
ಸಿಧು ಮೂಸೆವಾಲಾ
ಚಂಡೀಗಡ: ಪ್ರಮುಖ ಬೆಳವಣಿಗೆಯಲ್ಲಿ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಪ್ರಮುಖ ಶೂಟರ್‌ಗಳನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಇದೇ ವೇಳೆ ಇಬ್ಬರು ಆರೋಪಿಗಳಿಂದ ಪೊಲೀಸರು ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಅವರಲ್ಲಿ ಒಬ್ಬರು ಹರಿಯಾಣ ಮೂಲದ ದರೋಡೆಕೋರ ಪ್ರಿಯವ್ರತ್ ಅಲಿಯಾಸ್ ಫೌಜಿ(26) ಹಾಗೂ ಮತ್ತೊಬ್ಬ ಆರೋಪಿ ಕಾಶಿಶ್ ಅಲಿಯಾಸ್ ಕುಲದೀಪ್ (24) ಎಂದು ಗುರುತಿಸಲಾಗಿದೆ.
ಇದನ್ನು ಓದಿ: ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಪಂಜಾಬ್ ಪೊಲೀಸರಿಂದ ಮತ್ತೊಬ್ಬ ಶಂಕಿತನ ಬಂಧನ!
ರಾಮಕರನ್ ಗ್ಯಾಂಗ್ ನ ಸದಸ್ಯನಾಗಿದ್ದ ಈತ ಶಾರ್ಪ್ ಶೂಟರ್ ಆಗಿ ಕೆಲಸ ಮಾಡುತ್ತಿದ್ದ. ಶಾರ್ಪ್ ಶೂಟರ್‌ಗಳನ್ನು ಗುಜರಾತ್‌ನ ಮುಂದ್ರಾದಲ್ಲಿ ಬಂಧಿಸಲಾಗಿದೆ. ಇದಕ್ಕೂ ಮುನ್ನ ಪಂಜಾಬ್ ಪೊಲೀಸರು ಮೇ 29 ರಂದು ನಡೆದ ಸಿಧು ಮೂಸ್ ವಾಲಾ ಹತ್ಯೆಯಲ್ಲಿ ಎಂಟು ಶಾರ್ಪ್ ಶೂಟರ್ ಗಳನ್ನು ಗುರುತಿಸಿದ್ದರು.
ಕಳೆದ ತಿಂಗಳು ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು.