ವಿಡಿಯೋ ನೋಡಿ: ಬುಡಕಟ್ಟು ಮಹಿಳೆಯರ ಜೊತೆ ಹೆಜ್ಜೆ ಹಾಕಿದ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಅಲಿಪುರ್ದೂರ್ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಬುಡಕಟ್ಟು ಮಹಿಳೆಯರ ಗುಂಪಿನ ಜೊತೆ ಹೆಜ್ಜೆ ಹಾಕಿದ್ದಾರೆ.
Published: 09th June 2022 04:04 PM | Last Updated: 09th June 2022 04:04 PM | A+A A-

ಮಮತಾ ಬ್ಯಾನರ್ಜಿ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಅಲಿಪುರ್ದೂರ್ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಬುಡಕಟ್ಟು ಮಹಿಳೆಯರ ಗುಂಪಿನ ಜೊತೆ ಹೆಜ್ಜೆ ಹಾಕಿದ್ದಾರೆ.
ತೃಣಮೂಲ ಕಾಂಗ್ರೆಸ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಮುಖ್ಯಮಂತ್ರಿಗಳು ಬುಡಕಟ್ಟು ಸಂಗೀತ ಕೇಳಿ ಬರುತ್ತಿದ್ದಂತೆ ಮಹಿಳೆಯರ ಜೊತೆಗೂಡಿ ನೃತ್ಯ ಮಾಡುವುದನ್ನು ಕಾಣಬಹುದಾಗಿದೆ. ತದನಂತರ ಅವರು ನವವಿವಾಹಿತರಿಗೆ ಶುಭಹಾರೈಸಿ ಉಡುಗೊರೆಗಳನ್ನು ನೀಡಿದರು.
ಅದ್ಧೂರಿ ಸಮಾರಂಭದಲ್ಲಿ ಸುಮಾರು 510 ಬುಡಕಟ್ಟು ಜೋಡಿಗಳು ವಿವಾಹವಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
At a mass wedding programme in Alipurduar, Hon’ble Chairperson @MamataOfficial blessed the young couples.
— All India Trinamool Congress (@AITCofficial) June 8, 2022
Being part of the magnificent ceremony, she wholeheartedly celebrated and expressed her desire to see our Adivasi brothers and sisters achieve great heights of success. pic.twitter.com/ZmbjmB0Tgz