್ರಾಪ್ತ ವಯಸ್ಕರು ಸೇರಿದಂತೆ ಐವರು ಸಾಮೂಹಿಕ ಅತ್ಯಾಚಾರವೆಸಗಿದ್ದರು. ಇತ್ತೀಚಿನ ಈ ಘಟನೆ ರಾಜಕೀಯ ಜಗಳಕ್ಕೆ ತಿರುಗಿದೆ. ಪೊಲೀಸರ ಕೈಗೆ ಸಿಕ್ಕಿಬಿದ್ದ ಅಪ್ರಾಪ್ತರಲ್ಲಿ ಒಬ್ಬರು ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ (ಟಿಆರ್ಎಸ್) ಸ್ಥಳೀಯ ಮುಖಂಡರೊಬ್ಬರ ಮಗ. ಬಂಧಿತ ಮತ್ತೊಬ್ಬ ಅಪ್ರಾಪ್ತ ಸಂಗಾರೆಡ್ಡಿಯ ರಾಜಕಾರಣಿಯೊಬ್ಬರ ಪುತ್ರ.