ಸಿಧು ಮೂಸೆವಾಲ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ: ದೆಹಲಿ ಪೊಲೀಸ್
ಪಂಜಾಬ್ ಹಾಡುಗಾರ ಸಿಧು ಮೂಸೆವಾಲ ಹತ್ಯೆ ಪ್ರಕರಣದಲ್ಲಿ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಮಾಸ್ಟರ್ ಮೈಂಡ್ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
Published: 09th June 2022 12:01 AM | Last Updated: 09th June 2022 01:16 PM | A+A A-

ಹೆಚ್ ಎಸ್ ಧಲಿವಾಲ್
ನವದೆಹಲಿ: ಪಂಜಾಬ್ ಹಾಡುಗಾರ ಸಿಧು ಮೂಸೆವಾಲ ಹತ್ಯೆ ಪ್ರಕರಣದಲ್ಲಿ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಮಾಸ್ಟರ್ ಮೈಂಡ್ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಪಂಜಾಬ್ ನ ಮಾನ್ಸಾದಲ್ಲಿ ಕಳೆದ ತಿಂಗಳು ನಡೆದ ಭೀಕರ ಹತ್ಯೆಯಲ್ಲಿ ಶಾಮೀಲಾಗಿದ್ದ ಆರೋಪಿಯ ನಿಕಟ ಸಹಚರನನ್ನೂ ಬಂಧಿಸಲಾಗಿದೆ.
ಜೈಲಿನಲ್ಲಿದ್ದುಕೊಂಡೂ ಖ್ಯಾತ ಗಾಯಕನ ಹತ್ಯೆಗೆ ಬಿಷ್ಣೋಯ್ ಹೇಗೆ ಯೋಜನೆ ರೂಪಿಸಿದ್ದ ಎಂಬುದರ ಬಗ್ಗೆ
ಪೊಲೀಸರು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: ಮೂಸೆವಾಲ ಹತ್ಯೆ ಪ್ರಕರಣದಲ್ಲಿ ಪುಣೆ ಪೊಲೀಸರಿಂದ ಮತ್ತೋರ್ವನ ಬಂಧನ
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ವಿಶೇಷ ಪೊಲೀಸ್ ಆಯುಕ್ತ (ವಿಶೇಷ ಸೆಲ್) ಹೆಚ್ ಎಸ್ ಧಲಿವಾಲ್ ಹತ್ಯೆ ಪ್ರಕರಣದಲ್ಲಿ ಇನ್ನೂ ಐವರನ್ನು ಗುರುತಿಸಿರುವುದಾಗಿ ಹೇಳಿದ್ದಾರೆ.