
ಪ್ರಧಾನಿ ಮೋದಿ - ಶಿಕ್ಷಕ ಜಗದೀಶ್ ನಾಯಕ್
ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಗುಜರಾತ್ನ ನವಸಾರಿಯ ವಡ್ನಗರದಲ್ಲಿ ತಮ್ಮ ಶಾಲಾ ಶಿಕ್ಷಕರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಒಂದು ದಿನದ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಹಲವು ಯೋಜನೆಗಳನ್ನು ಉದ್ಗಾಟಿಸಿದ್ದು, ಈ ನಡುವೆ ಬಿಡುವು ಮಾಡಿಕೊಂಡು ಶಾಲಾ ಶಿಕ್ಷಕರನ್ನು ಭೇಟಿ ಮಾಡಿದ್ದಾರೆ.
ಇದನ್ನು ಓದಿ: ಕಳೆದ ಎಂಟು ವರ್ಷಗಳಲ್ಲಿ ಭಾರತದ ಜೈವಿಕ ಆರ್ಥಿಕತೆ 8 ಪಟ್ಟು ಹೆಚ್ಚಾಗಿದೆ: ಪ್ರಧಾನಿ ಮೋದಿ
ಬಾಲ್ಯದಲ್ಲಿ ಕಲಿಸಿದ ಶಿಕ್ಷಕರನ್ನು ಭೇಟಿ ಮಾಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಾಲೆಯ ಶಿಕ್ಷಕರ ಹೆಸರು ಜಗದೀಶ್ ನಾಯಕ್. ವೈರಲ್ ಆದ ಫೋಟೊದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಶಿಕ್ಷಕರಿಗೆ ಕೈಮುಗಿದು ನಮಸ್ಕರಿಸುತ್ತಿದ್ದರೆ, ಅವರ ಶಾಲಾ ಶಿಕ್ಷಕರು ಅವರ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸುತ್ತಿದ್ದಾರೆ.