ಪ್ರವಾದಿ ನಿಂದನೆ: ಅಲ್'ಖೈದಾ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಭದ್ರತೆ ಹೆಚ್ಚಿಸಲಾಗಿದೆ- ಕೇಂದ್ರೀಯ ಸಂಸ್ಥೆ
ದೆಹಲಿ, ಮುಂಬೈ, ಉತ್ತರಪ್ರದೇಶ ಹಾಗೂ ಗುಜರಾತ್ ರಾಜ್ಯಗಳಲ್ಲಿ ಆತ್ಮಾಹುತಿ ದಾಳಿ ನಡೆಸುವ ಕುರಿತು ಅಲ್'ಖೈದಾ ಉಗ್ರ ಸಂಘಟನೆ ನೀಡಿರುವ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಎಲ್ಲೆಡೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಕೇಂದ್ರದ ಉನ್ನತ ಸಂಸ್ಥೆಗಳು ಬುಧವಾರ ಮಾಹಿತಿ ನೀಡಿವೆ.
Published: 08th June 2022 01:51 PM | Last Updated: 08th June 2022 02:00 PM | A+A A-

ಸಂಗ್ರಹ ಚಿತ್ರ
ನವದೆಹಲಿ: ದೆಹಲಿ, ಮುಂಬೈ, ಉತ್ತರಪ್ರದೇಶ ಹಾಗೂ ಗುಜರಾತ್ ರಾಜ್ಯಗಳಲ್ಲಿ ಆತ್ಮಾಹುತಿ ದಾಳಿ ನಡೆಸುವ ಕುರಿತು ಅಲ್'ಖೈದಾ ಉಗ್ರ ಸಂಘಟನೆ ನೀಡಿರುವ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಎಲ್ಲೆಡೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಕೇಂದ್ರದ ಉನ್ನತ ಸಂಸ್ಥೆಗಳು ಬುಧವಾರ ಮಾಹಿತಿ ನೀಡಿವೆ.
ಈಗಾಗಲೇ ದೆಹಲಿ, ಮುಂಬೈ, ಉತ್ತರಪ್ರದೇಶ ಹಾಗೂ ಗುಜರಾತ್ ರಾಜ್ಯಗಳಿಗೆ ಎಚ್ಚರಿಕೆಗಳನ್ನು ನೀಡಲಾಗಿದ್ದು, ಜನನಿಬಿಡ ಪ್ರದೇಶಗಳಾಗಿರುವ ವಿಮಾನ ನಿಲ್ದಾಣ, ಮೆಟ್ರೋ, ರೈಲು ನಿಲ್ದಾಣ ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದೆ.
ಯಾವುದೇ ಪ್ರದೇಶದಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ಕಂಡು ಬಂದ ಕೂಡಲೇ ಇಲಾಖೆಗೆ ಮಾಹಿತಿ ನೀಡುವಂತೆ ಭದ್ರತಾ ಸಿಬ್ಬಂದಿಗಳಿಗೂ ಸೂಚಿಸಲಾಗಿದೆ ಎಂದು ಹೇಳಿದೆ.
ಪ್ರವಾದಿ ಮೊಹಮ್ಮದ್ ಕುರಿತು ನೂಪುರ್ ಶರ್ಮಾ ಅವರು ನೀಡಿರುವ ಹೇಳಿಕೆಗೆ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ಉಗ್ರ ಸಂಘಟನೆ ಅಲ್'ಖೈದಾ, ದೆಹಲಿ, ಮುಂಬೈ, ಗುಜರಾತ್ ಹಾಗೂ ಉತ್ತರಪ್ರದೇಶದಲ್ಲಿ ಆತ್ಮಾಹುತಿ ದಾಳಿ ನಡೆಸುವ ಬೆದರಿಕೆಯೊಡ್ಡಿದೆ.
ಕೇಸರಿ ಭಯೋತ್ಪಾದಕರು ಈಗ ದೆಹಲಿ ಮತ್ತು ಬಾಂಬೆಯಲ್ಲಿ ಮತ್ತು ಯುಪಿ ಮತ್ತು ಗುಜರಾತ್ನಲ್ಲಿ ತಮ್ಮ ಅಂತ್ಯವನ್ನು ನಿರೀಕ್ಷಿಸಬೇಕು. ಮಾನವೀಯತೆಯ ಹೆಮ್ಮೆಯ ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅಪರಾಧ ಎಸಗಿದ ಅಪರಾಧಿಗಳಿಗೆ ಯಾವುದೇ ಕ್ಷಮಾದಾನ ಅಥವಾ ಕ್ಷಮೆ ಸಿಗುವುದಿಲ್ಲ, ಯಾವುದೇ ಶಾಂತಿ ಮತ್ತು ಭದ್ರತೆ ಅವರನ್ನು ಬದುಕಿಸುವುದಿಲ್ಲ.
ಪ್ರವಾದಿಯ ಕುರಿತಾಗಿ ಅವಹೇಳನಕಾರಿ ಹೇಳಿಕೆ ನೀಡಿದವರು ತಮ್ಮ ಮನೆಗಳಲ್ಲಿ ಅಥವಾ ಅವರ ಕೋಟೆಯ ಸೈನ್ಯದ ಕಂಟೋನ್ಮೆಂಟ್ ಸೇರಿ ಎಲ್ಲಿಯಾದರೂ ಆಶ್ರಯ ಪಡೆಯಲಿ. ನಮ್ಮ ಪ್ರೀತಿಯ ಪ್ರವಾದಿಯ ಬಗ್ಗೆ ಮಾತನಾಡಿದವರ ಮೇಲೆ ಪ್ರತೀಕಾರವನ್ನು ತೀರಿಸಿಕೊಳ್ಳದಿರಲು ಸಾಧ್ಯವಿಲ್ಲ ಎಂದು ಹೇಳಿದೆ.