ಬಿಹಾರ: ಪ್ರಾಣಿ ತಪಾಸಣೆಗೆಂದು ಪಶುವೈದ್ಯನ ಅಪಹರಿಸಿ ಬಲವಂತದಿಂದ ಮದುವೆ ಮಾಡಿದ್ರು!

ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಾಣಿಯ ತಪಾಸಣೆಗೆಂದು ಪಶುವೈದ್ಯರನ್ನು ಕರೆಸಿಕೊಂಡ ಮೂವರು, ವೈದ್ಯರನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿರುವ ಘಟನೆ ಬಿಹಾರದ ಬೇಗುಸರಾಯ್‌ನಲ್ಲಿ ಮಂಗಳವಾರ ನಡೆದಿದೆ.
ಬಲವಂತದಿಂದ ಮದುವೆ
ಬಲವಂತದಿಂದ ಮದುವೆ

ಪಾಟ್ನಾ: ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಾಣಿಯ ತಪಾಸಣೆಗೆಂದು ಪಶುವೈದ್ಯರನ್ನು ಕರೆಸಿಕೊಂಡ ಮೂವರು, ವೈದ್ಯರನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿರುವ ಘಟನೆ ಬಿಹಾರದ ಬೇಗುಸರಾಯ್‌ನಲ್ಲಿ ಮಂಗಳವಾರ ನಡೆದಿದೆ.

ಅಸ್ವಸ್ಥ ಪ್ರಾಣಿಯನ್ನು ಪರೀಕ್ಷಿಸಲು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ವೈದ್ಯರನ್ನು ಕರೆಸಿಕೊಳ್ಳಲಾಯಿತು. ನಂತರ ಮೂವರು ಅವರನ್ನು ಅಪಹರಿಸಿದರು. ಮನೆಯಲ್ಲಿ ಎಲ್ಲರೂ ಚಿಂತಿತರಾಗಿ ನಂತರ ನಾವು ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಸಂತ್ರಸ್ತ ಪಶುವೈದ್ಯರ ಕುಟುಂಬಸ್ಥರು ತಿಳಿಸಿದ್ದಾರೆ.

ಪಶುವೈದ್ಯರ ತಂದೆ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ನಾವು ಎಸ್‌ಎಚ್‌ಒ ಮತ್ತು ಇತರ ಅಧಿಕಾರಿಗಳನ್ನು ಕೇಳಿದ್ದೇವೆ. ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಬೇಗುಸರಾಯ್ ಎಸ್‌ಪಿ ಯೋಗೇಂದ್ರ ಕುಮಾರ್ ಹೇಳಿದ್ದಾರೆ.

ವರನ ಅಪಹರಣ ಅಥವಾ ‘ಪಕದ್ವಾ ವಿವಾಹ’ ಎಂಬುದು ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ಭಾಗಗಳಲ್ಲಿ ಸಾಕಷ್ಟು ಸಾಮಾನ್ಯವಾದ ವಿದ್ಯಮಾನವಾಗಿದೆ. ಇದರಲ್ಲಿ ಬ್ರಹ್ಮಚಾರಿಗಳಿಗೆ ಬಂದೂಕು ಹಿಡಿದು ಬೆದರಿಸಿದಾಗ ಅವರು ಬಲವಂತವಾಗಿ ಮದುವೆಯಾಗುತ್ತಾರೆ. ಹೆಚ್ಚಿನ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಹೊಂದಿರುವ ಬ್ಯಾಚುಲರ್ ಗಳನ್ನ ಅಪಹರಿಸಿ ವಧುವಿನ ಕುಟುಂಬದವರು ಬಲವಂತವಾಗಿ ಮದುವೆ ಮಾಡುವ ಘಟನೆಗಳು ಆಗಾಗ ವರದಿಯಾಗುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com