ನೂಪುರ್ ಶರ್ಮಾ ತಲೆ ಕತ್ತರಿಸಿದ್ದ ಅಣಕು ವಿಡಿಯೋ ಪ್ರಸಾರ: ಕಾಶ್ಮೀರದ ಯೂಟ್ಯೂಬರ್ ಬಂಧನ

ಪ್ರವಾದಿ ಮೊಹಮ್ಮದ್ ಕುರಿತು  ಆಕ್ಷೇಪಾರ್ಹ ಹೇಳಿಕೆ ನೀಡಿ ಅಮಾನತುಗೊಂಡಿರುವ ಬಿಜೆಪಿ ಮಾಜಿ ವಕ್ತಾರೆ ಪ್ರತಿಮೆಯ ಶಿರಚ್ಛೇದವನ್ನು ತೋರಿಸುವ ವೀಡಿಯೊ ಪೋಸ್ಟ್ ಮಾಡಿದ್ದ ಕಾಶ್ಮೀರದ ಯೂಟ್ಯೂಬರ್ ಅನ್ನು ಶನಿವಾರ ಬಂಧಿಸಲಾಗಿದೆ...
ಯೂಟ್ಯೂಬರ್ ಫೈಸಲ್ ವಾನಿ
ಯೂಟ್ಯೂಬರ್ ಫೈಸಲ್ ವಾನಿ

ನವದೆಹಲಿ: ಪ್ರವಾದಿ ಮೊಹಮ್ಮದ್ ಕುರಿತು  ಆಕ್ಷೇಪಾರ್ಹ ಹೇಳಿಕೆ ನೀಡಿ ಅಮಾನತುಗೊಂಡಿರುವ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರತಿಮೆಯ ಶಿರಚ್ಛೇದವನ್ನು ತೋರಿಸುವ ವೀಡಿಯೊ ಪೋಸ್ಟ್ ಮಾಡಿದ್ದ ಕಾಶ್ಮೀರದ ಯೂಟ್ಯೂಬರ್ ಅನ್ನು ಶನಿವಾರ ಬಂಧಿಸಲಾಗಿದೆ. ಈ ವಿಡಿಯೋ ಸಾರ್ವಜನಿಕರಲ್ಲಿ ಭಯ ಮತ್ತು ಆತಂಕ ಮೂಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಶ್ಮೀರ ಮೂಲದ ಯೂಟ್ಯೂಬರ್ ಫೈಸಲ್ ವಾನಿ ಅವರನ್ನು ಬಂಧಿಸಲಾಗಿದೆ. ಅವರು ಯೂಟ್ಯೂಬ್‌ನಲ್ಲಿ ದೋಷಾರೋಪಣೆ ಮಾಡುವ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ. ಇದು ಸಾರ್ವಜನಿಕ ನೆಮ್ಮದಿಗೆ ವಿರುದ್ಧವಾಗಿದೆ ಮತ್ತು ಸಾಮಾನ್ಯವಾಗಿ ಸಾರ್ವಜನಿಕರಲ್ಲಿ ಭಯ ಮತ್ತು ಆತಂಕವನ್ನು ಉಂಟುಮಾಡಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಘಟನೆ ಬೆನ್ನಲ್ಲೇ ಇಂದು ಬೆಳಗ್ಗೆ ಫೈಸಲ್ ವಾನಿ ವೀಡಿಯೊವನ್ನು ಅಳಿಸಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಕ್ಷಮೆಯಾಚಿಸಿದ್ದರು.

ಪ್ರವಾದಿ ಮುಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ನೂಪುರ್ ಶರ್ಮಾ ಅವರನ್ನು ಬಿಜೆಪಿಯಿಂದ ಅಮಾನತುಗೊಳಿಸಲಾಗಿದೆ ಮತ್ತು ದೆಹಲಿ ಬಿಜೆಪಿ ಮಾಧ್ಯಮ ಘಟಕ ನವೀನ್ ಜಿಂದಾಲ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಈ ಇಬ್ಬರು ನಾಯಕರ ವಿವಾದಾತ್ಮಕ ಹೇಳಿಕೆಗಳು ಈಗ ದೇಶಾದ್ಯಂತ ಮುಸ್ಲಿಂ ಸಂಘಟನೆಗಳು ದೊಡ್ಡ ಪ್ರತಿಭಟನೆ ನಡೆಸಲು ಕಾರಣವಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com