
ಕಾಂಗ್ರೆಸ್
ಜೈಪುರ: ರಾಜ್ಯಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜಸ್ಥಾನದ ಕಾಂಗ್ರೆಸ್ ಪಕ್ಷ ತನ್ನ ಶಾಸಕರನ್ನು ರೆಸಾರ್ಟ್ ನಲ್ಲಿ ಹಿಡಿದಿಟ್ಟುಕೊಂಡಿದೆ.
ಉದಯ್ ಪುರ ರೆಸಾರ್ಟ್ ನಲ್ಲಿರುವ ಶಾಸಕರನ್ನು ರಂಜಿಸುವುದಕ್ಕಾಗಿ ಮ್ಯಾಜಿಕ್ ಶೋ, ಕ್ರೀಡೆಯಂತಹ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಶಾಸಕರು ಅಂತಾಕ್ಷರಿಯಿಂದ ಕ್ರಿಕೆಟ್ ವರೆಗೂ ವಿವಿಧ ಮನರಂಜನೆಯಲ್ಲಿ ತೊಡಗಿದ್ದು ಆನ್ ಲೈನ್ ನಲ್ಲಿ ಈ ಕುರಿತ ವಿಡಿಯೋ ವೈರಲ್ ಆಗತೊಡಗಿವೆ.
ರಾಜ್ಯಸಭೆ ಚುನಾವಣೆ ಜೂ.10 ರಂದು ನಡೆಯಲಿದ್ದು, ಬಿಜೆಪಿಯಿಂದ ಕುದುರೆ ವ್ಯಾಪಾರದ ಭೀತಿಯಿಂದ ಜೂ.02 ರಂದು ಕಾಂಗ್ರೆಸ್ ಪಕ್ಷ ತನ್ನ ಇಬ್ಬರು ಶಾಸಕರನ್ನು ಐಷಾರಾಮಿ ತಾಜ್ ಅರಾವಲಿ ರೆಸಾರ್ಟ್ ಗೆ ವರ್ಗಾವಣೆ ಮಾಡಿತ್ತು.
ಇದನ್ನೂ ಓದಿ: ರಾಜಸ್ಥಾನ: ರಾಜ್ಯಸಭಾ ಚುನಾವಣೆಯಲ್ಲಿ ಕುದುರೆ ವ್ಯಾಪಾರ, ಆಯೋಗಕ್ಕೆ ಕಾಂಗ್ರೆಸ್ ದೂರು
ಬಿಜೆಪಿ ಸಹ ತನ್ನ ಶಾಸಕರನ್ನು ಪ್ರತ್ಯೇಕವಾಗಿರಿಸಿದ್ದು, ಜೈಪುರದಲ್ಲಿರುವ ಹೊಟೇಲ್ ನಲ್ಲಿರಿಸಿದ್ದು ಇದನ್ನು ತರಬೇತಿ ಕ್ಯಾಂಪ್ ಎಂದು ಪಕ್ಷ ಸಮರ್ಥನೆ ನೀಡಿದೆ.