ಮಧ್ಯಪ್ರದೇಶ: ಆಂಬುಲೆನ್ಸ್ ಸಿಗದೇ ಮಗಳ ಮೃತದೇಹ ಹೆಗಲ ಮೇಲೆ ಹೊತ್ತು ಸಾಗಿದ ತಂದೆ
ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಲ್ಲಿ ಮಗುವಿನ ಶವ ಸಾಗಿಸಲು ಆಂಬುಲೆನ್ಸ್ ಇಲ್ಲದೇ ತಂದೆ ಮೃತದೇಹವನ್ನ ಹೆಗಲ ಮೇಲೆ ಹೊತ್ತುಕೊಂಡು ಸಾಗಿರುವ ಕರುಣಾಜನಕ ಘಟನೆ ವರದಿಯಾಗಿದೆ.
Published: 10th June 2022 04:07 PM | Last Updated: 10th June 2022 04:07 PM | A+A A-

ಮಗಳ ಮೃತದೇಹ ಹೆಗಲ ಮೇಲೆ ಹೊತ್ತು ಸಾಗಿದ ತಂದೆ
ಛತ್ತರ್ಪುರ: ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಲ್ಲಿ ಮಗುವಿನ ಶವ ಸಾಗಿಸಲು ಆಂಬುಲೆನ್ಸ್ ಇಲ್ಲದೇ ತಂದೆ ಮೃತದೇಹವನ್ನ ಹೆಗಲ ಮೇಲೆ ಹೊತ್ತುಕೊಂಡು ಸಾಗಿರುವ ಕರುಣಾಜನಕ ಘಟನೆ ವರದಿಯಾಗಿದೆ.
ಅಧಿಕಾರಿಗಳು ತಮ್ಮ ಗ್ರಾಮಕ್ಕೆ ಶವ ಸಾಗಿಸಲು ವಾಹನವನ್ನು ನೀಡಲಿಲ್ಲ. ಹೀಗಾಗಿ ನಾಲ್ಕು ವರ್ಷದ ಮಗುವಿನ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಬೇಕಾಯಿತು ಎಂದು ಮೃತ ಬಾಲಕಿಯ ಕುಟುಂಬಸ್ಥರು ಹೇಳಿದ್ದಾರೆ.
ಇದನ್ನು ಓದಿ: ಬಿಹಾರ: ಸರ್ಕಾರಿ ಆಸ್ಪತ್ರೆಯಿಂದ ಮಗನ ಶವ ಪಡೆಯಲು ಭಿಕ್ಷೆ ಬೇಡಿದ ತಂದೆ-ತಾಯಿ, ವಿಡಿಯೋ ವೈರಲ್
ಮಗುವಿನ ಆರೋಗ್ಯ ಹದಗೆಟ್ಟಿದ್ದರಿಂದ ಚಿಕಿತ್ಸೆಗಾಗಿ ಸೋಮವಾರ ಬಕ್ಸ್ವಾಹಾ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತು. ನಂತರ ಮಂಗಳವಾರ ಮನೆಯವರು ಬಾಲಕಿಯನ್ನು ಪಕ್ಕದ ದಮೋಹ್ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು, ಆದರೆ ಅದೇ ದಿನ ಬಾಲಕಿ ಸಾವನ್ನಪ್ಪಿದ್ದು. ಮೃತದೇಹವನ್ನು ಮನೆಗೆ ಕೊಂಡೊಯ್ಯಲು ಆಸ್ಪತ್ರೆಯ ಸಿಬ್ಬಂದಿಗೆ ಆಂಬ್ಯುಲೆನ್ಸ್ ಕೇಳಿದರೂ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಬಾಲಕಿಯ ಅಜ್ಜ ಮನ್ಸುಖ್ ಅಹಿರ್ವಾರ್ ಆರೋಪಿಸಿದ್ದಾರೆ.
ಖಾಸಗಿ ವಾಹನ ವ್ಯವಸ್ಥೆ ಮಾಡಲು ನಮ್ಮಲ್ಲಿ ಹಣವಿಲ್ಲದ ಕಾರಣ ನಾವು ಬಾಲಕಿಯ ದೇಹವನ್ನು ಕಂಬಳಿಯಲ್ಲಿ ಸುತ್ತಿ ಬಕ್ಸ್ವಾಹಾಗೆ ಬಸ್ ಹತ್ತಿದೆವು ಎಂದು ಅವರು ಹೇಳಿದ್ದಾರೆ.
ಬಕ್ಸ್ವಾಹಾ ತಲುಪಿದ ನಂತರ, ಬಾಲಕಿಯ ತಂದೆ ಲಕ್ಷ್ಮಣ್ ಅಹಿರ್ವಾರ್ ಅವರು ಶವವನ್ನು ಪೌಡಿ ಗ್ರಾಮಕ್ಕೆ ಕೊಂಡೊಯ್ಯಲು ವಾಹನವನ್ನು ಒದಗಿಸುವಂತೆ ನಗರ ಪಂಚಾಯತ್ಗೆ ಕೇಳಿದರು, ಆದರೆ ಅವರೂ ಸಹ ನಿರಾಕರಿಸಿದರು ಎನ್ನಲಾಗಿದೆ.
ಆದರೆ ಅಧಿಕಾರಿಗಳು ಬಾಲಕನ ಕುಟುಂಬಸ್ಥರ ಆರೋಪವನ್ನ ತಳ್ಳಿಹಾಕಿದ್ದಾರೆ.
Ambulance Missing: In Madhya Pradesh a family had to carry the deadbody of 4-year-child on shoulders as he couldn't get a hearse van or an ambulance. @TheQuint @QuintHindi pic.twitter.com/NiMupXfgJj
— Vishnukant (@vishnukant_7) June 10, 2022