ಪ್ರವಾದಿ ಕುರಿತ ಹೇಳಿಕೆ ವಿವಾದ: ನೂಪುರ್ ಶರ್ಮಾಗೆ ಗೌತಮ್ ಗಂಭೀರ್ ಬೆಂಬಲ

ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ, ದೇಶ- ವಿದೇಶಗಳಲ್ಲಿ ವಿವಾದಕ್ಕೆ ಕಾರಣವಾಗಿರುವ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಮಾಜಿ ಕ್ರಿಕೆಟಿಗ, ರಾಜಕಾರಣಿ ಗೌತಮ್ ಗಂಭೀರ್ ಬೆಂಬಲ ನೀಡಿದ್ದಾರೆ.
ಗೌತಮ್ ಗಂಭೀರ್, ನೂಪುರ್ ಶರ್ಮಾ
ಗೌತಮ್ ಗಂಭೀರ್, ನೂಪುರ್ ಶರ್ಮಾ

ನವದೆಹಲಿ: ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ, ದೇಶ- ವಿದೇಶಗಳಲ್ಲಿ ವಿವಾದಕ್ಕೆ ಕಾರಣವಾಗಿರುವ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಮಾಜಿ ಕ್ರಿಕೆಟಿಗ, ರಾಜಕಾರಣಿ ಗೌತಮ್ ಗಂಭೀರ್ ಬೆಂಬಲ ನೀಡಿದ್ದಾರೆ.

ಈ ಕುರಿತು #LetsTolerateintolerance'' ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಗಂಭೀರ್, ಕ್ಷಮೆಯಾಚಿಸಿದ ಮಹಿಳೆಯ ವಿರುದ್ಧ ದೇಶಾದ್ಯಂತ ದ್ವೇಷ ಮತ್ತು ಕೊಲೆ ಬೆದರಿಕೆ ಮುಂದುವರೆದಿದ್ದರೂ ಜಾತ್ಯತೀತ ಉದಾರವಾದಿಗಳು ಎಂದು ಕರೆಯಲ್ಪಡುವವರು ಮೌನವಾಗಿರುತ್ತಾರೆ ಎಂದು ಹೇಳಿದ್ದಾರೆ.

ಸುಮಾರು 15 ಇಸ್ಲಾಮಿಕ್ ರಾಷ್ಟ್ರಗಳ ಪ್ರತಿಭಟನೆ ನಡುವೆ ಬಿಜೆಪಿ ಕಳೆದ ವಾರ ನೂಪುರ್ ಶರ್ಮಾ ಅವರನ್ನು ಅಮಾನತುಗೊಳಿಸಿತ್ತು ಮತ್ತು ದೆಹಲಿ ಘಟಕದ ಮಾಧ್ಯಮ ಮುಖ್ಯಸ್ಥ ನವೀನ್ ಜಿಂದಾಲ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದೆ.

ಬಿದೆಪಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್ ಕೂಡಾ ಸತ್ಯ ಹೇಳುವುದು ಬಂಡಾಯವಾದರೆ, ನಾನು ಕೂಡಾ ಬಂಡಾಯವೇ'' ಎಂದು ಟ್ವೀಟ್ ಮಾಡುವ ಮೂಲಕ ನೂಪುರ್ ಶರ್ಮಾ ಅವರಿಗೆ ಬೆಂಬಲ ನೀಡಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com