ಹೈದರಾಬಾದ್: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಶಾಸಕನ ಪುತ್ರ ಸೇರಿ 6 ಮಂದಿ ಆರೋಪಿಗಳ ಬಂಧನ

ಹೈದರಾಬಾದ್'ನ ಜುಬಿಲಿ– ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ಇತ್ತೀಚೆಗೆ ಅಪ್ರಾಪ್ತ ಬಾಲಕಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಂಐಎಂ ಶಾಸಕನ ಪುತ್ರ ಸೇರಿ ಎಲ್ಲಾ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

Published: 08th June 2022 09:56 AM  |   Last Updated: 08th June 2022 12:17 PM   |  A+A-


The Commissioner said they have gathered strong evidence against all those involved in the offence.

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಪೊಲೀಸ್ ಆಯುಕ್ತ.

The New Indian Express

ಹೈದರಾಬಾದ್: ಹೈದರಾಬಾದ್'ನ ಜುಬಿಲಿ– ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ಇತ್ತೀಚೆಗೆ ಅಪ್ರಾಪ್ತ ಬಾಲಕಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಂಐಎಂ ಶಾಸಕನ ಪುತ್ರ ಸೇರಿ ಎಲ್ಲಾ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ 6 ಮಂದಿಯ ಪೈಕಿ ನಾಲ್ವರು ಬಾಲಾರೋಪಿಗಳಾಗಿದ್ದು, ಮತ್ತೊಬ್ಬ ವಯಸ್ಕ ಆರೋಪಿಯನ್ನು ಸದುದ್ದೀನ್ ಮಲಿಕ್ (18 ವರ್ಷ) ಎಂದು ಗುರ್ತಿಸಲಾಗಿದೆ.

ಪ್ರಕರಣದ ಆರನೇ ಬಾಲಾರೋಪಿಯಾಗಿ ಎಐಎಂಐಎಂ ಶಾಸಕನ ಪುತ್ರನನ್ನು ಹೆಸರಿಸಲಾಗಿದ್ದು, ಆತನನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹೈದರಾಬಾದ್: ಅತ್ಯಾಚಾರ ಸಂತ್ರಸ್ತೆಯ ಫೋಟೋ ಬಿಡುಗಡೆ ಮಾಡಿದ್ದ ಬಿಜೆಪಿ ಶಾಸಕರ ವಿರುದ್ಧ ಕೇಸ್

ಸದುದ್ದೀನ್ ಮಲಿಕ್ ಸೇರಿದಂತೆ ಐವರು ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ), 323 (ಆಘಾತ ಉಂಟುಮಾಡಲು ಕಾರಣರಾಗುವುದು), 366 (ಅಪಹರಣ) ಹಾಗೂ ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ವಿಡಿಯೊ ಚಿತ್ರೀಕರಣ ಮಾಡಿದ ಆರೋಪದಲ್ಲಿ ಐಟಿ ಕಾಯ್ದೆಯ ಸೆಕ್ಷನ್ 67ರ ಅಡಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ಕುರಿತು ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಸಿ.ವಿ.ಆನಂದ್  ಅವರು, ಶಾಸಕರ ಪುತ್ರ ಅತ್ಯಾಚಾರದಲ್ಲಿ ಭಾಗಿಯಾಗಿಲ್ಲ, ಆದರೆ ಇನ್ನೋವಾದಲ್ಲಿ ಅಪರಾಧ ನಡೆಯುವುದಕ್ಕೂ ಮೊದಲು, ಶಾಸನನ ಪುತ್ರ ಕಾರಿನಲ್ಲಿ ಸಂತ್ರಸ್ತೆಯ ಜೊತೆಯಲ್ಲಿದ್ದಾಗ ಕಿರುಕುಳ ನೀಡಿದ್ದಾನೆ. ನಂತರ ಆತನ ಜೊತೆಗಿದ್ದ ಮೂವರು ಸ್ನೇಹಿತರು ಆಕೆಗೆ ಕಿರುಕುಳ ನೀಡಿದ್ದಾರೆ. ಬಾಲಕಿಯ ಕುತ್ತಿಗೆ ಹಾಗೂ ದೇಹದ ಇತರೆ ಭಾಗಗಳಲ್ಲಿ ಗಾಯಗಳಾಗಿವೆ ಎಂದು ಹೇಳಿದ್ದಾರೆ.

ಅಪರಾಧದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಮತ್ತು ನ್ಯಾಯಾಲಯದಲ್ಲಿ ಪ್ರಕರಣವನ್ನು ಬಲಪಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹೈದರಾಬಾದ್ ನಲ್ಲಿ ಮತ್ತೆ ನಾಲ್ಕು ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣಗಳು ವರದಿ!

ಇದೇ ವೇಳೆ ಶಾಸಕನ ಪುತ್ರ ಅಪರಾಧದಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಪೊಲೀಸರು ನಿರಾಕರಿಸಿದ್ದಾರೆ.

ಪ್ರಕರಣ ಸೂಕ್ಷ್ಮವಾಗಿದ್ದು, ಸಂತ್ರಸ್ತೆಯ ಹೇಳಿಕೆಗಳು, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಇತರೆ ವಿಡಿಯೋಗಳನ್ನು ಸಾಕ್ಷ್ಯವಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರತಿಯೊಬ್ಬರ ಆರೋಪ ಸಾಬೀತು ಮಾಡಲು ಪೊಲೀಸರು ಕಾಲಾವಕಾಶ ತೆಗೆದುಕೊಂಡಿದ್ದಾರೆ. ತನಿಖೆಯು ನ್ಯಾಯಯುತ ಮತ್ತು ನಿಷ್ಪಕ್ಷಪಾತ ರೀತಿಯಲ್ಲಿ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದ ಯಾರೊಬ್ಬರ ವಿರುದ್ಧ ಕ್ರಮ ಕೈಗೊಳ್ಳದಂತೆ ಯಾವುದೇ ಹಿಂಜರಿಕೆ ಅಥವಾ ಯಾವುದೇ ಒತ್ತಡವಿಲ್ಲಗಳಿಲ್ಲ ಎಂದಿದ್ದಾರೆ.

ಪಾರ್ಟಿಯ ದಿನ ಹುಡುಗಿ ತನ್ನ ಸ್ನೇಹಿತೆಯೊಂದಿಗೆ ಪಬ್'ಗೆ ಹೋಗಿದ್ದಾಳೆ. ಈ ವೇಳೆ ಹುಡುಗಿಯ ಸ್ನೇಹಿತೆ ಇತರರೊಂದಿಗೆ ಬ್ಯುಸಿಯಾಗಿದ್ದಾಳೆ. ನಂತರ ಹುಡುಗಿ ಇತರೆ ಯುವತಿಯೊಂದಿಗೆ ಮಾತನಾಡುತ್ತಿದ್ದಾಗ ಸ್ಥಳಕ್ಕೆ ಬಂದ ಬಾಲಕರ ಗುಂಪೊಂದು ಆಕೆಯೊಂದಿಗೆ ಅಸಭ್ಯವಾಗಿ ಮಾತನಾಡಲು ಆರಂಭಿಸಿದ್ದಾರೆ. ಇದೇ ವೇಳೆ ಸಾದುದ್ದೀನ್ ಮಲಿಕ್ ಕೂಡ ಬಂದಿದ್ದಾನೆ. ಹುಡುಗರ ಅಸಭ್ಯ ವರ್ತನೆ ಹಿನ್ನೆಲೆಯಲ್ಲಿ ಬಾಲಕಿ ಪಬ್ ನಿಂದ ಹೊರಗೆ ಬಂದಿದ್ದಾಳೆ.

ಬಾಲಕಿ ಕ್ಯಾಬ್ ನಲ್ಲಿ ಒಬ್ಬಂಟಿಯಾಗಿ ಹೋಗುವುದನ್ನು ನೋಡಿದ ಆರೋಪಿಗಳು ಆಕೆಯನ್ನು ಹಿಂಬಾಲಿಸಿದ್ದಾರೆ. ಬಳಿಕ ಆಕೆಯನ್ನು ತಮ್ಮ ಕಾರಿಗೆ ಹತ್ತಿಸಿಕೊಂಡು ಒಬ್ಬರಾದ ಬಳಿಕ ಒಬ್ಬರಂತೆ ಆಕೆಗೆ ಕಿರುಕುಳ ನೀಡಿದ್ದಾರೆ. ಕಿರುಕುಳ ನೀಡಿದ ಬಳಿಕ ತೆಲಂಗಾಣ ವಕ್ಫ್ ಬೋರ್ಡ್'ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಅಧಿಕೃತ ವಾಹನವಾದ ಹಿನ್ನೆಲೆಯಲ್ಲಿ ರೆಸ್ಟೋರೆಂಟ್ ವೊಂದರ ಬಳಿ ಬಾಲಕಿಯನ್ನು ಇನ್ನೋವಾ ಕಾರಿಗೆ ಸ್ಥಳಾಂತರಿಸಿದ್ದಾರೆ.

ಇದನ್ನೂ ಓದಿ: ಹೈದರಾಬಾದ್: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ; ವಕ್ಫ್ ಮಂಡಳಿಯ ಹಿರಿಯ ಅಧಿಕಾರಿ ಪುತ್ರ ಸೇರಿ ಮತ್ತಿಬ್ಬರ ಬಂಧನ

ಬಳಿಕ ಜುಬಿಲಿ ಹಿಲ್ಸ್‌ನ ರೋಡ್ ನಂ 44 ರಲ್ಲಿನ ನಿರ್ಜನ ಪ್ರದೇಶವೊಂದಕ್ಕೆ ಕಾರನ್ನು ತೆಗೆದುಕೊಂಡ ಬಂದ ಆರೋಪಿಗಳು ಒಬ್ಬರ ನಂತರ ಒಬ್ಬರಂತೆ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಅತ್ಯಾಚಾರದ ಬಳಿಕ ಬಾಲಕಿಯನ್ನು ಮರಳಿ ಪಬ್ ಬಳಿ ಡ್ರಾಪ್ ಮಾಡಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಬಳಿಕ ಕಾರನ್ನು ಫಾರ್ಮ್ ಹೌಸ್ ಒಂದರ ಬಳಿ ನಲ್ಲಿಸಿದ್ದಾರೆ.

ಕಾರನ್ನು ಬಿಟ್ಟು ಹೋಗಲಾಗಿತ್ತೇ ಅಥವಾ ಪ್ರಕರಣದಲ್ಲಿ ಯಾರಾದರೂ ಆರೋಪಿಗಳಿಗೆ ಸಹಾಯ ಮಾಡುತ್ತಿದ್ದಾರೆಯೇ, ಪ್ರಕರಣದಲ್ಲಿ ಸಾಕ್ಷ್ಯಗಳ ಹತ್ತಿಕ್ಕಲು ಯತ್ನಗಳು ನಡೆದಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಮನೆಯ ಮುಂದೆ ಇನ್ನೋವಾ ಕಾರನ್ನು ನಿಲ್ಲಿಸಲಾಗಿದೆ.

ಇನ್ನೋವಾವನ್ನು ಓಡಿಸಿ ಒಬ್ಬರ ನಂತರ ಒಬ್ಬರಂತೆ ಅತ್ಯಾಚಾರ ಎಸಗಿದ್ದಾರೆ. ಅಪರಾಧದ ನಂತರ, ಅವರು ಅವಳನ್ನು ಪಬ್‌ಗೆ ಡ್ರಾಪ್ ಮಾಡಿ ಸ್ಥಳದಿಂದ ತೆರಳಿದರು. ನಂತರ ತೋಟದ ಮನೆಗೆ ತೆರಳಿ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ಸಾಕ್ಷ್ಯಗಳ ನಾಶಪಡಿಸಲು ಆರೋಪಿಗಳಿಗೆ ಯಾರಾದರೂ ಸಹಾಯ ಮಾಡಿದ್ದರೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಗಳು ಕೇಳಿ ಬಂದಿರುವಂತೆ ಕಾರು ಅಧಿಕೃತ ವಾಹನವೇ ಎಂಬುದರ ಕುರಿತಂತೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಬಾಲಕಿಯೊಂದಿಗೆ ಪಬ್'ಗೆ ಬಂದಿದ್ದ ಮತ್ತೊಬ್ಬ ಬಾಲಕಿಗೆ ಯಾವುದೇ ಕಿರುಕುಗಳನ್ನು ನೀಡಲಾಗಿಲ್ಲ ಎಂದು ತಿಳಿಸಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
BS yediyurappa

ಬಿಜೆಪಿ ಸಂಸದೀಯ ಮಂಡಳಿಗೆ ಬಿ.ಎಸ್. ಯಡಿಯೂರಪ್ಪ ಸೇರ್ಪಡೆಯಿಂದ 2023 ರ ಕರ್ನಾಟಕ ಚುನಾವಣೆಯಲ್ಲಿ ಪಕ್ಷಕ್ಕೆ ನೆರವಾಗುವುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp