ಗಡ್ಕರಿಯಿಂದ ಅನುದಾನ ಪಡೆಯಲು 15 ಕೆ.ಜಿ ತೂಕ ಇಳಿಸಿಕೊಂಡ ಬಿಜೆಪಿ ಸಂಸದ

ಉಜ್ಜೈನ್ ನ ಬಿಜೆಪಿ ಸಂಸದ ಅನಿಲ್ ಫಿರೋಜಿಯಾ 15,000 ಕೋಟಿ ರೂಪಾಯಿ ಅನುದಾನ ಪಡೆಯುವುದಕ್ಕಾಗಿ 4 ತಿಂಗಳಲ್ಲಿ 15 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ.
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಅನುದಾನಕ್ಕಾಗಿ ತೂಕ ಇಳಿಸಿಕೊಳ್ಳುವ ಚಾಲೆಂಜ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಉಜ್ಜೈನ್ ನ ಬಿಜೆಪಿ ಸಂಸದ ಅನಿಲ್ ಫಿರೋಜಿಯಾ 15,000 ಕೋಟಿ ರೂಪಾಯಿ ಅನುದಾನ ಪಡೆಯುವುದಕ್ಕಾಗಿ 4 ತಿಂಗಳಲ್ಲಿ 15 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ.

ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಫಿರೋಜಿಯಾಗೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗಬೇಕಾದರೆ ತೂಕ ಇಳಿಸಿಕೊಂಡು ಫಿಟ್ ಆಗಿರುವಂತೆ ಹೇಳಿದ್ದರು.
 
ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ್ದ ಗಡ್ಕರಿ, ಪ್ರತಿ ಕೆ.ಜಿ ತೂಕ ಇಳಿಸಿಕೊಳ್ಳುವುದಕ್ಕೆ 1,000 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಫಿರೋಜಿಯಾಗೆ ಭರವಸೆ ನೀಡಿದ್ದರು.
 
ಎಎನ್ಐ ನೊಂದಿಗೆ ಮಾತನಾಡಿರುವ ಫಿರೋಜಿಯಾ, ಪ್ರಧಾನಿ ನರೇಂದ್ರ ಮೋದಿ ಅವರು ಫಿಟ್ ಇಂಡಿಯಾ ಚಳುವಳಿಯನ್ನು ಪ್ರಾರಂಭಿಸಿದ್ದರು, ಗಡ್ಕರಿ ಅವರು ನನಗೆ ಉಜ್ಜೈನ್ ನ ಅಭಿವೃದ್ಧಿಗಾಗಿ ಪ್ರತಿ ಕೆ.ಜಿ ತೂಕ ಇಳಿಸಿಕೊಂಡರೆ, 1,000 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಹೇಳಿದ್ದರು.  ಇದನ್ನು ಚಾಲೆಂಜ್ ಆಗಿ ಸ್ವೀಕರಿಸಿದ ನಾನು ಈ ವರೆಗೂ 15 ಕೆ.ಜಿ ತೂಕ ಇಳಿಸಿಕೊಂಡಿದ್ದೇನೆ. ನಾನು ಇದನ್ನು ಇನ್ನೂ ಇಳಿಸಿಕೊಳ್ಳುತ್ತೇನೆ, ನಂತರ ಅವರಲ್ಲಿ ಭರವಸೆಯ ಪ್ರಕಾರ ಅನುದಾನ ಬಿಡುಗಡೆ ಮಾಡುವಂತೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com