ಸಿಧು ಮೂಸೆವಾಲ ಹತ್ಯೆ ಪ್ರಕರಣ: ಗೋಲ್ಡೀ ಬ್ರಾರ್ ವಿರುದ್ಧ ಇಂಟರ್ ಪೋಲ್ ನಿಂದ ರೆಡ್ ಕಾರ್ನರ್ ನೊಟೀಸ್
ಪಂಜಾಬ್ ನ ಖ್ಯಾತ ಗಾಯಕ, ಕಾಂಗ್ರೆಸ್ ನಾಯಕರೂ ಆಗಿದ್ದ ಸಿಧು ಮೂಸವಾಲ ಹತ್ಯೆ ಪ್ರಕರಣದಲ್ಲಿ ಗೋಲ್ಡೀ ಬ್ರಾರ್ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಜಾರಿಗೊಳಿಸಲಾಗಿದೆ.
Published: 10th June 2022 03:22 AM | Last Updated: 10th June 2022 01:18 PM | A+A A-

ಗೋಲ್ಡೀ ಬ್ರಾರ್-ಸಿಧು ಮೂಸೆವಾಲ
ನವದೆಹಲಿ: ಪಂಜಾಬ್ ನ ಖ್ಯಾತ ಗಾಯಕ, ಕಾಂಗ್ರೆಸ್ ನಾಯಕರೂ ಆಗಿದ್ದ ಸಿಧು ಮೂಸವಾಲ ಹತ್ಯೆ ಪ್ರಕರಣದಲ್ಲಿ ಗೋಲ್ಡೀ ಬ್ರಾರ್ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಜಾರಿಗೊಳಿಸಲಾಗಿದೆ.
ಗೋಲ್ಡೀ ಬ್ರಾರ್ ಸಿಧು ಮೂಸೆವಾಲ ಹತ್ಯೆ ಪ್ರಕರಣದ ಹೊಣೆ ಹೊತ್ತಿತ್ತು. ಸಿಬಿಐ ಮನವಿ ಹಿನ್ನೆಲೆಯಲ್ಲಿ ಗೋಲ್ಡೀ ಬ್ರಾರ್ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಜಾರಿಗೊಳಿಸಲಾಗಿದೆ.
ಗೋಲ್ಡೀ ಬ್ರಾರ್ ಕೆನಡಾದಲ್ಲಿದ್ದು, ಪಂಜಾಬ್ ಪೊಲೀಸರು ಈ ಹಿಂದಿನ ಎರಡು ಹಳೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ರೆಡ್ ಕಾರ್ನರ್ ನೋಟೀಸ್ ಜಾರಿಗೊಳಿಸಿದ್ದಾರೆ.
ಇದನ್ನೂ ಓದಿ: ಮೂಸೆವಾಲ ಹತ್ಯೆ ಪ್ರಕರಣದಲ್ಲಿ ಪುಣೆ ಪೊಲೀಸರಿಂದ ಮತ್ತೋರ್ವನ ಬಂಧನ
ಗೋಲ್ಡೀ ಬ್ರಾರ್ ಶ್ರೀಮುಕ್ತ್ಸರ್ ಸಾಹೀಬ್ ನ ಮೂಲದವನಾಗಿದ್ದು, 2017 ರಲ್ಲಿ ವಿದ್ಯಾರ್ಥಿ ವೀಸಾ ಪಡೆದು ಕೆನಡಾಗೆ ತೆರಳಿದ್ದ ಈತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ಸದಸ್ಯನಾಗಿದ್ದಾನೆ.