'ನನಗೆ ಭಯವಾಗುತ್ತಿದೆ': ಅಗ್ನಿಪಥ್ ವಿರೋಧಿ ಪ್ರತಿಭಟನೆ ವೇಳೆ ಶಾಲಾ ಬಸ್‌ನಲ್ಲಿ ಸಿಲುಕಿದ್ದ ಬಿಹಾರದ ಬಾಲಕ, ವಿಡಿಯೋ!

ಬಿಹಾರದಲ್ಲಿ ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಯ ವಿರುದ್ಧದ ಪ್ರತಿಭಟನೆಯಿಂದ ಉಂಟಾದ ಟ್ರಾಫಿಕ್ ದಟ್ಟಣೆಯಲ್ಲಿ ಸಿಲುಕಿದ ತನ್ನ ಶಾಲಾ ಬಸ್‌ನಲ್ಲಿ ಆತಂಕದ ನಡುವೆ 'ನನಗೆ ಭಯವಾಗುತ್ತಿದೆ' ಎಂದು ಪುಟ್ಟ ಬಾಲಕ ಗೊಣಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ

ಪಾಟ್ನಾ: ಬಿಹಾರದಲ್ಲಿ ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಯ ವಿರುದ್ಧದ ಪ್ರತಿಭಟನೆಯಿಂದ ಉಂಟಾದ ಟ್ರಾಫಿಕ್ ದಟ್ಟಣೆಯಲ್ಲಿ ಸಿಲುಕಿದ ತನ್ನ ಶಾಲಾ ಬಸ್‌ನಲ್ಲಿ ಆತಂಕದ ನಡುವೆ 'ನನಗೆ ಭಯವಾಗುತ್ತಿದೆ' ಎಂದು ಪುಟ್ಟ ಬಾಲಕ ಗೊಣಗುತ್ತಿರುವ ವಿಡಿಯೋ ವೈರಲ್ ಆಗಿದೆ. 

ಉತ್ತರ ಬಿಹಾರ ಜಿಲ್ಲೆಯ ದರ್ಭಾಂಗಾದವನೆಂದು ಹೇಳಲಾದ ಬಾಲಕನ ವಿಡಿಯೋ ತುಣುಕೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಶಾಲಾ ಬಾಲಕ 'ಡರ್ ಲಗ್ ರಹಾ ಹೈ' ಎಂದು ಹೇಳಿದ್ದಾನೆ. ತನ್ನ ಶರ್ಟಿನ ತುದಿಯಿಂದ ಕಣ್ಣು ಮತ್ತು ಮೂಗನ್ನು ಒರೆಸಿಕೊಂಡು, ಸಿಕ್ಕಿಬಿದ್ದ ಶಾಲಾ ಬಸ್ಸಿನೊಳಗಿನಿಂದ ಪತ್ರಕರ್ತನ ಪ್ರಶ್ನೆಗೆ ಉತ್ತರಿಸುತ್ತಾನೆ.

ಕೆಲ ಹುಡುಗರು ಮತ್ತು ಹುಡುಗಿಯರು, ಎಲ್ಲರೂ ಸಮವಸ್ತ್ರದಲ್ಲಿ ಬಸ್ಸಿನೊಳಗೆ ಕಾಣಿಸುತ್ತಾರೆ. ವೀಡಿಯೊದಲ್ಲಿ ಮಹಿಳೆಯೊಬ್ಬರು, ಬಹುಶಃ ಶಿಕ್ಷಕರು ಅಥವಾ ಪೋಷಕರಿ ಇರಬಹುದು. ಮಕ್ಕಳಿಗೆ ಏನು ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡುತ್ತಾರೆ.

ಎಡಿಜಿ, ಕಾನೂನು ಮತ್ತು ಸುವ್ಯವಸ್ಥೆ, ಸಂಜಯ್ ಸಿಂಗ್ ಪ್ರಕಾರ, ಸಶಸ್ತ್ರ ಪಡೆಗಳಲ್ಲಿ ನೇಮಕಾತಿಯ ಹೊಸ ಯೋಜನೆ ವಿರುದ್ಧ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ 320ಕ್ಕೆ ತಲುಪಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com