ಮಧ್ಯಪ್ರದೇಶ: ಸರ್ಕಾರಿ ನೌಕರನ 3 ಪತ್ನಿಯರು ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧೆ; ಈ ಪೈಕಿ ಇಬ್ಬರು ಎದುರಾಳಿಗಳು! 

ಸರ್ಕಾರಿ ನೌಕರನೋರ್ವನ ಮೂವರು ಪತ್ನಿಯರು ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಿದ್ದು, ಈ ಪೈಕಿ ಇಬ್ಬರು ಪತ್ನಿಯರು ಎದುರಾಳಿಗಳಾಗಿದ್ದಾರೆ. 
ಚುನಾವಣೆಯ (ಸಾಂದರ್ಭಿಕ ಚಿತ್ರ)
ಚುನಾವಣೆಯ (ಸಾಂದರ್ಭಿಕ ಚಿತ್ರ)

ಭೋಪಾಲ್: ಸರ್ಕಾರಿ ನೌಕರನೋರ್ವನ ಮೂವರು ಪತ್ನಿಯರು ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಿದ್ದು, ಈ ಪೈಕಿ ಇಬ್ಬರು ಪತ್ನಿಯರು ಎದುರಾಳಿಗಳಾಗಿದ್ದಾರೆ. 

ಚುನಾವಣೆಗೆ ಸ್ಪರ್ಧಿಸಿರುವವರು ಸಿಂಗ್ರೌಲಿ ಜಿಲ್ಲೆಯ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯ ಪತ್ನಿಯರಾಗಿದ್ದು ಆತನ ವಿರುದ್ಧ ಮಧ್ಯಪ್ರದೇಶದ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ.
 
ತನ್ನ ಮೂರನೇ ಪತ್ನಿಯ ಕುರಿತ ಮಾಹಿತಿಯನ್ನು ಮರೆಮಾಚಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಆತನ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಗ್ರಾಮಪಂಚಾಯ್ತಿ ಮುಖ್ಯಸ್ಥರ ಹುದ್ದೆ (ಸರ್ಪಂಚ್)ಗೆ ಆತನ ಇಬ್ಬರು ಪತ್ನಿಯರು ಪರಸ್ಪರ ಎದುರಾಳಿಗಳಾಗಿದ್ದು, ಪಂಚಾಯ್ತಿಯ ಕಾರ್ಯದರ್ಶಿ ಸುಖ್ ರಾಮ್ ಸಿಂಗ್ ನ್ನು ತಮ್ಮ ಪತಿ ಎಂದು ಇಬ್ಬರೂ ಮಹಿಳೆಯರು ಚುನಾವಣೆಗೆ ಸಲ್ಲಿಸಿರುವ ನಾಮಪತ್ರದಲ್ಲಿ ನಮೂದಿಸಿದ್ದಾರೆ.
 
ಸುಖ್ ರಾಮ್ ಸಿಂಗ್ ನ್ನು ಅಮಾನತುಗೊಳಿಸಿ ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸು ಮಾಡಿ ಜಿಲ್ಲಾ ಪಂಚಾಯತ್ ಸಿಇಒಗೆ ದಿಯೋಸರ್ ಜನಪದ ಪಂಚಾಯತ್ ನ ಸಿಇಒ ವರದಿ ನೀಡಿದ್ದಾರೆ. ಈ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಇಲಾಖೆಯ ಎಲ್ಲಾ ನೌಕರರಿಗೂ ಚುನಾವಣೆಗೆ ಸ್ಪರ್ಧಿಸುತ್ತಿರುವ ತಮ್ಮ ಕುಟುಂಬ ಸದಸ್ಯರು, ಸಂಬಂಧಿಕರ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. 

ಸುಖ್ ರಾಮ್ ಸಿಂಗ್ ತನ್ನ ಇಬ್ಬರು ಪತ್ನಿಯರು ಚುನಾವಣೆಗೆ ಸ್ಪರ್ಧಿಸುತ್ತಿರುವ ಬಗ್ಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ಇಲಾಖೆಗೆ ಮಾಹಿತಿ ನೀಡಿದ್ದರು. ಆದರೆ ಮೂರನೇ ಪತ್ನಿ ಚುನಾವಣೆಗೆ ಸ್ಪರ್ಧಿಸುತ್ತಿದ್ದರ ಬಗ್ಗೆ ಮಾಹಿತಿ ನೀಡಿರಲಿಲ್ಲ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com