
ಸಾಂದರ್ಭಿಕ ಚಿತ್ರ
ಪಣಜಿ: ಮಡ್ ಬಾತ್ ನೆಪದಲ್ಲಿ ಬ್ರಿಟೀಷ್ ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇರೆಗೆ ಗೋವಾದಲ್ಲಿ ಸ್ಥಳೀಯ ವ್ಯಕ್ತಿಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಗೋವಾದ ಅರಂಬೋಲ್ ಬೀಚ್ ಬಳಿಯ ಪ್ರಸಿದ್ಧ ‘ಸ್ವೀಟ್ ಲೇಕ್’ ಬಳಿ ಬ್ರಿಟಿಷ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 32 ವರ್ಷದ ಸ್ಥಳೀಯ ವ್ಯಕ್ತಿಯನ್ನು ಗೋವಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ‘ಸ್ಥಳೀಯ ನಿವಾಸಿಯಾಗಿರುವ ಆರೋಪಿ ಜೋಯಲ್ ವಿನ್ಸೆಂಟ್ ಡಿಸೋಜಾ ಜೂನ್ 2ರಂದು ‘ಮಡ್ ಬಾತ್’ ಸರ್ವಿಸ್ ನೀಡುವ ನೆಪದಲ್ಲಿ 42 ವರ್ಷದ ಬ್ರಿಟಿಷ್ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹೈದ್ರಾಬಾದ್: ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣ, ಮತ್ತೋರ್ವ ಆರೋಪಿ ಬಂಧನ
ಮಹಿಳೆ ಪತಿಯೊಂದಿಗೆ ಗೋವಾಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಘಟನೆ ಜೂನ್ 2ರಂದೇ ನಡೆದಿತ್ತಾದರೂ, ಸೋಮವಾರ (ಜೂನ್ 6) ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಬಂಧಿತ ಆರೋಪಿ ಜೋಯಲ್ ವಿನ್ಸೆಂಟ್ ಡಿಸೋಜಾ ಉತ್ತರ ಗೋವಾ ಜಿಲ್ಲೆಯ ಅರಂಬೋಲ್ ಬೀಚ್ ಬಳಿ ಅಕ್ರಮವಾಗಿ ಮಸಾಜ್ ಸೇವೆಗಳನ್ನು ನೀಡುವ ಗುಂಪಿನ ಭಾಗವಾಗಿದ್ದರು.
ಆರೋಪಿಯು ಸಮುದ್ರತೀರಕ್ಕೆ ಸಮೀಪವಿರುವ ಸಿಹಿನೀರಿನ ಸರೋವರದ ಬಳಿ ಸಂತ್ರಸ್ಥೆ ಮಲಗಿದ್ದಾಗ ಮಸಾಜ್ ಮಾಡುವ ನೆಪದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಘಟನೆ ಬಳಿಕ ಮಹಿಳೆ ಯುಕೆಯಲ್ಲಿರುವ ತನ್ನ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಮತ್ತು ಭಾರತದಲ್ಲಿನ ಬ್ರಿಟಿಷ್ ರಾಯಭಾರ ಕಚೇರಿಯಿಂದ ನೆರವು ಪಡೆದ ನಂತರ ಸೋಮವಾರ ಪೆರ್ನೆಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಒಂದು ಗಂಟೆಯೊಳಗೆ ಪೆರ್ನೆಮ್ ಪೊಲೀಸರು, ಇನ್ಸ್ಪೆಕ್ಟರ್ ವಿಕ್ರಮ್ ನಾಯ್ಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿವಾದಾತ್ಮಕ ಡಿಯೋಡ್ರೆಂಟ್ ಜಾಹೀರಾತು ತೆಗೆದುಹಾಕಿ ತನಿಖೆಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶ
ಆರೋಪಿಗಳು ಈ ಹಿಂದೆ ಶಾಲೆಯೊಂದರಲ್ಲಿ ಗ್ರಂಥಪಾಲಕರಾಗಿಯೂ ಕೆಲಸ ಮಾಡಿದ್ದರು. ಪ್ರಸ್ತುತ, ಅವರು ಗ್ರಂಥಪಾಲಕರಾಗಿ ಕೆಲಸ ಮಾಡುತ್ತಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆತನ ಹಿಂದಿನ ದಾಖಲೆಗಳನ್ನು ಪಡೆಯಲು ಸಂಬಂಧಪಟ್ಟ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದೇವೆ ಎಂದು ಹೇಳಿದ್ದಾರೆ.
ಸೋಮವಾರ ರಾತ್ರಿ ಆರೋಪಿಗಳು ಮತ್ತು ಸಂತ್ರಸ್ತೆಯನ್ನು ಇಲ್ಲಿಗೆ ಸಮೀಪದ ಮಾಪುಸಾ ಪಟ್ಟಣದ ಜಿಲ್ಲಾಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಪೊಲೀಸರು ಆತನನ್ನು ಕಸ್ಟಡಿಗೆ ಪಡೆಯಲು ಸೋಮವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಉಪ ಪೊಲೀಸ್ ವರಿಷ್ಠಾಧಿಕಾರಿ (ಪೆರ್ನೆಮ್) ಸಿದ್ಧಾಂತ್ ಶಿರೋಡ್ಕರ್ ಪ್ರಕರಣದ ತನಿಖೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಹೈದರಾಬಾದ್: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ; ವಕ್ಫ್ ಮಂಡಳಿಯ ಹಿರಿಯ ಅಧಿಕಾರಿ ಪುತ್ರ ಸೇರಿ ಮತ್ತಿಬ್ಬರ ಬಂಧನ
ಮಡ್ ಬಾತ್ನಿಂದ ಚರ್ಮದ ಕಾಂತಿ ಹೆಚ್ಚುತ್ತದೆ ಎಂಬ ನಂಬಿಕೆ ಇದ್ದು, ಗೋವಾದಲ್ಲಿ ಹಲವು ‘ಮಡ್ ಬಾತ್’ ಸರ್ವಿಸ್ ತಾಣಗಳಿದ್ದು, ದೇಶ, ವಿದೇಶದ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಾರೆ.