ಮೂರು ಸೇನಾ ಪಡೆಗಳ ಮುಖ್ಯಸ್ಥರೊಂದಿಗೆ ಪ್ರಧಾನಿ ಮೋದಿ ಇಂದು ಮಾತುಕತೆ ಸಾಧ್ಯತೆ
ಕೇಂದ್ರ ಸರ್ಕಾರದ ನೂತನ ಅಗ್ನಿಪಥ್ ಯೋಜನೆ ಅನುಷ್ಠಾನ ಕುರಿತಂತೆ ಕೈಗೊಳ್ಳಲಾಗಿರುವ ಯೋಜನೆಗಳ ಬಗ್ಗೆ ಮೂರು ಸೇನಾಪಡೆಗಳ ಮುಖ್ಯಸ್ಥರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಮಾತುಕತೆ ನಡೆಸುವ ಸಾಧ್ಯತೆಯಿದೆ.
Published: 21st June 2022 10:57 AM | Last Updated: 21st June 2022 01:12 PM | A+A A-

ಪ್ರಧಾನಿ ಮೋದಿ
ನವದೆಹಲಿ: ಕೇಂದ್ರ ಸರ್ಕಾರದ ನೂತನ ಅಗ್ನಿಪಥ್ ಯೋಜನೆ ಅನುಷ್ಠಾನ ಕುರಿತಂತೆ ಕೈಗೊಳ್ಳಲಾಗಿರುವ ಯೋಜನೆಗಳ ಬಗ್ಗೆ ಮೂರು ಸೇನಾಪಡೆಗಳ ಮುಖ್ಯಸ್ಥರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಮಾತುಕತೆ ನಡೆಸುವ ಸಾಧ್ಯತೆಯಿದೆ.
ನೂತನ ಸೇನಾ ನೇಮಕಾತಿ ಯೋಜನೆ ವಿರುದ್ಧ ಅನೇಕ ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆ ಭುಗಿಲೆದ್ದಿರುವಂತೆಯೇ ಈ ಸಭೆ ನಡೆಯುತ್ತಿದೆ. ಯೋಜನೆಯ ಅನುಷ್ಠಾನದ ವಿವಿಧ ಅಂಶಗಳ ಬಗ್ಗೆ ಮುಖ್ಯಸ್ಥರು ಪ್ರಧಾನಿಗೆ ತಿಳಿಸಲಿದ್ದಾರೆ ಎಂದು ತಿಳಿದುಬಂದಿದೆ.
ಪ್ರಧಾನ ಮಂತ್ರಿ ಮತ್ತು ಸೇವಾ ಮುಖ್ಯಸ್ಥರ ನಡುವಿನ ಸಭೆಗಳ ಬಗ್ಗೆ ಯಾವುದೇ ಅಧಿಕೃತ ಮಾತುಗಳಿಲ್ಲ. ಜೂನ್ 14 ರಂದು ಹೊಸ ಮಿಲಿಟರಿ ನೇಮಕಾತಿ ಮಾದರಿ ಘೋಷಿಸಿದ ನಂತರ ದೇಶದ ಹಲವೆಡೆ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿವೆ.
ಅಗ್ನಿಪಥ್ ಯೋಜನೆಯಡಿ ಹದಿನೇಳೂವರೆಯಿಂದ 21 ವರ್ಷದೊಳಗಿನ ಯುವಕರನ್ನು ಕೇವಲ ನಾಲ್ಕು ವರ್ಷಗಳವರೆಗೆ ನೇಮಕಾತಿ ಮಾಡಲು ಒದಗಿಸುತ್ತದೆ ಮತ್ತು ಅವರಲ್ಲಿ ಶೇಕಡಾ 25 ರಷ್ಟನ್ನು ಮಂದಿಯನ್ನು ಮಾತ್ರ 15 ವರ್ಷಗಳವರೆಗೆ ಉಳಿಸಿಕೊಳ್ಳುವ ಅವಕಾಶವಿದೆ. ಕೆಲ ದಿನಗಳ ನಂತರ, ಸರ್ಕಾರವು 2022 ರಲ್ಲಿ ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ವಿಸ್ತರಿಸಿತು.
ಇದನ್ನೂ ಓದಿ: ಅಗ್ನಿಪಥ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ಸೇನೆ; ಜುಲೈನಲ್ಲಿ ಆನ್‌ಲೈನ್ ನೋಂದಣಿ ಆರಂಭ
ಹೊಸ ಯೋಜನೆಯಡಿ ನೇಮಕಗೊಳ್ಳುವ ಸಿಬ್ಬಂದಿಯನ್ನು 'ಅಗ್ನಿವೀರ್‌ಗಳು' ಎಂದು ಕರೆಯಲಾಗುತ್ತದೆ. ಹಲವಾರು ವಿರೋಧ ಪಕ್ಷಗಳು ಮತ್ತು ಮಿಲಿಟರಿ ಪರಿಣತರು ನಾಲ್ಕು ವರ್ಷಗಳ ಅವಧಿಯ ನೇಮಕಾತಿಯನ್ನು ಟೀಕಿಸಿದ್ದಾರೆ. ಸರ್ಕಾರವು ಯೋಜನೆಯನ್ನು ಬಲವಾಗಿ ಸಮರ್ಥಿಸಿಕೊಂಡಿದೆ, ಸಶಸ್ತ್ರ ಪಡೆಗಳಿಗೆ ನೇಮಕಾತಿಗಾಗಿ "ಪರಿವರ್ತನೆಯ ಸುಧಾರಣಾ" ಕ್ರಮವು ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಯುವಜನರಿಗೆ ಅವಕಾಶವನ್ನು ನೀಡುತ್ತದೆ ಎಂದು ಹೇಳಿದೆ.