ನ್ಯಾಷನಲ್ ಹೆರಾಲ್ಡ್ ಕೇಸ್: ಸತತ 10 ಗಂಟೆಗಳ ವಿಚಾರಣೆ ಬಳಿಕ ಇಡಿ ಕಚೇರಿಯಿಂದ ತೆರಳಿದ ರಾಹುಲ್ ಗಾಂಧಿ

ನ್ಯಾಷನಲ್ ಹೆರಾಲ್ಡ್ ಕೇಸ್ ನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ 5ನೇ ದಿನ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ವಿಚಾರಣೆಗೊಳಪಟ್ಟಿದ್ದ ರಾಹುಲ್ ಗಾಂಧಿ ವಿಚಾರಣೆ ಪೂರ್ಣಗೊಳಿಸಿ ಮನೆಯತ್ತ ಹೊರಟಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಕೇಸ್ ನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ 5ನೇ ದಿನ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ವಿಚಾರಣೆಗೊಳಪಟ್ಟಿದ್ದ ರಾಹುಲ್ ಗಾಂಧಿ ವಿಚಾರಣೆ ಪೂರ್ಣಗೊಳಿಸಿ ಮನೆಯತ್ತ ಹೊರಟಿದ್ದಾರೆ.

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರನ್ನು ಐದನೇ ದಿನವಾದ ಮಂಗಳವಾರ ಜಾರಿ ನಿರ್ದೇಶನಾಲಯವು ಸತತ 10 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿತು. ಆ ಮೂಲಕ ರಾಹುಲ್ ಗಾಂಧಿ ಸತತ 5 ದಿನಗಳಲ್ಲಿ 50 ಗಂಟೆಗಳ ಕಾಲ ವಿಚಾರಣೆ ಎದುರಿಸಿದಂತಾಗಿದೆ. ಈ ವೇಳೆ ತನಿಖಾಧಿಕಾರಿಗಳು ಹಲವು ಸೆಷನ್‌ಗಳಲ್ಲಿ ಪ್ರಶ್ನಿಸಿದ್ದಾರೆ. 

ಬೆಳಗ್ಗೆ ಆರಂಭವಾದ ವಿಚಾರಣೆ ರಾತ್ರಿ 8 ಗಂಟೆವರೆಗೂ ನಡೆದಿತ್ತು. ಈ ವೇಳೆ ಅರ್ಧ ಗಂಟೆ ವಿರಾಮ ತೆಗೆದುಕೊಂಡು ಮತ್ತೆ 11.30ಕ್ಕೆ ಆರಂಭವಾದ ವಿಚಾರಣೆಗೆ ಮತ್ತೆ ಹಾಜರಾದರು. ಈ ವೇಳೆ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ರಾಹುಲ್ ಗಾಂಧಿ ತಮ್ಮ ಹೇಳಿಕೆಯನ್ನು ದಾಖಲಿಸಿದರು.

ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 5ನೇ ಬಾರಿ ಇ.ಡಿ ವಿಚಾರಣೆಗೆ ಹಾಜರು
 
ಮೂಲಗಳ ಪ್ರಕಾರ ಪ್ರಕರಣದ ವಿವಿಧ ಅಂಶಗಳ ಕುರಿತು ಅವರ ಹೇಳಿಕೆಯ ದಾಖಲಾತಿ ಅಂತಿಮ ಹಂತವನ್ನು ತಲುಪುತ್ತಿದೆ ಮತ್ತು ಅಂತಿಮವಾಗಿ ಕಾಂಗ್ರೆಸ್ ನಾಯಕರು ಪ್ರತಿ A4 ಗಾತ್ರದ ಕಾಗದದ ಮೇಲೆ ತಮ್ಮ ಸಹಿಯೊಂದಿಗೆ ತಮ್ಮ ಹೇಳಿಕೆಯನ್ನು ಸಲ್ಲಿಸಿದ ನಂತರ, ಜೂನ್ 13 ರಂದು ಪ್ರಾರಂಭವಾಗುವ ಅಧಿವೇಶನಗಳು ಕೊನೆಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

ಕಳೆದ ವಾರ ಸತತ ಮೂರು ದಿನಗಳ ಕಾಲ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಸೋಮವಾರದ ವಿಚಾರಣೆ ಬಳಿಕ ಮತ್ತೆ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಸೂಚಿಸಲಾಗಿತ್ತು. ಸೋಮವಾರ ಮಧ್ಯರಾತ್ರಿಯ ನಂತರ ಗಾಂಧಿ ಅವರು ಏಜೆನ್ಸಿ ಕಚೇರಿಯಿಂದ ಹೊರಟು ಮತ್ತೆ ಮಂಗಳವಾರ ವಿಚಾರಣೆಗೆ ಹಾಜರಾಗಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com