'ಬಿಜೆಪಿ ಬಗ್ಗೆ ತಿಳಿದುಕೊಳ್ಳಿ': ಇಂದು 13 ವಿದೇಶಿ ರಾಯಭಾರಿಗಳೊಂದಿಗೆ ಜೆಪಿ ನಡ್ಡಾ ಸಂವಾದ

ವಿಶ್ವದಾದ್ಯಂತ ಜನರನ್ನು ತಲುಪಲು ಬಿಜೆಪಿ ಹಲವು ಕ್ರಮಗಳನ್ನ ಕೈಗೊಂಡಿದ್ದು, 'ಬಿಜೆಪಿ ಬಗ್ಗೆ ತಿಳಿದುಕೊಳ್ಳಿ' ಕಾರ್ಯಕ್ರಮದ ಅಂಗವಾಗಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಶನಿವಾರ ವಿದೇಶಿ ರಾಯಭಾರಿಗಳೊಂದಿಗೆ ಸಂವಾದ...
ಜೆ.ಪಿ ನಡ್ಡಾ
ಜೆ.ಪಿ ನಡ್ಡಾ

ನವದೆಹಲಿ: ವಿಶ್ವದಾದ್ಯಂತ ಜನರನ್ನು ತಲುಪಲು ಬಿಜೆಪಿ ಹಲವು ಕ್ರಮಗಳನ್ನ ಕೈಗೊಂಡಿದ್ದು, 'ಬಿಜೆಪಿ ಬಗ್ಗೆ ತಿಳಿದುಕೊಳ್ಳಿ' ಕಾರ್ಯಕ್ರಮದ ಅಂಗವಾಗಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಶನಿವಾರ ವಿದೇಶಿ ರಾಯಭಾರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

150 ಕ್ಕೂ ಹೆಚ್ಚು ದೇಶಗಳ ರಾಯಭಾರಿಗಳೊಂದಿಗೆ ಸಂಪರ್ಕ ಸಾಧಿಸಲು ಎದುರು ನೋಡುತ್ತಿರುವ ಬಿಜೆಪಿ , ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಇಂದು ಸಂಜೆ 13 ವಿದೇಶಿ ರಾಯಭಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

13 ದೇಶಗಳ ಮಿಷನ್ ಮುಖ್ಯಸ್ಥರು ಶನಿವಾರ ಸಂಜೆ 4 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರೊಂದಿಗೆ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಈ ಸಂವಾದವು ಏಪ್ರಿಲ್ 6 ರಂದು ಬಿಜೆಪಿಯ ಸಂಸ್ಥಾಪನಾ ದಿನದಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ Know BJP (ಬಿಜೆಪಿ ಬಗ್ಗೆ ತಿಳಿದುಕೊಳ್ಳಿ) ಕಾರ್ಯಕ್ರಮಗಳ ಸರಣಿಯ ಒಂದು ಭಾಗವಾಗಿದೆ.

ಸಭೆಯಲ್ಲಿ ಪಕ್ಷವು ತನ್ನ ಐತಿಹಾಸಿಕ ಪ್ರಯಾಣ, ಸಿದ್ಧಾಂತ, ರಚನೆ ಮತ್ತು ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ಪ್ರಸ್ತುತಪಡಿಸುತ್ತದೆ. ಜೆಪಿ ನಡ್ಡಾ ಅವರು ಇತಿಹಾಸ, ಹೋರಾಟಗಳು, ಯಶಸ್ಸುಗಳು, ಸಿದ್ಧಾಂತ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಪಕ್ಷ ಮತ್ತು ಬಿಜೆಪಿ ಸರ್ಕಾರಗಳ ಕೊಡುಗೆಗಳನ್ನು ವಿವರಿಸಲಿದ್ದಾರೆ.

ಆಫ್ರಿಕನ್, ಪೂರ್ವ ಏಷ್ಯನ್, ಗಲ್ಫ್, CIS ಮತ್ತು ಉತ್ತರ ಅಮೆರಿಕಾದ ರಾಷ್ಟ್ರಗಳು ಸೇರಿದಂತೆ ರಾಯಭಾರಿಗಳನ್ನು ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ಸರಣಿಯ ಮುಂದಿನ ಈವೆಂಟ್‌ಗಳನ್ನು ಜೂನ್ 13 ಮತ್ತು ಜೂನ್ 15 ರಂದು ನಿಗದಿಪಡಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ರಾಜ್ಯವರ್ಧನ್ ಸಿಂಗ್ ರಾಥೋಡ್, ಗುರು ಪ್ರಕಾಶ್ ಪಾಸ್ವಾನ್, ಪಕ್ಷದ ವಿದೇಶಾಂಗ ಖಾತೆಯ ಉಸ್ತುವಾರಿ ವಿಜಯ್ ಚೌತೈವಾಲೆ ಮತ್ತು ಇತರ ಕೆಲವು ಪ್ರತಿಷ್ಠಿತ ಬಿಜೆಪಿ ನಾಯಕರು ಜೆಪಿ ನಡ್ಡಾರ ಸಭೆಯನ್ನು ಸೇರಿಕೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com