
ಕೆಟಿ ರಾಮ ರಾವ್
ಹೈದ್ರಾಬಾದ್: ಕೇಂದ್ರಿಯ ತನಿಖಾ ಸಂಸ್ಥೆಗಳ ಪಾರದರ್ಶಕತೆಯನ್ನು ಟಿಆರ್ ಎಸ್ ಕಾರ್ಯಾಧ್ಯಕ್ಷ ಕೆ.ಟಿ ರಾಮ ರಾವ್ ಪ್ರಶ್ನಿಸಿದ್ದಾರೆ. ಡಿಎಂಕೆ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕಳೆದ ಎಂಟು ವರ್ಷಗಳಲ್ಲಿ ಬಿಜೆಪಿ ಮುಖಂಡರು ಹಾಗೂ ಅವರ ಸಂಬಂಧಿಕರ ನಿವಾಸ ಹಾಗೂ ಕಚೇರಿಗಳ ಮೇಲೆ ಎಷ್ಟು ಇಡಿ, ಐಟಿ, ಸಿಬಿಐ ದಾಳಿ ನಡೆದಿದೆ ಎಂದು ಅವರು ಕೇಳಿದ್ದಾರೆ.
ಈ ಕುರಿತು ಶನಿವಾರ ಅವರು ಟ್ವೀಟ್ ಮಾಡಿದ್ದು, ಎಲ್ಲಾ ಬಿಜೆಪಿಯ ಸಂಬಂಧಿಕರು ಸತ್ಯ ಹರಿಶ್ಚಂದ್ರರಾ? ಎಂದು ಪ್ರಶ್ನಿಸಿದ್ದಾರೆ.
బీజేపీలో అందరు సత్యహరిచంద్రలు ఉంటారు..
— Mutha Ganesh (@TelanganaGanesh) June 11, 2022
రోజుకి 18 గంటలు పని చేస్తారు...
2 గంటలు పడుకుంటారు...
ఇంకో 4 గంటలు దేశం కోసం ధర్మం కోసం ఆలోచిస్తారు...
అందుకే ఈడీ , ఐటీ & సీబీఐ దాడులు చెయ్యరు... pic.twitter.com/UI8lQuolCY
ಅನೇಕ ತಿಂಗಳುಗಳಿಂದ ಬಿಜೆಪಿ ಹಾಗೂ ಟಿಆರ್ ಎಸ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ತೆಲಂಗಾಣ ವಿಧಾನಸಭಾ ಚುನಾವಣೆಗೆ ಸನ್ನಿಹದಲ್ಲಿರುವಂತೆಯೇ ಉಭಯ ಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪ, ವಾಗ್ವಾದಗಳು ಮತ್ತಷ್ಟು ಹೆಚ್ಚಾಗುತ್ತಿವೆ.