MSP: ಭತ್ತದ ಕನಿಷ್ಠ ಬೆಂಬಲ ಬೆಲೆ 100 ರೂ ಏರಿಕೆ; ಕೇಂದ್ರ ಸಂಪುಟ ಸಭೆ ನಿರ್ಧಾರ!!
ಭತ್ತದ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ)ಯಲ್ಲಿ ಕೇಂದ್ರ ಸರ್ಕಾರ 100ರೂ ಹೆಚ್ಚಳ ಮಾಡಿದ್ದು, ಈ ಕುರಿತು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
Published: 08th June 2022 07:29 PM | Last Updated: 08th June 2022 08:02 PM | A+A A-

ಭತ್ತದ ಬೆಳೆ
ನವದೆಹಲಿ: ಭತ್ತದ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ)ಯಲ್ಲಿ ಕೇಂದ್ರ ಸರ್ಕಾರ 100ರೂ ಹೆಚ್ಚಳ ಮಾಡಿದ್ದು, ಈ ಕುರಿತು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
"पिछले साल की तुलना में खरीफ विपणन सत्र 2022-23 में कई फसलों की एमएसपी में बड़ी वृद्धि की गई है जैसे - तिल (₹523/क्विंटल), मूंग (₹480/क्विंटल) ,सूरजमुखी के बीज (₹385/क्विंटल), रामतिल (₹357/क्विंटल), कपास मध्यम रेशा (₹324/क्विंटल)"
— Office of Mr. Anurag Thakur (@Anurag_Office) June 8, 2022
श्री @ianuragthakur pic.twitter.com/peq3eXJOcK
ಈ ಕುರಿತಂತೆ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ಭತ್ತದ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ)ಯಲ್ಲಿ ಕೇಂದ್ರ ಸರ್ಕಾರ 100ರೂ ಹೆಚ್ಚಳ ಮಾಡಲಾಗಿದೆ. ಈ ಪರಿಷ್ಕೃತ ದರ 2022-23ರ ಬೆಳೆ ವರ್ಷಕ್ಕೆ ಅನ್ವಯವಾಗುತ್ತಿದ್ದು, ಪ್ರತಿ ಕ್ವಿಂಟಲ್ ಭತ್ತದ ಎಂಎಸ್ಪಿ 2,040ರೂ ಗೆ ಏರಿಕೆಯಾಗಿದೆ ಎಂದು ತಿಳಿಸಿದರು.
"सोयाबीन पीला (₹350/क्विंटल), तुवर,उड़द,मूंगफली (₹300/क्विंटल), ज्वार हाइब्रिड (₹232/क्विंटल),रागी (₹201/क्विंटल) । 2014 -15 के पहले मात्र १-२ फसलों पर वृद्धि होती थी। लेकिन बड़ा बदलाव @narendramodi जी की सरकार आने के बाद हुआ "
— Office of Mr. Anurag Thakur (@Anurag_Office) June 8, 2022
श्री @ianuragthakur
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು(ಸಿಸಿಇಎ) 2022–23ರ ಬೆಳೆ ವರ್ಷದಲ್ಲಿ ಎಲ್ಲ ಕಡ್ಡಾಯ ಖಾರಿಫ್(ಬೇಸಿಗೆ) ಬೆಳೆಗಳಿಗೆ ಅನ್ವಯವಾಗುವಂತೆ ಎಂಎಸ್ಪಿ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಇಂದಿನ ಕ್ಯಾಬಿನೆಟ್ ಸಭೆಯಲ್ಲಿ 14 ಖಾರಿಫ್ ಬೆಳೆಗಳ ಎಂಎಸ್ಪಿಯನ್ನು ಅನುಮೋದಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಎರಡು ವಾರಗಳಲ್ಲಿ ದಕ್ಷಿಣ ರಾಜ್ಯಗಳಲ್ಲಿ ಟೊಮೆಟೊ ಬೆಲೆಯಲ್ಲಿ ಸ್ಥಿರತೆ: ಕೇಂದ್ರ ಆಹಾರ ಕಾರ್ಯದರ್ಶಿ
'ಮುಂಗಾರಿನಲ್ಲಿ ಬೆಳೆಯುವ ಬೆಳೆಗಳ ಬೆಂಬಲ ಬೆಲೆ ಏರಿಕೆ ನಿರ್ಧರಿಸಲಾಗಿದೆ. ಕ್ವಿಂಟಾಲ್ ಬೇಳೆ ಬೆಂಬಲ ಬೆಲೆ 480 ರೂ ಹೆಚ್ಚಳ. ಕ್ವಿಂಟಾಲ್ ಎಳ್ಳು 523 ರೂ ಹೆಚ್ಚಳ. ಸೂರ್ಯಕಾಂತಿ ಬೀಜದ ಬೆಂಬಲ ಬೆಲೆ 385 ರೂ. ಹೆಸರುಕಾಳು ಕ್ವಿಂಟಾಲ್ ಗೆ 300 ರೂ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ತೊಗರಿ ಮೇಲಿನ ಬೆಂಬಲೆ ಬೆಲೆ ಕ್ವಿಂಟಾಲ್ ಗೆ 300 ರೂ, ಹೆಸರು ಕಾಳಿಗೆ 300 ರೂ. ರಾಗಿ ಬೆಂಬಲ ಬೆಲೆ 201 ರೂ. ಶೇಂಗಾ 300 ರೂ, ಹತ್ತಿ ಬೆಂಬೆಲ ಬೆಲೆ 354 ರೂ ಹೆಚ್ಚಳ ಮಾಡಲು ಸಂಫುಟ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ' ಎಂದರು.
ಇದನ್ನೂ ಓದಿ: ಕರ್ನಾಟಕ ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ: ಕೇವಲ ಶೇ.44ರಷ್ಟು ಸಿಬ್ಬಂದಿ, ರೈತರಿಗೆ ತಲುಪುತ್ತಿಲ್ಲ ಯೋಜನೆಗಳು
ಸಾಮಾನ್ಯ ಗ್ರೇಡ್ನ ಭತ್ತದ ಮೇಲಿನ ಎಂಎಸ್ಪಿ 1,940 ರೂ ರಿಂದ 2,040 ರೂಗೆ ಹೆಚ್ಚಿಸಲಾಗಿದೆ. ಎ ಗ್ರೇಡ್ ಭತ್ತದ ಮೇಲಿನ ಎಂಎಸ್ಪಿ 1,960 ರಿಂದ 2,060 ರೂಗೆ ಏರಿಸಲಾಗಿದೆ. ಭತ್ತವು ಖಾರಿಫ್ನ ಪ್ರಮುಖ ಬೆಳೆಯಾಗಿದೆ. ರೈತರು ಈಗಾಗಲೇ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಜೂನ್–ಸೆಪ್ಟೆಂಬರ್ ಅವಧಿಯಲ್ಲಿ ಸಾಮಾನ್ಯ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.